ಸಹೋದರಿಯರು, ಖ್ಯಾತ ಗಾಯಕಿಯರು ಆದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಜೋಡಿಯ ಹಿಟ್ ಹಾಡುಗಳು

ಮಂಗೇಶ್ಕರ್ ಸಹೋದರಿಯರು ಎಂದು ಸಂಗೀತ ಲೋಕದಲ್ಲಿ ಖ್ಯಾತರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಕಳೆದ 60 ವರ್ಷಗಳಿಂದ ಸಂಗೀತ ಪ್ರಿಯರನ್ನು ಆಳಿದ್ದಾರೆ. ತಮ್ಮ ತಮ್ಮ ಹಾದಿಯಲ್ಲಿ, ಶೈಲಿಯಲ್ಲಿ ಖ್ಯಾತಿ ಗಳಿಸಿರುವ ಇವರು, ಒಟ್ಟಿಗೆ ಸರಿಸುಮಾರು 80 ಹಿಂದಿ ಹಾಡುಗಳನ್ನು ಹಾಡಿದ್ದಾರೆ. ಇಂದು ಗಾಯಕಿ ಆಶಾ ಭೋಂಸ್ಲೆ ಅವರ ಜನ್ಮ ದಿನವಾಗಿದ್ದು, ಈ ಸಂದರ್ಭರ್ದಲ್ಲಿ ಅಕ್ಕ- ತಂಗಿಯರ ಐದು ಟಾಫ್ ಹಿಟ್ ಡುಯೆಟ್ ಹಾಡುಗಳು ಇಲ್ಲಿವೆ.

1. 1960ರಲ್ಲಿ ಬಿಡುಗಡೆಯಾದ ಜಿಸ್ ದೇಶ್ ಮೇ ಗಂಗ್ತಾ ಬೆಹ್ತಿ ಹೈ ಸಿನಿಮಾದ ಕ್ಯಾ ಹುವಾ, ಯೇ ಮುಜೆ ಕ್ಯಾ ಹುವಾ ಹಾಡು ಕೇಳಿ ರಾಜ್ ಕಪೂರ್ ಲತಾ ಮಂಗೇಶ್ಕರ್ ಅವರ ಧ್ವನಿಗೆ ಅಭಿಮಾನಿಯಾಗಿದ್ದರು. ಇಬ್ಬರು ಸಹೋದರಿಯರು ಹಾಡುತ್ತಾ ತಮ್ಮ ಪ್ರೇಮ ಪ್ರಣಯದ ವಿಷಯವ್ನನು ಹಂಚಿಕೊಲ್ಳುವ ಈ ಹಾಡಿಗೆ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಜೀವ ತುಂಬಿದ್ದಾರೆ. ಹಾಡಿಗೆ ಶಂಕರ್-ಜೈಕಿಶನ್ ಸಂಗೀತ ನೀಡಿದ್ದರು.

lata-mangeshkar-asha-bhosle

2. ಪ್ರೊಫೆಸರ್‌ ಸಿನಿಮಾದ ಕೊಯಿ ಆಯೇಗಾ ಆಯೇಗಾ ಹಾಡಿನಲ್ಲಿ ಇಬ್ಬರು ಖ್ಯಾತ ಸಹೋದರಿಯರು ದನಿ ನೀಡಿದ್ದಾರೆ. ಸಂಗೀತ ಸಂಯೋಜಕ ಶಂಕರ್ - ಜೈಕಿಶನ್ ಮತ್ತೆ ಇಬ್ಬರನ್ನು ಒಟ್ಟಿಗೆ ಸೇರಿಸಿದ್ದರು. 1962ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

3. ಜಹಾನ್ ಅರಾ ಸಿನಿಮಾದ ಸೂಪರ್ ಹಿಟ್ ಜಬ್ ಜಬ್ ತುಮ್ಹೆ ಭುಲಾಯಾ ತುಮ್ ಔರ್ ಯಾದ್ ಆಯೆ ಹಾಡು ಯಾರಿಗೆ ತಾನೇ ನೆನಪಿಲ್ಲ ಹೇಳೆ. 1964ರಲ್ಲಿ ಬಿಡುಡೆಯಾದ ಈ ಸಿನಿಮಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ಹಿಟ್ ಹಾಡಾಗಿ ಜನಮನದಲ್ಲಿ ಅಚ್ಚುಹೊತ್ತಿದೆ. ಖ್ಯಾತ ಸಂಗೀತ ಸಂಯೋಜಕ ಮದನ್ ಮೋಹನ್ ಅವರು ಲತಾ ಮಂಗೇಶ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು.

