ಅನುಷ್ಕಾ ಬಾಯಿಂದ ಬಂದ ಮಾತುಗಳು ಕಸಕ್ಕಿಂತ ಕೀಳು ಎಂದ 'ಆ' ಶ್ರೀಮಂತ.!

By Harshitha

ಅನುಷ್ಕಾ ಶರ್ಮಾ ಬಾಲಿವುಡ್ ನಟಿ... ಇನ್ನೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್. ಇಡೀ ಭಾರತದಲ್ಲಿ ಈ ಜೋಡಿಯನ್ನ ಗೊತ್ತಿಲ್ಲ ಎನ್ನುವವರು ಯಾರೂ ಇಲ್ಲ. ಸೋಷಿಯಲ್ ಮೀಡಿಯಾದಲ್ಲೇ ಈ ದಂಪತಿ ಕೋಟ್ಯಾಂತರ ಫಾಲೋವರ್ಸ್ ಹೊಂದಿದ್ದಾರೆ.

ಹಾಗಂದ ಮಾತ್ರಕ್ಕೆ, ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ ಅಂದುಕೊಳ್ಳಬೇಡಿ. ತಂಟೆಗೆ ಬಂದ್ರೆ ಸೆಲೆಬ್ರಿಟಿ ಅನ್ನೋದನ್ನೂ ಕೇರ್ ಮಾಡದೆ ತರಾಟೆಗೆ ತೆಗೆದುಕೊಳ್ಳುವವರೂ ಇದ್ದಾರೆ. ಅದಕ್ಕೆ 'ಕಸದ ಕಿತ್ತಾಟ'ವೇ ಉತ್ತಮ ನಿದರ್ಶನ.

ಐಷಾರಾಮಿ ಕಾರಿನಿಂದ ಪ್ಲಾಸ್ಟಿಕ್ ಎಸೆದ ಶ್ರೀಮಂತ ವ್ಯಕ್ತಿಗೆ ನಟಿ ಅನುಷ್ಕಾ ಶರ್ಮಾ ಬಿಸಿ ಮುಟ್ಟಿಸಿದ ವಿಡಿಯೋನ ನೀವೆಲ್ಲರೂ ನೋಡಿರಬಹುದು. ಹಾಗೆ ಅನುಷ್ಕಾ ಶರ್ಮಾ ರಿಂದ 'ಪ್ಲಾಸ್ಟಿಕ್ ಪಾಠ' ಕಲಿತ ಶ್ರೀಮಂತ ಸದ್ಯ ಸುಮ್ಮನೆ ಕೂತಿಲ್ಲ. ಅನುಷ್ಕಾ ವಿಡಿಯೋನ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ಮೇಲೆ, 'ಆ' ಶ್ರೀಮಂತ ವ್ಯಕ್ತಿ ಹಾಗೂ ಆತನ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಸಿಡಿದೆದ್ದಿದ್ದಾರೆ.

''ಇದು ಚೀಪ್ ಪಬ್ಲಿಸಿಟಿ ಸ್ಟಂಟ್. ಕಾರಿನಿಂದ ಎಸೆದ ಕಸಕ್ಕಿಂತ ಅನುಷ್ಕಾ ಬಾಯಿಂದ ಮಾತುಗಳು ಕಸಕ್ಕಿಂತ ಕೀಳು'' ಎಂದು ಅರ್ಹಾನ್ ಸಿಂಗ್ ಎಂಬ ಹೆಸರಿನ 'ಆ' ಶ್ರೀಮಂತ ವ್ಯಕ್ತಿ ಹಾಗೂ ಆತನ ತಾಯಿ ಗೀತಾಂಜಲಿ ಎಲಿಜಬೆತ್ ಇನ್ಸ್ಟಾಗ್ರಾಮ್ ನಲ್ಲಿ ತಿರುಗೇಟು ನೀಡಿದ್ದಾರೆ. ಮುಂದೆ ಓದಿರಿ...

ಇದು ಕಳಪೆ ಕಾರ್ಯ

ಇದು ಕಳಪೆ ಕಾರ್ಯ

''ಸ್ವಚ್ಛತೆಯ ಹೆಸರಿನಲ್ಲಿ ನೀವು ಮಾಡಿದ ಕಳಪೆ ಕಾರ್ಯಕ್ಕೆ ನಮಗೆ ಬೇಡದ ಪಬ್ಲಿಸಿಟಿ ಸಿಗುತ್ತಿದೆ. ನಿಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್ ಗಾಗಿ ವಿಡಿಯೋ ಪೋಸ್ಟ್ ಮಾಡಿ ನಮ್ಮ ಪ್ರೈವಸಿಗೆ ಧಕ್ಕೆ ತಂದಿದ್ದೀರಿ. ವಿಡಿಯೋದಲ್ಲಿ ನನ್ನ ಮಗನಿಗೆ ಅವಮಾನ ಮಾಡಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ನೀವು ಏನೇ ಆಗಿರಬಹುದು. ನಿಮಗೆ ಲಕ್ಷಾಂತರ ಹಿಂಬಾಲಕರು ಇರಬಹುದು. ನಿಮ್ಮ ಹಿಂದೆ ಪಿ.ಆರ್ ಕೆಲಸ ಮಾಡುತ್ತಿರಬಹುದು. ಈ ತರಹ ಅಭಿಯಾನ ಮಾಡಲು ನಿಮಗೆ ದುಡ್ಡು ಸಿಗಬಹುದು ಅಥವಾ ಇದು ಚೀಪ್ ಪಬ್ಲಿಸಿಟಿ ಆಗಿರಬಹುದು. ಮುಖವನ್ನು ಬ್ಲರ್ ಮಾಡದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ನನ್ನ ಮಗನನ್ನು ಅವಮಾನಿಸಿದ್ದೀರಿ. ಅಲ್ಲದೇ, ಬೇಡದ ಹಗೆತನವನ್ನು ಸಾಧಿಸಿದ್ದೀರಿ. ಅಷ್ಟಕ್ಕೂ, ನನ್ನ ಮಗ ಹಾಗೆ ಮಾಡಿದ್ದಾನೆ ಅನ್ನೋದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ.? ಅನ್ನೋದು ಒಬ್ಬ ತಾಯಿಯಾಗಿ ನಾನು ಕೇಳುವ ಪ್ರಶ್ನೆ'' ಎಂದು 'ಆ' ಶ್ರೀಮಂತ ವ್ಯಕ್ತಿಯ ತಾಯಿ ಗೀತಾಂಜಲಿ ಎಲಿಜಬೆತ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ನಿಮಗೆ ಎಷ್ಟು ಧೈರ್ಯ

