»   » ಬಿಟೌನ್‌ನಲ್ಲಿನ ಸೆಕ್ಸ್ ಬೇಡಿಕೆ ನಟನಿಂದಲೂ ರಿವೀಲ್ ಆಯ್ತು..

ಬಿಟೌನ್‌ನಲ್ಲಿನ ಸೆಕ್ಸ್ ಬೇಡಿಕೆ ನಟನಿಂದಲೂ ರಿವೀಲ್ ಆಯ್ತು..

Posted By:
Subscribe to Filmibeat Kannada

ಸಾಮಾನ್ಯವಾಗಿ ಇದುವರೆಗೂ ಸಿನಿಮಾ ರಂಗದಲ್ಲಿ ಮಂಚದ ಸಂಸ್ಕೃತಿಯ ಬೇಡಿಕೆ ಕೇವಲ ಚಿತ್ರದಲ್ಲಿ ಅವಕಾಶ ಕೇಳಿಕೊಂಡು ಹೋಗುವ ಹುಡುಗಿಯರಿಗೆ ಮಾತ್ರ ಎಂದು ಈ ವರೆಗೂ ಕೇಳಿರುತ್ತೀರಿ. ಆದರೆ ಈಗಿನ ಲೇಟೆಸ್ಟ್ ಸುದ್ದಿ ಕೇಳಿದ್ರೆ ಎಲ್ಲರಿಗೂ ಆಶ್ಚರ್ಯವಾಗುವಲ್ಲಿ ಸಂಶಯವಿಲ್ಲ. ಯಾಕಂದ್ರೆ ಬಿಟೌನ್ ನಲ್ಲಿ ಅವಕಾಶ ಕೊಡಲು ಕೇವಲ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಸೆಕ್ಸ್ ಬೇಡಿಕೆ ಇಡುವ ಸಂಸ್ಕೃತಿ ಇರುವುದು ಈಗ ಬಯಲಾಗಿದೆ.

ಬಾಲಿವುಡ್ ಅಂಗಳದಲ್ಲಿ ಸಿನಿಮಾದಲ್ಲಿ ಅವಕಾಶ ಕೊಡಲು ಪುರುಷರಿಗೂ ಸೆಕ್ಸ್ ಬೇಡಿಕೆ ಇಡುವ ಈ ವಿಷಯವನ್ನು ರಿವೀಲ್ ಮಾಡಿರುವುದು ನಟ ಆಶೀಶ್ ಬಿಶ್ತ್. ಇವರು ನಟಿಸಿರುವ 'ಶಾಬ್' ಚಿತ್ರ ಇಂದು(ಜುಲೈ 14) ತೆರೆಕಂಡಿದೆ. ಇವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಅಚ್ಚರಿ ವಿಷಯವನ್ನು ಬಯಲು ಮಾಡಿದ್ದಾರೆ.

Ashish Bisht: Casting couch still exists in Mumbai

ನಟ ಆಶೀಶ್ ಬಿಶ್ತ್ ಗೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶದ ಬಾಗಿಲು ತೆರೆಯುವ ಸಂದರ್ಭದಲ್ಲಿ ನಿರ್ಮಾಪಕರೊಬ್ಬರು ನೇರವಾಗಿ 'ಆರ್ ಯು ಕಂಫರ್ಟಬಲ್ ಇನ್ ಬೆಡ್' ಎಂದು ಪ್ರಶ್ನೆ ಕೇಳಿದ್ದರಂತೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಹಂಚಿಕೊಂಡಿರುವ ಆಶೀಶ್‌ ತಮ್ಮ ಸಿನಿಮಾ ವೃತ್ತಿಯ ಹಿತದೃಷ್ಟಿಯಿಂದ ಆ ನಿರ್ಮಾಪಕರು ಯಾರು ಎಂದು ಹೇಳಿಲ್ಲ.

ಅಲ್ಲದೇ ಆಶೀಶ್ ಮುಂಬೈ ಸಿಟಿಗೆ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಹೋದಾಗ ಕೆಲವು ಮಹಿಳೆಯರು ನೇರವಾಗಿಯೇ ನೀನು ನನ್ನ ಜೊತೆ ಮಲಗಲು ರೆಡಿ ಇದ್ದರೇ ಚಿತ್ರದಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಿದ್ದರಂತೆ. ಹಾಗೂ ಕೆಲವರು ಮನೆಗೆ ಕರೆಸಿಕೊಂಡು ಅಶ್ಲೀಲವಾಗಿ ಮಾತನಾಡಿದ್ದರು ಎಂದು ಆಶೀಶ್‌ ಸಂದರ್ಶನದ ವೇಳೆ ಹೇಳಿದ್ದು, ತಮ್ಮ ಆರಂಭಿಕ ದಿನಗಳ ನೋವನ್ನು ಹಂಚಿಕೊಂಡಿದ್ದಾರೆ.

English summary
Ashish Bisht: Casting couch still exists in Mumbai

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada