ಮನೆ ಕೆಲಸದಾಳು ನನ್ನ ಮೇಲೆ ಬಲತ್ಕಾರ*ಕ್ಕೆ ಯತ್ನಿಸಿದ್ದ.. 2ನೇ ಮಹಡಿಯಿಂದ ಜಿಗಿದುಬಿಟ್ಟೆ
ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸಾಕಷ್ಟು ಕಹಿ ಅನುಭವಗಳಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಎದುರಾಗುವ ದೈಹಿಕ ದೌರ್ಜನ್ಯದಂತಹ ವಿಚಾರಗಳು ಜೀವನಪೂರ್ತಿ ಕಹಿ ಕನಸಾಗಿ ಉಳಿದುಬಿಡುತ್ತದೆ. ಸಾಕಷ್ಟು ನಟಿಯರು ತಮ್ಮ ಜೀವನದಲ್ಲಿ ಎದುರಿಸಿದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಇವತ್ತಿಗೂ ತಮಗಾಗಿದ್ದ ಕಹಿ ಅನುಭವ ಹೇಳಲು ಸಾಧ್ಯವಾಗದೇ ನರಳುವವರು, ಇವತ್ತಿಗೂ ಕಿರುಕುಳ ಅನುಭವಿಸುವವರು ಇದ್ದಾರೆ.
ಬಿಗ್‌ಬಾಸ್ ಹಿಂದಿ ಸೀಸನ್-13ರ ಸ್ಪರ್ಧಿ ಆರತಿ ಸಿಂಗ್ ತಮ್ಮ ಜೀವನದಲ್ಲಿ ಎದುರಾಗಿದ್ದ ನೋವಿನ ಘಟನೆಯನ್ನು ಬಿಗ್‌ಬಾಸ್ ಮನೆಯಲ್ಲಿ ತೆರೆದಿಟ್ಟಿದ್ದರು. 6 ವರ್ಷಗಳ ಹಿಂದೆ ಬಿಗ್‌ಬಾಸ್ ಶೋನಲ್ಲಿ 'ಚಪಾಕ್' ಚಿತ್ರದ ಪ್ರಚಾರಕ್ಕಾಗಿ ದೀಪಿಕಾ ಪಡುಕೋಣೆ ಹಾಗೂ ಲಕ್ಷ್ಮಿ ಅಗರ್‌ವಾಲ್ ಮನೆ ಒಳಗೆ ಹೋಗಿದ್ದರು. ಆಗ ಸ್ಪರ್ಧಿಗಳು ಒಬ್ಬೊಬ್ಬರಾಗಿ ತಮ್ಮ ಜೀವನದ ಕರಾಳ ಘಟನೆಗಳನ್ನು ಹೇಳಿಕೊಂಡಿದ್ದರು.

ಆರತಿ ಸಿಂಗ್ ಆ ಕಹಿ ಘಟನೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ. Hauterrfly ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 13ನೇ ವರ್ಷ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನನ್ನ ಮೇಲೆ ಬಲತ್ಕಾರಕ್ಕೆ ಮುಂದಾಗಿದ್ದ, ಹೇಗೋ ಬಚಾವಾಗಿದ್ದೆ ಎಂದು ಆರತಿ ಹೇಳಿ ಭಾವುಕರಾಗಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ಮಾತನಾಡಿ "ನನಗಾಗ 13 ವರ್ಷ ವಯಸ್ಸು.. ಆ ವ್ಯಕ್ತಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ನಾನು ರೂಮ್‌ನಲ್ಲಿ ಮಲಗಿದ್ದೆ. ಅಲ್ಲಿಗೆ ಬಂದ. ನಾನು ಕೈ ಮುಗಿದು ಬೇಡಿಕೊಂಡೆ.. ನೀನು ನನ್ನ ಅಣ್ಣನ ಸಮಾನ.. ನನಗೆ ಆಗ ಇನ್ನು 13 ವರ್ಷ.. ನಾನು ತಪ್ಪಿಸಿಕೊಳ್ಳಲು ಓಡಿ ಹೋಗಿ ಬಿದ್ದುಬಿಟ್ಟೆ.. ಬಾಗಿಲು ಬಂದ್ ಆಗಿತ್ತು.. ಅದು ಬೇಸಿಗೆ ಕಾಲ.. ಅಮ್ಮ ತೋಟಕ್ಕೆ ಹೋಗಿದ್ರು.. ಮನೆಯಲ್ಲಿ ನಾನು ಒಬ್ಬಳೇ ಇದ್ದೆ. ಅದು ಬಹಳ ಭಯಾನಕ ಸನ್ನಿವೇಶ.. ಯಾರು ಊಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
ಅಲ್ಲಿಂದ ನಿಧಾನವಾಗಿ ಮೇಲಕ್ಕೆ ಏರಿದೆ.. 2ನೇ ಮಹಡಿಯಿಂದ ಕೆಳಗೆ ಜಿಗಿದುಬಿಟ್ಟೆ.. ನಾನು ಬಹಳ ಸ್ಟ್ರಾಂಗ್ ಆಗಿ ಇದ್ದೆ. ಹಾಗಾಗಿ ಏನು ಆಗಲಿಲ್ಲ.. ಬಿಗ್‌ಬಾಸ್ ಶೋಗೆ ಹೋಗುವ ಮುನ್ನ ಯಾವತ್ತೂ ಈ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಹೇಳುವಂತಾಯಿತು. ಸಿಂಪತಿಗಾಗಿ ಹೇಳಲಿಲ್ಲ.. ಸನ್ನಿವೇಶಕ್ಕೆ ತಕ್ಕಂತೆ ನಾವು ಮನದಾಳದ ಮಾತುಗಳನ್ನು ಅಂದು ಹೇಳುವಂತಾಗಿತ್ತು ಎಂದು ತಿಳಿಸಿದ್ದಾರೆ.
ಅತ್ಯಾಚಾ*ರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು.. ಅಪರಾಧಿ ಅಪ್ರಾಪ್ತ ಎನ್ನುವ ಕಾರಣಕ್ಕೆ ಶಿಕ್ಷೆ ವಿಧಿಸದೇ ಇರುವುದು ತಪ್ಪು.. ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ, ಕೊಲ್ಲು*ತ್ತಾರೆ ಅಂತಹವರಿಗೆ ಶಿಕ್ಷೆ ಯಾಕಿಲ್ಲ ಎಂದು ಆರತಿ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











