twitter
    For Quick Alerts
    ALLOW NOTIFICATIONS  
    For Daily Alerts

    ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ ಅವಾಂತರ: ಏಕ್ತಾ ಕಪೂರ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    |

    ಇತ್ತೀಚಿಗೆ ಚಿತ್ರಮಂದಿರಗಳು ಟಿವಿಗಳಿಗಿಂತ ಓಟಿಟಿಗಳೆ ಹೆಚ್ಚಿನ ಪ್ರಾಬಲ್ಯ ಕಾಯ್ದುಕೊಳ್ಳುತ್ತಿದೆ. ಪ್ರೇಕ್ಷಕರೂ ಕೂಡ ಇತ್ತೀಚಿಗೆ ಮನೋರಂಜನೆಗಾಗಿ ಓಟಿಟಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಜನಪ್ರಿಯತೆ ಪಡೆಯದ ಅನೇಕ ಚಿತ್ರಗಳು ಓಟಿಟಿನಲ್ಲಿ ಹಿಟ್‌ ಆಗುತ್ತಿದೆ. ಇನ್ನೂ ಕೆಲವು ಸಿನಿಮಾಗಳು ಓಟಿಟಿನಲ್ಲೇ ತೆರೆ ಕಾಣುತ್ತಿವೆ.

    ಟಿಟಿ ವೆಬ್‌ ಸೀರಿಸ್‌ಗಳಿಗೆ ಅತ್ಯುತ್ತಮ ವೇದಿಕೆಯಾಗಿದ್ದು, ಸೆನ್ಸಾರ್‌ ಹಂಗಿಲ್ಲದೇ ಅನೇಕ ವೆಬ್‌ ಸೀರಿಸ್‌ಗಳು ತೆರೆ ಕಾಣುತ್ತಿವೆ. ಇದರಲ್ಲಿ ಒಂದಿಷ್ಟು ಉತ್ತಮವಾಗಿದ್ದರೆ, ಇನ್ನೂ ಒಂದಿಷ್ಟು ವೆಬ್ ಸೀರಿಸ್‌ಗಳ ವಿರುದ್ಧ ಜನ ಅಸಮಾಧಾನ ಹೊರಹಾಕುತ್ತಿದ್ದಾರೆ. ತುಂಬಾ ಬೋಲ್ಟ್‌ ಆದ ಕಟೆಂಟ್‌ಗಳನ್ನು ಸಹ ಓಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಪ್ರೇಕ್ಷಕರಿಗೆ ಮುಜುಗರ ಎನ್ನುವ ಸನ್ನಿವೇಶಗಳನ್ನು ಸಹ ತೋರಿಸಲಾಗುತ್ತಿದೆ. ಇದೇ ರೀತಿ ಬೋಲ್ಡ್‌ ಕಂಟೆಂಟ್‌ಗಳನ್ನು ತಮ್ಮ ವೆಬ್‌ ಸೀರಿಸ್‌ನಲ್ಲಿ ತೋರಿಸಿದಕ್ಕಾಗಿ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ.

    ಜೇಮ್ಸ್ ಬಾಂಡ್ ಜೊತೆ ನಟಿಸಿದ್ದ ಕಿರಣ್ ಬೇಡಿ ಸ್ಯಾಂಡಲ್‌ವುಡ್ ಎಂಟ್ರಿ!ಜೇಮ್ಸ್ ಬಾಂಡ್ ಜೊತೆ ನಟಿಸಿದ್ದ ಕಿರಣ್ ಬೇಡಿ ಸ್ಯಾಂಡಲ್‌ವುಡ್ ಎಂಟ್ರಿ!

    ಆಲ್ಟ್‌ ಬಾಲಾಜಿ ಸಂಸ್ಥೆಯ ಮಾಲಕಿಯಾಗಿರುವ ಏಕ್ತಾ ಕಪೂರ್‌ ತಮ್ಮ ಬ್ಯಾನರ್‌ನಡಿಯಲ್ಲಿ ಅನೇಕ ಸಿನಿಮಾ, ಧಾರಾವಾಹಿಗಳನ್ನು ಹಾಗೂ ಕಿರುತೆರೆ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿದ್ದರು. ಅನೇಕ ಕಲಾವಿದರಿಗೆ ಕೆಲಸ ಕೊಟ್ಟಿದ್ದಾರೆ. ಇದೀಗ ಆಲ್ಟ್‌ ಬಾಲಾಜಿ ಸಂಸ್ಥೆಯಿಂದ ನಿರಂತರವಾಗಿ ವೆಬ್‌ ಸೀರಿಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಏಕ್ತಾ ಕಪೂರ್‌ ನಿರ್ಮಾಣದಲ್ಲಿ ಬರುವ ವೆಬ್‌ ಸರಣಿಗಳಲ್ಲಿ ಬೋಲ್ಡ್‌ ದೃಶ್ಯಗಳೇ ಹೆಚ್ಚಾಗಿರುತ್ತದೆ ಎಂದು ಪ್ರೇಕ್ಷಕರು ಅನೇಕ ಬಾರಿ ಅಸಮಾಧಾನ ಹೊರಹಾಕಿದ್ದರು. ಇದೀಗ ವೆಬ್‌ ಸರಣಿಯಲ್ಲಿರುವ ಒಂದು ದೃಶ್ಯದಿಂದ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್‌ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ.

