For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಶಾರುಖ್ ಪುತ್ರನಿಗೆ ಜಾಮೀನು ನಿರಾಕರಣೆ, ಆಘಾತಕಾರಿ ಅಂಶ ಬೆಳಕಿಗೆ

  |

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಲಾಗಿದೆ.

  ಆರ್ಯನ್ ಖಾನ್ ವಿಚಾರಣೆ ನಡೆಸಿದ ಎನ್‌ಸಿಬಿಯು 'ಆರ್ಯನ್ ಖಾನ್ ಇಂದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ'. ಹಾಗಾಗಿ ಹೆಚ್ಚಿನ ತನಿಖೆಯ ಅಗತ್ಯವಿದ್ದು, ಆರ್ಯನ್‌ ಖಾನ್‌ಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದೆ.

  ''ಆರೋಪಿಯ ಗೆಳೆಯ ಸಹ ಆರೋಪಿ. ನಿಷೇಧಿತ ವಸ್ತುಗಳನ್ನು ಹೊಂದಿದ್ದ. ಹಾಗಾಗಿ ಈತ (ಆರ್ಯನ್ ಖಾನ್) ಮೇಲೆ ಗುಮಾನಿ ಸಹಜ. ತನಿಖೆ ಮುಗಿದರಷ್ಟೆ ಆರೋಪಗಳಿಂದ ಮುಕ್ತಿ ಸಾಧ್ಯ. ತನಿಖೆ ಬಹಳ ಪ್ರಮುಖ ಅಂಗ ಸಹ. ಹಾಗಾಗಿ ಆರೋಪಿ (ಆರ್ಯನ್ ಖಾನ್) ತನಿಖೆ ಮುಗಿಸಿಕೊಂಡು ಹೊರಗೆ ಹೋಗಲಿ'' ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

  ಆರ್ಯನ್ ಖಾನ್ ಅನ್ನು ಅಕ್ಟೋಬರ್ 7 ರ ವರೆಗೆ ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ. ''ಎನ್‌ಡಿಪಿಎಸ್‌ ಕಾಯ್ದೆಯ ಎಲ್ಲ ಪ್ರಕರಣಗಳು ಜಾಮೀನು ರಹಿತವಾದುವು. ಜಾಮೀನುಸಹಿತ, ಜಾಮೀನು ರಹಿತ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಆದರೆ ಪ್ರಶ್ನೆ ಉದ್ಭವಿಸುವುದು ಎನ್‌ಸಿಬಿ ವಶಕ್ಕೆ ನೀಡಬೇಕೆ ಬೇಡವೇ ಎಂಬುದು ಮಾತ್ರ'' ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

  ''ಪ್ರಾಸಿಕ್ಯೂಷನ್‌, ಬಂಧಿತ ಆರೋಪಿಯಿಂದ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ, ಹಾಗೂ ಅಪರಾಧದಲ್ಲಿ ಬಳಕೆಯಾದ ವಸ್ತುವೊಂದು ಪತ್ತೆಯಾಗಿದೆ'' ಎಂದು ಹೇಳಿರುವುದು ಗಮನಿಸಿಬೇಕಾಗಿದೆ ಎಂದು ನ್ಯಾಯಾಲಯ ತನ್ನ ಇಂದಿನ ಆದೇಶದಲ್ಲಿ ಹೇಳಿದೆ.

  ಹೊಸ ವಿಷಯಗಳು ಬೆಳಕಿಗೆ ಬಂದಿರುವ ಕಾರಣ ಎನ್‌ಸಿಬಿಯು ಇನ್ನು ಕೆಲವೆಡೆ ದಾಳಿ ನಡೆಸಲಿದೆ. ಇನ್ನಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಸತ್ಯಗಳನ್ನು ಪರಾಮರ್ಶಿಸಬೇಕಿದೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.

  English summary
  Aryan Khan Remanded To NCB Custody Till October 7 in Cruise Ship Drug Case. NCB said shocking information came to light after the inquiry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X