ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ಈ ನಟಿಗೆ ಮನಸೋತ 'ಯಶ್' ನೆಚ್ಚಿನ ಯೂಟ್ಯೂಬರ್, ಮದುವೆ ಯಾವಾಗ ?

ಚಿತ್ರರಂಗದಲ್ಲಿ ಒಮ್ಮೊಮ್ಮೆ ಪ್ರಣಯ ಪಕ್ಷಿಗಳಂತೆ ಜೊತೆಯಾಗಿ ಓಡಾಡಿಕೊಂಡು ಇದ್ದವರನ್ನು ಕಂಡು ಅನೇಕರು ಇವರು ಒಂದಿಲ್ಲೊಂದು ದಿನ ಮದುವೆಯಾಗುತ್ತಾರೆ ಎಂದುಕೊಂಡಿರುತ್ತಾರೆ. ಆದರೆ ಎಲ್ಲರ ಕಣ್ಣು ಕುಕ್ಕುವಂತೆ ಓಡಾಡುವ ಇವರು ಕೊನೆವರೆಗೆ ಮದುವೆಯಾಗುವುದೇ ಇಲ್ಲ. ಬದಲಿಗೆ ಬ್ರೇಕಪ್ ಮಾಡಿಕೊಂಡು ಬಿಡುತ್ತಾರೆ. ಇನ್ನು ಕೆಲ ಒಮ್ಮೆ ಜೊತೆ ಜೊತೆಯಲ್ಲಿ ತಿರುಗಾಡಿರುವುದಿಲ್ಲ. ಸಾರ್ವಜನಿಕವಾಗಿ ಎಲ್ಲಿಯೂ ಯಾರ ಕಣ್ಣಿಗೆ ಬಿದ್ದಿರುವುದಿಲ್ಲ. ಆದರೆ..

ಏಕಾಏಕಿ ಮದುವೆಯ ಸುದ್ದಿಯನ್ನು ಹಂಚಿಕೊಂಡು ನೋಡುಗರನ್ನು ಅಚ್ಚರಿಗೆ ದೂಡುತ್ತಾರೆ. ಇದಕ್ಕೆ ಎಲಿ ಅವ್ರಾಮ್ ಸದ್ಯದ ಉದಾಹರಣೆ. ಹೌದು, ಎಲಿ ಅವ್ರಾಮ್.. ಸ್ವೀಡನ್‌ನ ಸುಂದರಿ. 2013ರಲ್ಲಿ ಹಿಂದಿ ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದ ಈ ಚೆಲುವೆ ಕನ್ನಡದಲ್ಲಿ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಸಿದ್ಧವಾಗಿದ್ದ ಬಟರ್‌ಫ್ಲೈ ಎಂಬ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.

Ashish Chanchlani amp amp Elli AvrRam Finally Love Confirmed Viral Post Sets Internet Ablaze

ಆದರೆ, ದುರಾದೃಷ್ಟ ಪಾರುಲ್ ಯಾದವ್ ನಿರ್ಮಾಣ ಮಾಡಿ ಅಭಿನಯಿಸಿದ್ದ ಈ ಚಿತ್ರ ಒಂದು ದಶಕವಾದರೂ ಕೂಡ ಬಿಡುಗಡೆಯಾಗಲೇ ಇಲ್ಲ. ಹಾಗಂಥ ಎಲಿ ಅವ್ರಾಮ್ ಪ್ರಯತ್ನವನ್ನು ಬಿಡಲಿಲ್ಲ.

'ಕಿಸ್‌ ಕಿಸ್ಕೋ ಪ್ಯಾರ್ ಕರೂ'.. 'ಗುಡ್ ಬೈ'.. 'ಗಣಪತ್'.. ಹೀಗೆ ಕೆಲ ಖ್ಯಾತ ಚಿತ್ರಗಳಲ್ಲಿ ಕಾಣಿಸಿಕೊಂಡ ಎಲಿ ಬಾಲಿವುಡ್‌ನಲ್ಲಿ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕುವುದಕ್ಕೆ ಮಾತ್ರ ಆ ನಂತರ ಸೀಮಿತವಾದರು. 'ದಿ ವರ್ಡಿಕ್ಟ್'.. 'ಟೈಪ್ ರೈಟರ್'.. 'ಇನ್‌ಸೈಡ್ ಎಡ್ಜ್ 2'.. ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು ಕೂಡ ಎಲಿ ನಸೀಬು ಬದಲಾಗಲಿಲ್ಲ.

ಇಂಥಾ ಎಲಿ ಅವ್ರಾಮ್ ಸದ್ಯ ಭಾರತದ ಪ್ರಖ್ಯಾತ ಯೂಟ್ಯೂಬರ್.. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್.. ವಿವಾದಗಳಿಂದ ಆಗಾಗ ಹೆಸರು ಮಾಡುವ 'ಆಶಿಶ್ ಚಂಚಲಾನಿ'ಗೆ ಮನ ಸೋತಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ವಿಷಯ ಈಗ ಹಲವರ ಅಚ್ಚರಿಗೆ ಕಾರಣವಾಗಿದೆ. ಎಲ್ಲಿಯ ಎಲಿ ಅವ್ರಾಮ್ ಎಲ್ಲಿಯ ಆಶಿಶ್ ಚಂಚಲಾನಿ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ಹೇಗೆ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಎನ್ನುವ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಇನ್ನು ಈ ಸುದ್ದಿ ಅಂತೆ-ಕಂತೆಯ ಸುದ್ದಿಯಲ್ಲಿ ಕೇಳಿ ಬಂದಿದ್ದಲ್ಲ. ಖುದ್ದು ಆಶಿಶ್ ಚಂಚಲಾನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಲಿ ಅವ್ರಾಮ್ ಅವರ ಜೊತೆ ಇರುವ ಫೋಟೊ ಹಂಚಿಕೊಂಡಿದ್ದಾರೆ. ಫೈನಲಿ ಎಂದು ಹಾರ್ಟ್‌ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಆದರೂ ಕೂಡ ಹಲವರಲ್ಲಿ ಇವರ ಇಬ್ಬರ ಸಂಬಂಧದ ಕುರಿತು ಅನುಮಾನ ಇದ್ದು ಅವರ ಅವರ ಅಭಿಪ್ರಾಯಗಳನ್ನು ಸದ್ಯ ಅನೇಕರು ಹಂಚಿಕೊಳ್ತಿದ್ದಾರೆ.