    Arrest Warrant Isuue Against Producer Ekta Kapoor

    ಏಕ್ತಾ ಕಪೂರ್‌ ಅವರ ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ನಲ್ಲಿ ಸೈನಿಕರ ಪತ್ನಿಗೆ ಅವಮಾನ ಮಾಡಲಾಗಿದೆ ಎಂದು ಬಿಹಾರದ ಬೆಗುಸರೈ ನಿವಾಸಿಯಾಗಿರುವ ಮಾಜಿ ಸೈನಿಕ ಶಂಭು ಕುಮಾರ್ ದೂರು ದಾಖಲಿಸಿದ್ದರು. ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ನಲ್ಲಿ ಸೈನಿಕರ ಪತ್ನಿಯನ್ನು ಅವಮಾನಿಸಲಾಗಿದ್ದು, ಈ ಮೂಲಕ ಸೈನಿಕರ ಕುಟುಂಬದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ವೆಬ್‌ ಸರಣಿಯಲ್ಲಿ ಸೈನಿಕರ ಪತ್ನಿಯರ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ಹಾಕಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್​ ವಿರುದ್ಧ ಸಮನ್ಸ್​ ಜಾರಿ ಮಾಡಲಾಗಿತ್ತು. ಕೋರ್ಟ್ ವಿಚಾರಣೆಗೆ ಹಾಜರಾಗಿ ಉತ್ತರಿಸುವಂತೆ ತಿಳಿಸಲಾಗಿತ್ತು. ಆದರೆ ವಿರೋಧ ವ್ಯಕ್ತವಾದ ಬಳಿಕ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲಾಗಿದೆ ಎಂದು ಏಕ್ತಾ ಕಪೂರ್​ ಹಾಗೂ ಶೋಭಾ ಕಪೂರ್​ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರದ ಬೆಗುಸರೈನ ನ್ಯಾಯಾಲಯವು ಏಕ್ತಾ ಕಪೂರ್‌ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದೆ.

    ಇನ್ನು ಏಕ್ತಾ ಕಪೂರ್ ಒಡೆತನದ ಆಲ್ಟ್‌ ಬಾಲಾಜಿ ಸಂಸ್ಥೆಯ ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ ​ 2018ರಲ್ಲಿ ಪ್ರಸಾರಗೊಂಡಿತು. ಒಂದಿಷ್ಟು ಇಂಟ್ರಸ್ಟಿಂಗ್‌ ಎನ್ನುವ ವಿಚಾರಗಳನ್ನು ಹೊಂದಿದ್ದರಿಂದ ಮೊದಲ ಸೀರಿಸ್‌ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಯಿತು. ಬಳಿಕ ಮತ್ತೆ 2020 ಜನವರಿಯಲ್ಲಿ ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ನ ಎರಡನೇ ಸೀಜನ್‌ ಬಿಡುಗಡೆ ಮಾಡಲಾಯಿತು. ಎಕ್ಸ್‌ಎಕ್ಸ್‌ಎಕ್ಸ್‌ ವೆಬ್‌ ಸೀರಿಸ್‌ನಲ್ಲಿ ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳ ಮೇಲೆ ಕತೆ ನಡೆಯುತ್ತಿದ್ದು, ಬೋಲ್ಡ್‌ ದೃಶ್ಯಗಳನ್ನು ಸಹ ತೋರಿಸಲಾಗಿತ್ತು ಎನ್ನುವ ಆರೋಪ ಸಹ ಕೇಳಿಬಂದಿದೆ.

    English summary
    Arrest warrant against producer Ekta Kapoor and her Mother over web series.
    Thursday, September 29, 2022, 10:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X