ನಿಮಗೆ ಎಷ್ಟು ಧೈರ್ಯ

''ನನಗೆ ನನ್ನ ಮಗನ ಸುರಕ್ಷತೆ ಮುಖ್ಯ. ಇನ್ನೊಬ್ಬರ ಇಮೇಜ್ ಹಾಳು ಮಾಡಲು ನಿಮಗೆ ಎಷ್ಟು ಧೈರ್ಯ.? ಸ್ವಚ್ಛತೆ ಬಗ್ಗೆ ನಿಜವಾಗಿಯೂ ನಿಮ್ಮಿಬ್ಬರಿಗೂ ಕಾಳಜಿ ಇದ್ದಿದ್ದರೆ, ನೀವು ವಾಸಿಸುವ ಮನೆಯ ಮುಂದಿರುವ ರಸ್ತೆಯಲ್ಲಿ ಬಿದ್ದಿರುವ ಕಸದ ಬಗ್ಗೆ ಮೊದಲು ಗಮನ ಹರಿಸಿ'' - ಗೀತಾಂಜಲಿ ಎಲಿಜಬೆತ್

ರಸ್ತೆ ಮೇಲೆ ಎಲ್ಲರೂ ನಾಗರೀಕರು

ರಸ್ತೆ ಮೇಲೆ ಎಲ್ಲರೂ ನಾಗರೀಕರು

''ಮನೆಯಲ್ಲಿ, ತೆರೆಯ ಮೇಲೆ, ನಿಮ್ಮ ಕ್ಷೇತ್ರದಲ್ಲಿ ನೀವು ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯೇ ಇರಬಹುದು. ಆದ್ರೆ, ರಸ್ತೆ ಮೇಲೆ ಎಲ್ಲರೂ ನಾಗರೀಕರು. ಇನ್ನೊಬ್ಬರ ತಪ್ಪನ್ನು ತಿದ್ದಬೇಕು ಅಂದ್ರೆ ಒಳ್ಳೆಯ ರೀತಿಯಲ್ಲಿ ತಿದ್ದಿ. ಕರ್ಮ ಬಗ್ಗೆ ಭಯ ಇರಲಿ'' - ಗೀತಾಂಜಲಿ ಎಲಿಜಬೆತ್

ಸ್ಟಾರ್ ಗಿರಿ ಕಮ್ಮಿ ಆಗುತ್ತಿರಲಿಲ್ಲ

ಸ್ಟಾರ್ ಗಿರಿ ಕಮ್ಮಿ ಆಗುತ್ತಿರಲಿಲ್ಲ

''ನಾನು ನನ್ನ ಬೇಜವಾಬ್ದಾರಿತನಕ್ಕೆ ಕ್ಷಮೆ ಕೇಳಿದೆ. ಆದ್ರೆ, ಮಿಸಸ್ ಅನುಷ್ಕಾ ಶರ್ಮಾ ಕೊಹ್ಲಿ ಮಾತುಗಳಲ್ಲಿ ಕೊಂಚ ವಿಧೇಯತೆ ಇದ್ದಿದ್ದರೆ ಆಕೆಯ ಸ್ಟಾರ್ ಗಿರಿ ಕಮ್ಮಿ ಆಗುತ್ತಿರಲಿಲ್ಲ'' ಎಂದು ಅರ್ಹಾನ್ ಸಿಂಗ್ ಎಂಬ ಹೆಸರಿನ 'ಆ' ಶ್ರೀಮಂತ ವ್ಯಕ್ತಿ, ಐಷಾರಾಮಿ ಕಾರಿನ ಒಡೆಯ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಕಸಕ್ಕಿಂತ ಕೀಳು

ಕಸಕ್ಕಿಂತ ಕೀಳು

''ನನ್ನ ಐಶಾರಾಮಿ ಕಾರಿನಿಂದ ಕಸ ಮಿಸ್ಟೇಕ್ ಆಗಿ ಹೊರಬಿತ್ತು. ಆದ್ರೆ, ನಿಮ್ಮ ಐಶಾರಾಮಿ ಕಾರಿನ ಕಿಟಕಿಯಿಂದ ಮುಖ ಹೊರಗಿಟ್ಟು ನೀವು ಆಡಿದ ಮಾತುಗಳು ಕಸಕ್ಕಿಂತ ಕೀಳಾಗಿತ್ತು'' - ಅರ್ಹಾನ್ ಸಿಂಗ್

More from Filmibeat

English summary
Arrhan Singh and his mother Gittanjali hits back at Anushka Sharma and Virat Kohli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X