twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಎನ್‌ಸಿಬಿ ಯತ್ನಿಸುತ್ತಿದೆ: ಆರ್ಯನ್ ಖಾನ್

    |

    ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತಮ್ಮನ್ನು ಬಂಧಿಸಿದ ತನಿಖಾ ಸಂಸ್ಥೆ ಎನ್‌ಸಿಬಿ ವಿರುದ್ಧ ಆರೋಪ ಮಾಡಿದ್ದಾರೆ.

    ಬಾಂಬೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಹಾಕಿರುವ ಆರ್ಯನ್ ಖಾನ್, ''ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಕ್ಕಿ ಹಾಕಿಸಲು ಎನ್‌ಸಿಬಿ ಸಂಚು ಮಾಡಿದೆ'' ಎಂದಿದ್ದಾರೆ.

    ನನ್ನ ವಾಟ್ಸ್‌ಅಪ್ ಸಂದೇಶಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಪ್ಪಾಗಿ ಅರ್ಥೈಸಿಕೊಂಡು ಅದನ್ನೇ ಸತ್ಯವೆಂದು ವಾದಿಸುತ್ತಿದೆ. ಇದು ಅನ್ಯಾಯ ಎಂದು ಆರ್ಯನ್ ಖಾನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

    ''ಎನ್‌ಸಿಬಿ ದಾಳಿಯ ವೇಳೆ ನನ್ನ ಬಳಿ ಯಾವುದೇ ನಿಷೇಧಿತ ಪದಾರ್ಥ ಸಿಕ್ಕಿಲ್ಲ ಹಾಗೂ ಎನ್‌ಸಿಬಿ ಬಂಧಿಸಿರುವ ಇತರ ಆರೋಪಿಗಳ ಪೈಕಿ ಅರ್ಬಾಜ್ ಸೇಠ್ ಹಾಗೂ ಅಚಿತ್ ಕುಮಾರ್ ಹೊರತುಪಡಿಸಿ ಇನ್ಯಾರ ಪರಿಚಯವೂ ಇಲ್ಲ'' ಎಂದಿದ್ದಾರೆ.

    Aryan Khan Says NCB Did Misinterpretation His WhatsApp Messages

    ಎನ್‌ಸಿಬಿ ಉಲ್ಲೇಖಿಸಿರುವ ವಾಟ್ಸ್‌ಅಪ್ ಸಂದೇಶಗಳು ದಾಳಿ ನಡೆಯುವ ಸಮಯಕ್ಕಿಂತ ಬಹಳ ಹಿಂದಿನವು. ಅವಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಆ ಸಂದೇಶಗಳು ದೂರ-ದೂರಕ್ಕೂ ಯಾವುದೇ ಪಿತೂರಿಯ ಉದ್ದೇಶದಿಂದ ಮಾಡಿದ್ದುವಲ್ಲ. ಆ ಚಾಟ್‌ಗಳ ಮೂಲಕ ಯಾವುದೇ ರಹಸ್ಯ ಸಂದೇಶ ವಿನಿಮಯ ಆಗಿಲ್ಲ'' ಎಂದು ಅರ್ಜಿಯಲ್ಲಿ ಹೇಳಿದ್ದಾರೆ ಆರ್ಯನ್ ಖಾನ್.

    ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯವು, ಸಾಕ್ಷ್ಯಗಳನ್ನು ತಿರುಚಬಹುದು ಎಂಬ ಆರೋಪದ ಮೇಲೆ ಜಾಮೀನು ನಿರಾಕರಿಸುವುದನ್ನು ಪ್ರಶ್ನೆ ಮಾಡಿರುವ ಆರ್ಯನ್ ಖಾನ್, ''ವ್ಯಕ್ತಿಯೊಬ್ಬ ಪ್ರಭಾವಿ ಆಗಿದ್ದ ಮಾತ್ರಕ್ಕೆ ಆತ ಸಾಕ್ಷ್ಯಗಳನ್ನು ಅಳಿಸಿ ಹಾಕಬಹುದು ಎಂದು ಗುಮಾನಿ ಪಡಲು ಕಾನೂನಿನಲ್ಲಿ ಅವಕಾಶ ಇಲ್ಲ'' ಎಂದು ಹೇಳಿದ್ದಾರೆ.

    ಆರ್ಯನ್ ಖಾನ್ ಡ್ರಗ್ಸ್ ಸೇವಿಸುತ್ತಿದ್ದರು, ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಬಂಧ ಹೊಂದಿದ್ದರು. ವಿದೇಶದಿಂದ ಡ್ರಗ್ಸ್ ತರಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಅವರ ವಾಟ್ಸ್‌ಆಪ್‌ ಚಾಟ್‌ನಿಂದ ತಿಳಿದು ಬಂದಿದೆ ಎಂದು ಎನ್‌ಸಿಬಿಯು ನ್ಯಾಯಾಲಯದಲ್ಲಿ ಹೇಳಿತ್ತು. ಆರ್ಯನ್ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ನಡುವೆ ನಡೆದ ವಾಟ್ಸ್‌ಆಪ್‌ ಚಾಟ್‌ನಲ್ಲಿ ಗಾಂಜಾದ ಉಲ್ಲೇಖ ಆಗಿದೆ ಎಂಬ ಕಾರಣಕ್ಕೆ ನಿನ್ನೆಯಷ್ಟೆ ನಟಿ ಅನನ್ಯಾ ಪಾಂಡೆಯನ್ನು ಎನ್‌ಸಿಬಿ ವಿಚಾರಣೆ ನಡೆಸಿದೆ.

    ಆರ್ಯನ್ ಖಾನ್ ಅನ್ನು ಎನ್‌ಸಿಬಿಯು ಅಕ್ಟೋಬರ್ 03 ರಂದು ಬಂಧಿಸಿದೆ. ಆರ್ಯನ್ ಖಾನ್ ಜೊತೆಗೆ ಅವರ ಗೆಳೆಯ ಅರ್ಬಾಜ್ ಸೇಠ್ ಮತ್ತು ಮುನ್‌ಮುನ್ ಧಮೇಚಾ ಸಹ ಬಂಧನಕ್ಕೆ ಒಳಗಾಗಿದ್ದರು. ಆ ನಂತರ ಇನ್ನೂ ಐದು ಮಂದಿಯನ್ನು ಎನ್‌ಸಿಬಿ ಬಂಧಿಸಿದೆ. ಆರ್ಯನ್ ಖಾನ್ ಪರ ವಕೀಲರು ಈವರೆಗೆ ಮೂರು ಬಾರಿ ಜಾಮೀನಿಗಾಗಿ ಅರ್ಜಿ ಹಾಕಿದ್ದು, ಮೂರು ಬಾರಿಯೂ ಆರ್ಯನ್‌ಗೆ ಜಾಮೀನು ದೊರೆತಿಲ್ಲ. ಆರ್ಯನ್ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 30 ರ ವರೆಗೆ ವಿಸ್ತರಿಸಲಾಗಿದ್ದು, ಆ ವರೆಗೆ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಕಾಲ ಕಳೆಯಬೇಕಿದೆ.

    English summary
    Aryan Khan says NCB's interpretation his WhatsApp messages was wrong and unjustified.
    Saturday, October 23, 2021, 21:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X