twitter
    For Quick Alerts
    ALLOW NOTIFICATIONS  
    For Daily Alerts

    ಆರ್ಯನ್ ಖಾನ್ ಡ್ರಗ್ಸ್ ಕೇಸ್: ಮತ್ತೆ ಕೆಲವರ ಬಂಧನ

    |

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇನ್ನಿಬ್ಬರು ಬಂಧನಕ್ಕೆ ಒಳಗಾಗಿರುವ ಕ್ರೂಸ್ ಶಿಪ್‌ ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಎನ್‌ಸಿಬಿ ಬಂಧಿಸಿದೆ.

    ಕ್ರೂಸ್‌ ಶಿಪ್‌ನಲ್ಲಿ ಪಾರ್ಟಿ ಆರ್ಗನೈಜ್ ಮಾಡಿದ್ದ ದೆಹಲಿ ಮೂಲದ ಇವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ನಾಲ್ಕು ಸಿಬ್ಬಂದಿಯನ್ನು ಎನ್‌ಸಿಬಿ ಇಂದು ಬಂಧಿಸಿದೆ.

    ದೆಹಲಿ ಮೂಲದ ನಾಮಸ್‌ಕ್ರೇ (Namas'cray) ಎಕ್ಸ್‌ಪೀರಿಯನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಅಕ್ಟೋಬರ್ 2 ರಿಂದ ನಾಲ್ಕರ ವರೆಗೆ ಮುಂಬೈನಲ್ಲಿ ಕೋರ್ಡೇಲಿಯಾ ಕ್ರೂಸ್ ಶಿಪ್‌ನಲ್ಲಿ ಪಾರ್ಟಿ ಅರೇಂಜ್ ಮಾಡಿತ್ತು. ಆ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಎಂಟು ಜನರನ್ನು ವಶಕ್ಕೆ ಪಡೆದಿದ್ದರು, ಡ್ರಗ್ಸ್ ಅನ್ನೂ ಸಹ ವಶಪಡಿಸಿಕೊಳ್ಳಲಾಗಿತ್ತು. ನಂತರ ಶಾರುಖ್ ಪುತ್ರ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್‌ಮುನ್ ಧಮೇಚಾ ಅನ್ನು ಬಂಧಿಸಲಾಗಿತ್ತು.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇವೆಂಟ್ ಮ್ಯಾನೇಜ್‌ಮೆಂಟ್‌ನ ಕೆಲವು ಉದ್ಯೋಗಿಗಳು ಹಾಗೂ ಪಾರ್ಟಿಯಲ್ಲಿ ಹಾಜರಿದ್ದ ಒಬ್ಬನನ್ನು ಎನ್‌ಸಿಬಿ ಬಂಧಿಸಿದೆ. ಇಂದು ಬಂಧಿಸಲ್ಪಟ್ಟವರನ್ನು ಗೋಪಾಲ್ ಜಿ ಆನಂದ್, ಸಮೀರ್ ಸೆಹ್ಗಲ್, ಮನವ್ ಸಿಂಘಾಲ್, ಭಾಸ್ಕರ್ ಅರೋರಾ ಎಂದು ಗುರುತಿಸಲಾಗಿದೆ.

    Aryan Khan Drugs Case: Event Management Company Employees Arrested By NCB

    ಇದಕ್ಕೂ ಮುನ್ನಾ ಮುಂಬೈನ ಮೋಹಕ್ ಜಸ್ವಾಲ್ ಎಂಬುವರನ್ನು ಬಂಧಿಸಲಾಗಿದ್ದು ಆತನಿಂದ ಕೆಲವು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆತನ ವಿಚಾರಣೆಯ ಬಳಿಕ ಇಶ್ಮೀತ್ ಸಿಂಗ್ ಛಡ್ಡಾ ಎಂಬಾತನನ್ನು ಗುರಗ್ರಾಮದಲ್ಲಿ ಬಂಧಿಸಲಾಗಿದೆ. ಆ ನಂತರ ಶ್ರೇಯಸ್ ಸುರೇಂದರ್ ನಾಯರ್ ಎಂಬಾತನನ್ನೂ ಎನ್‌ಸಿಬಿ ಬಂಧಿಸಿದೆ. ಕ್ರೂಸ್‌ ಶಿಪ್‌ನಲ್ಲಿ ನಡೆದ ಪಾರ್ಟಿಗೆ ಅತಿಥಿಯಾಗಿ ಆಹ್ವಾನಿತನಾಗಿದ್ದ ಮನೀಷ್ ರಾಜ್‌ಗಾರಿಯಾ ಎಂಬಾತನನ್ನೂ ಎನ್‌ಸಿಬಿ ಬಂಧಿಸಿದ್ದು, ಈತನ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ ಆದರೆ ಈತ ಮಾದಕ ವಸ್ತು ಸೇವನೆ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್, ಮಾಡೆಲ್ ಮುನ್‌ಮುನ್ ಧಮೇಚಾ ಅವರುಗಳನ್ನು ಭಾನುವಾರವೇ ಎನ್‌ಸಿಬಿ ಬಂಧಿಸಿದ್ದು, ಮೂವರು ಬಂಧಿತರನ್ನು ಅಕ್ಟೋಬರ್ 07ರವರೆಗೆ ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ.

    English summary
    NCB arrested four employees of event management company in related to Aryan Khan drugs case.
    Wednesday, October 6, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X