ಶಾರುಕ್ ಖಾನ್ ಪುತ್ರನಿಗ್ ಬಿಗ್ ರಿಲೀಫ್: ಬಾಂಬೆ ಹೈ ಕೋರ್ಟ್ ಆದೇಶ!
ಡ್ರಗ್ಸ್ ಪ್ರಕರಣದಲ್ಲಿ ಶಾರುಕ್ ಪುತ್ರ ಆರ್ಯನ್ ಖಾನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಾಮೀನು ಷರತ್ತನ್ನು ಮಾರ್ಪಡಿಸಲು ಕೋರಿ ಆರ್ಯನ್ ಖಾನ್ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಪುರಸ್ಕರಿಸಿದೆ.
ಆರ್ಯನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿ ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಯಲ್ಲಿ ಹಾಜರಾತಿಯನ್ನು ಗುರುತಿಸಬೇಕು ಎನ್ನುವ ಆದೇಶ ಹಿಂಪಡೆಯ ಬೇಕು ಎಂದು ಅವರು ಕೋರಿದ್ದರು.
ಪ್ರತಿ ಶುಕ್ರವಾರ 'ಎನ್‌ಸಿಬಿ' ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಅದು ಆದೇಶ ಹೊರಡಿಸಿದೆ. ವಿನಾಯಿತಿ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಆರ್ಯನ್ ಖಾನ್. ಜಾಮೀನು ಷರತ್ತಿನ ಭಾಗವಾಗಿ ಪ್ರತಿ ಶುಕ್ರವಾರ ಮುಂಬೈನಲ್ಲಿರುವ 'ಎನ್‌ಸಿಬಿ' ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಬಾಂಬೆ ಹೈಕೋರ್ಟ್, ಆರ್ಯನ್ ಖಾನ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ, ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ 'ಎನ್‌ಸಿಬಿ'ಗೆ ಹಾಜರಾಗಬೇಕು ಎಂದು ಹೇಳಿತ್ತು. ಅದರಂತೆ ಆರ್ಯನ್ ಖಾನ್ ಅವರು ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಪ್ರತಿ ಶುಕ್ರವಾರ ಎನ್‌ಸಿಬಿ ಮುಂದೆ ಹಾಜರಾಗಿದ್ದರು. ಆದರೆ ಇನ್ನು ಮುಂದೆ ಅದರ ಅವಶ್ಯಕತೆ ಇಲ್ಲ.
ಎನ್‌ಸಿಬಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸತ್, ಜಾಮೀನು ಷರತ್ತನ್ನು ಮಾರ್ಪಾಡು ಮಾಡುವಲ್ಲಿ ಎನ್ಸಿಬಿಗೆ ಯಾವುದೇ ತೊಂದರೆ ಇಲ್ಲ. ಆದರೆ ಆರ್ಯನ್ ಅವರು ದೆಹಲಿ ಅಥವಾ ಮುಂಬೈಗೆ ಕರೆದಾಗ ಹಾಜರಾಗಬೇಕು ಎಂದು ತಿಳಿಸಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಜಾಮೀನು ಷರತ್ತನ್ನು ಸಡಿಲಿಸಿ ಆದೇಶ ನೀಡಿದೆ. ಜಾಮೀನು ಪಡೆದು ಹೊರಗೆ ಇರುವ ಆರ್ಯನ್ ಖಾನ್ ಅವರಿಗೆ ಇದು ಮತ್ತೊಂದು ದೊಡ್ಡ ರಿಲೀಫ್.


Click it and Unblock the Notifications