ಅಂದ್ಹಾಗೇ ಡಿಸೆಂಬರ್ 8, 1993ರಂದು ಮಹಾರಾಷ್ಟ್ರದ ಉಲ್ಲಾಸ್‌ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಆಶಿಶ್ ಚಂಚಲಾನಿ, 2009ರಲ್ಲಿಯೇ ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿದ್ದರು.

ಆದರೆ.. ಧೈರ್ಯ ಸಾಲದೇ ಸುಮ್ಮನೆ ಇದ್ದರು. 2014ರಲ್ಲಿ ಹಾಗೂ ಹೀಗೂ ಧೈರ್ಯ ಮಾಡಿ ತಮ್ಮ ಮೊದಲ ವಿಡಿಯೋವನ್ನು ಹಂಚಿಕೊಂಡ ಆಶಿಶ್ 2016ರ ಸಮಯಕ್ಕೆ ಎಲ್ಲರ ಗಮನ ಸೆಳೆಯಲು ಶುರು ಮಾಡಿದ್ದರು. ಕೊರೊನಾದಿಂದ ಯಾರಿಗೆ ಲಾಭವಾಯ್ತು, ನಷ್ಟವಾಯ್ತು.. ಗೊತ್ತಿಲ್ಲ. ಆದರೆ.. ಕೊರೊನಾ ಆಶಿಶ್ ಹಣೆಬರಹ ಬದಲಿಸಿತು. ಲಕ್ಷಾಂತರ ಜನ ಆಶಿಶ್ ಹಂಚಿಕೊಳ್ಳುತ್ತಿದ್ದ ವಿಡಿಯೋವನ್ನು ನೋಡಿ ಎಂಜಾಯ್ ಮಾಡಲು ಶುರುಮಾಡಿದ್ದರು.

ಸದ್ಯ 29 ಮಿಲಿಯನ್‌ಗಿಂತಲೂ ಹೆಚ್ಚಿನ ಸಬ್‌ಸ್ಕ್ರೈಬರ್ಸ್ ಹೊಂದಿರುವ ಆಶಿಶ್ ಇಲ್ಲಿಯವರೆಗೆ ಹಲವಾರು ಸ್ಟಾರ್‌ಗಳ ಜೊತೆ ಕೈ ಜೋಡಿಸಿದ್ದಾರೆ. ತಮ್ಮ ಯೂಟ್ಯೂಬ್‌ ಮೂಲಕ ಹಲವು ಚಿತ್ರಗಳ ಪ್ರಚಾರವನ್ನು ಕೂಡ ಮಾಡಿದ್ದಾರೆ. ಆ ಪೈಕಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರ ಕೂಡ ಒಂದು.

ಕೆ.ಜಿ.ಎಫ್ ಚಿತ್ರದ ಸಮಯದಲ್ಲಿ ಯಶ್ ಅವರ ಸಂದರ್ಶನವನ್ನು ಮಾಡಿದ್ದ ಆಶಿಶ್ ಚಂಚಲಾನಿ, ಯಶ್ ಅವರ ಹೃದಯವನ್ನು ಕೂಡ ಗೆದ್ದಿದ್ದರು. ಆಶಿಶ್ ಕೂಡ ಯಶ್ ಅವರ ಸರಳತೆಗೆ ಮನಸೋತು ಅಭಿಮಾನಿಯಾಗಿದ್ದರು. 2021-ಜನವರಿ 8ರಂದು ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೂಡ ಕೋರಿದ್ದರು.

ಇನ್ನುಳಿದಂತೆ ಎಲಿ ಅವ್ರಾಮ್ ಅವರ ಹೆಸರು ಈ ಹಿಂದೆ ಹಾರ್ದಿಕ್ ಪಾಂಡ್ಯ ಜೊತೆ ತಳುಕು ಹಾಕಿಕೊಂಡಿತ್ತು. ನತಾಶಾ ಅವರಿಂದ ದೂರವಾದ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲಿ ಎಲಿ ಅವರ ಜೊತೆ ಮದ್ವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಎಲಿ ಅವ್ರಾಮ್, ಆಶಿಶ್ ಚಂಚಲಾನಿಗೆ ಮನಸೋತಿದ್ದಾರೆ. ಇಬ್ಬರು ತಮ್ಮ ಸಂಬಂಧವನ್ನು ಸೋಶಿಯಲ್ ಮೀಡಿಯಾ ಮೂಲಕ ಜಗಜ್ಜಾಹೀರು ಮಾಡಿದ್ದಾರೆ. ಶೀಘ್ರದಲ್ಲಿಯೇ ಇಬ್ಬರು ಮದುವೆಯ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.

More from Filmibeat

English summary
It's official? Ashish Chanchlani and Elli AvrRam's "Finally" post sends fans into a frenzy, hinting at a confirmed relationship! Dive into the romantic journey that has everyone talking.
Read more about: social media love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X