'ಧುರಂಧರ್'-2 ಸಿನಿಮಾ 3 ಗಂಟೆಗಳ ನಾನ್ಸೆನ್ಸ್ ಅಷ್ಟೆ; ಸಂಸದ ಅಸಾದುದ್ದೀನ್ ಓವೈಸಿ

ಆದಿತ್ಯಧರ್ ನಿರ್ದೇಶ‍ನದ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ ದೋಚುತ್ತಿದೆ. ಒಂದೇ ವಾರದಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡ್ತಿದೆ. ಒಂದು ವರ್ಗದವರು ಚಿತ್ರವನ್ನು ಟೀಕಿಸುತ್ತಿದ್ದಾರೆ. ಇದು ಪ್ರಾಪಗಂಡಾ ಸಿನಿಮಾ, ವೈಲೆನ್ಸ್ ಜಾಸ್ತಿ, ಸತ್ಯಕ್ಕಿಂತ ಸುಳ್ಳು ಜಾಸ್ತಿಯಿದೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಬಗ್ಗೆ ಹೈದರಾಬಾದ್ ಎಂಪಿ, AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.

'ಧುರಂಧರ್'-2 ಸಿನಿಮಾ ಅಲ್ಲ "3 ಗಂಟೆಗಳ ನಾನ್ಸೆನ್ಸ್" ಎಂದು ಓವೈಸಿ ಟೀಕಿಸಿದ್ದಾರೆ. ಟೈಮ್ಸ್ ನೌ ಸಮ್ಮಿಟ್‌ನಲ್ಲಿ ಅವರು ಭಾಗಿ ಆಗಿದ್ದರು. "ನನಗೆ 3 ಗಂಟೆ ಆ ಸಿನಿಮಾ ನೋಡಲು ಸಮಯ ಇಲ್ಲ. ಜನರು ನನ್ನ ಮಾತನ್ನು ಒಂದು ಗಂಟೆ ಕೇಳುತ್ತಾ ಅನ್ಸತ್ತೆ. ಚಿತ್ರದಲ್ಲಿ ಹಿಂಸೆಯನ್ನು ಉತ್ತೇಜಿಸುವ, ಅವಾಚ್ಯ ಶಬ್ದಗಳನ್ನು ಹೊರತುಪಡಿಸಿ ಬೇರೇನಿದೆ. ಮೂರು ಗಂಟೆಗಳ ನಂತರ, ನೀವು ಮುಸ್ಲಿಮರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬೇಕೇ ಅಥವಾ ಬೇಡವೇ ಎಂದು ಯೋಚಿಸುವಂತೆ ಮಾಡುತ್ತೆ. ಇದನ್ನೆಲ್ಲಾ ನೋಡಲು ಯಾರಿಗೆ ಸಮಯವಿದೆ? ಹೇಳಿ" ಎಂದು ಪ್ರಶ್ನಿಸಿದ್ದಾರೆ.

Asaduddin Owaisi Calls Dhurandhar-2 3 Hours of Nonsense Amid 1000 Crore Box Office Storm

ಜನ ನೋಡ್ತಿದ್ದಾರೆ, ಖುಷಿಯಾಗಿದ್ದಾರೆ, ಸಿನಿಮಾ ಹಿಟ್ ಆಗಿದೆ ಅಲ್ವಾ? ಎಂದು ನಿರೂಪಕಿ ಕೇಳುತ್ತಿದ್ದಂತೆ "ಹೈದರಾಬಾದ್‌ನಲ್ಲಿ ಒಂದು ಮಾತು ಹೇಳ್ತಾರೆ. ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ, ಅದನ್ನು ಸಮಾಧಿಗೆ ತೆಗೊಂಡೋಗಿ ಅಂತ. ಹಾಗಾಗಿ ನಾವು ಅದನ್ನು ಸಮಾಧಿಗೆ ತೆಗೆದುಕೊಂಡು ಹೋಗಿ ಬಿಡುತ್ತೇವೆ" ಎಂದು ಓವೈಸಿ ಹೇಳಿರುವುರು ವೈರಲ್ ಆಗ್ತಿದೆ. ನಟಿ ರಮ್ಯಾ ಸೇರಿ ಕೆಲವರು 'ಧುರಂಧರ್'-2 ಸಿನಿಮಾ ಬಗ್ಗೆ ವ್ಯಂಗ್ಯವಾಡಿದ್ದಾರೆ. ಆದರೆ ಸಾಕಷ್ಟು ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ.