ಆದರೆ ಈ ಹಾಡಿನ ಘಜಲ್‌ನಲ್ಲಿ, ಆಶಾ ಭೋಂಸ್ಲೆ ಅವರ ಧ್ವನಿಯನ್ನು ಬಳಸಿ, ಜನರಿಗೆ ಹೊಸ ರೀತಿಯ ಇಂಪನ್ನು ನೀಡಿದ್ದರು. ಪ್ರೀತಿಯ ಬಗ್ಗೆ ಇಬ್ಬರು ವ್ಯಕ್ತಿಗಳ ದುಃಖ ಮತ್ತು ಉತ್ಕೃಷ್ಟತೆಯನ್ನು ಈ ಸುಮಧುರ ಗೀತೆ ಕಟ್ಟು ಕೊಟ್ಟಿದೆ.

lata-mangeshkar-asha-bhosle

4. 1985ರಲ್ಲಿ ಬಿಡುಗಡೆಯಾದ ಉತ್ಸವ್ ಚಿತ್ರದ ಮನ್ ಕ್ಯುನ್ ಬೆಹ್ಕಾ ರಿ ಬೆಹ್ಕಾ ಆಧಿ ರಾತ್ ಕೋ ಹಾಡಿನಲ್ಲಿ ನಟಿ ರೇಖಾ ಎಷ್ಟು ಚಮದವಾಗಿ ಕಾಣುತ್ತಾರೋ ಅಷ್ಟೇ ಕಿವಿಗಳಿಗೆ ಇಂಪು ಈ ಹಾಡು. ಇದು ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ಅತ್ಯಂತ ಪ್ರಸಿದ್ಧವಾದ ಯುಗಳ ಗೀತೆ. ಮಧ್ಯರಾತ್ರಿಯಲ್ಲಿ ತಮ್ಮ ನೆನಪಾಗುವ ಪ್ರೇಮಿಯ ಬಗ್ಗೆ ಇಬ್ಬರು ಗೆಳತಿಯರ ನಡುವಿನ ಮಾತುಕತೆಯ ಹಾಡು ಇದು. ನಟಿ ರೇಖಾ ಅವರಿಗೆ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ನಟಿ ಅನುರಾಧಾ ಪಟೇಲ್ ಅವರಿಗೆ ಆಶಾ ಭೋಂಸ್ಲೆ ಧ್ವನಿ ನೀಡಲಾಗಿದೆ.

5. ಜೈಲ್ ಯಾತ್ರಾ: ಈ ಸಿನಿಮಾದ ಪಾಕೆ ಅಕೇಲಿ ಮೊಹೆ ಛೇದ್ ರಾಹಾ ಹಾಡಿನಲ್ಲಿ ಇಬ್ಬರು ಸಹೋದರಿಯರು ಒಂದಾಗಿದ್ದರು. ವಿನೋದ್ ಖನ್ನಾ ಅಭಿನಯದ ಸಿನಿಮಾದಲ್ಲಿ ಗಾಯಕಿ ಸಹೋದರಿಯರನ್ನು ಒಟ್ಟಿಗೆ ಸೇರಿಸುವುದು ನಿರ್ದೇಶಕ ಆರ್‌ಡಿ ಬರ್ಮನ್‌ ಅವರಿಗೆ ಸವಾಲಿನ ಕೆಲಸವಾಗಿತ್ತು ಎನ್ನಲಾಗುತ್ತದೆ. 1981 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

ಇನ್ನು, ಚೋರಿ ಚೋರಿ ಸಿನಿಮಾದಲ್ಲಿನ ಮನ್ ಭವನ್ ಕೆ ಘರ್ ಆಯೆ ಗೋರಿಯಿಂದ ಹಿಡಿದು ಜನ್ವಾರ್‌ನ ಆಂಖೋನ್ ಆಂಖೋನ್ ಮೇ ಹಾಡಿನವರೆಗೆ, ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಹಲವು ಬಾರಿ ಒಂದು ಹಾಡಿಗೆ ಧ್ವನಿಯಾಗಿದ್ದಾರೆ.

More from Filmibeat

English summary
Lata Mangeshkar-Asha Bhosle Outstanding duets in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X