For Quick Alerts
  ALLOW NOTIFICATIONS  
  For Daily Alerts

  ನಟಿ ಆರ್ಯ ಬ್ಯಾನರ್ಜಿ ನಿಗೂಢ ಸಾವು; ಮರಣೋತ್ತರ ಪರೀಕ್ಷೆಯಲ್ಲಿ ರಹಸ್ಯ ಬಯಲು

  |

  ಬೆಂಗಾಲಿ ಮೂಲದ ಬಾಲಿವುಡ್ ನಟಿ ಆರ್ಯ ಬ್ಯಾನರ್ಜಿ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಶುಕ್ರವಾರ ( ಡಿ.12) ಶವವಾಗಿ ಪತ್ತೆಯಾಗಿದ್ದರು. ಅನುಮಾನಾಸ್ಪದ ಸಾವಿನ ಹಿಂದಿನ ರಹಸ್ಯವೇನು ಎಂದು ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

  33 ವರ್ಷದ ನಟಿ ಆರ್ಯ ತನ್ನ ಆಪಾರ್ಟ್ಮೆಂಟ್ ನ ಬೆಡ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ರಕ್ತದ ಮಡುವಿನಲ್ಲಿ ಆರ್ಯ ಶವಕಂಡುಬಂದಿತ್ತು. ಮನೆ ಕೆಲಸದವರು ಆರ್ಯ ಮನೆಗೆ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಪೊಲೀಸರು ಬಾಗಿಲು ತೆರೆದಾಗ ಆರ್ಯ ಶವವಾಗಿ ಬಿದ್ದಿದ್ದರು ಎಂದು ವರದಿಯಾಗಿತ್ತು.

  ಶವವಾಗಿ ಪತ್ತೆಯಾದ 'ಡರ್ಟಿ ಪಿಕ್ಚರ್' ಖ್ಯಾತಿಯ ನಟಿ ಆರ್ಯ

  ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ನಟಿ ಆರ್ಯ ಅವರದ್ದು ಕೊಲೆ ಅಥವಾ ಆತ್ಮಹತ್ಯೆ ಎರಡೂ ಅಲ್ಲ ಎಂದು ತಿಳಿದುಬಂದಿದೆ. ಯಕೃತ್ತಿನ ಸಿರೋಸಿಸ್ ನಿಂದ ಬಳಲುತ್ತಿದ್ದ ಅವರು, ವಿಪರೀತವಾಗಿ ಆಲ್ಕೋಹಾಲ್ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿದೆ ಎಂದು ಕೋಲ್ಕಿತ್ತಾ ಪೊಲೀಸ್ ಜಂಟಿ ಆಯುಕ್ತ ಮುರಳೀಧ ಶರ್ಮಾ ತಿಳಿಸಿದ್ದಾರೆ.

  ಆರ್ಯ ವಿಪರೀತ ಕುಡಿಯುತ್ತಿದ್ದರು ಎಂದು ತಿಳಿದುಬಂದಿದೆ. ಆರ್ಯ ರೂಮಿನಲ್ಲಿ ಸಾಕಷ್ಟು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇವರು ಖಿನ್ನತೆಯಿಂದನೂ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಆರ್ಯ ಕೊಲ್ಕತ್ತಾದ ಜೋಧ್ಪುರ ಉದ್ಯಾನವನದಲ್ಲಿ ತನ್ನ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಆನೇ ಲೈನ್ ನಲ್ಲಿ ಊಟ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದರು. ಊಟದ ಬಳಿಕ ಆರ್ಯ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

  ಬಲವಂತದಿಂದ ಸಂಜನಾ ಮತಾಂತರ ಆಗಿದ್ಯಂತೆ..? | Sanjanna Galrani | Filmibeat Kannada

  ಆರ್ಯ 2010ರಲ್ಲಿ ಲವ್ ಸೆಕ್ಸ್ ಧೋಖ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ವಿದ್ಯಾ ಬಾಲನ್ ನಟನೆಯ ದಿ ಡರ್ಟಿ ಪಿಕ್ಟರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಮಾಡೆಲಿಂಗ್ ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

  English summary
  Dirty Picture Fame Actress Arya Banerjee death not a case of homicide, she suffering from cirrhosis of lever post mortem report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X