2ನೇ ವಾರಾಂತ್ಯದಲ್ಲಿ ಕೂಡ 'ಧುರಂಧರ್'-2 ಭರ್ಜರಿ ಕಲೆಕ್ಷನ್ ಮಾಡ್ತಿದೆ. 10ನೇ(ಮಾರ್ಚ್ 28) ಭಾರತದಲ್ಲಿ ಮಾತ್ರ 62 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎನ್ನುವುದು ಬುಕ್‌ಮೈ ಶೋ ಬುಕ್ಕಿಂಗ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ನಿನ್ನೆ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಇಂದು ಭಾನುವಾರ(ಮಾರ್ಚ್ 29)ದ ರಜೆ ಚಿತ್ರದ ಗಳಿಕೆ ಹಿಗ್ಗಿಸುವ ಸುಳಿವು ಸಿಕ್ತಿದೆ. ಒಂದೇ ದಿನ 100 ಕೋಟಿ ರೂ. ಗಳಿಸಿದ್ರು ಅಚ್ಚರಿ ಪಡಬೇಕಿಲ್ಲ.

ವಿಶ್ವದಾದ್ಯಂತ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಗೆಲುವಿನ ಆರ್ಭಟ ಮುಂದುವರೆದಿದೆ. ಈವರೆಗೆ 1200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ದಕ್ಷಿಣದಲ್ಲಿ ಕರ್ನಾಟಕದಲ್ಲೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಡಬ್ಬಿಂಗ್ ವರ್ಷನ್ ಶೋಗಳ ಸಂಖ್ಯೆ ಹೆಚ್ಚುತ್ತಲೇಯಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಪರಭಾಷಾ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಧುರಂಧರ್-2' ಪಾತ್ರವಾಗಿದೆ. ಆ ಮೂಲಕ 'ಪುಷ್ಪ'-2 ಸಿನಿಮಾ ದಾಖಲೆ ಹಿಂದಿಕ್ಕಿದೆ. ಎರಡನೇ ವಾರಾಂತ್ಯದ ವೇಳೆಗೆ 100 ಕೋಟಿ ರೂ. ಗಳಿಕೆ ಕಾಣುವ ನಿರೀಕ್ಷೆ ಮೂಡಿಸಿದೆ.

'ಧುರಂಧರ್-2' ಸಿನಿಮಾ ಸದ್ಯಕ್ಕೆ ಓಟಿಟಿಗೆ ಬರಲ್ಲ. 2 ತಿಂಗಳ ಬಳಿಕವೇ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದೆ. 'ಧುರಂಧರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಆದರೆ ಸೀಕ್ವೆಲ್ ಓಟಿಟಿ ರೈಟ್ಸ್ ಖರೀದಿಸಲು ಭಾರೀ ಪೈಪೋಟಿ ನಡೀತಿದೆ. 150 ಕೋಟಿ ರೂ.ಗೆ ಜಿಯೋ ಹಾಟ್‌ಸ್ಟರ್ ರೈಟ್ಸ್ ಸ್ವಂತ ಮಾಡಿಕೊಂಡಿದೆ ಎನ್ನಲಾಗ್ತಿದೆ. ಇನ್ನು ಸ್ಟಾರ್ ಸಂಸ್ಥೆಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ 2000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಕೆಲವರು ಭಾವಿಸುತ್ತಿದ್ದಾರೆ.

More from Filmibeat

Read more about: politics Dhurandhar 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X