ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 38ನೇ ವಂಸತಕ್ಕೆ ಕಾಲಿಟ್ಟಿರುವ ನಟಿ ಕತ್ರಿನಾ ಸರಳವಾಗಿ ಜನ್ಮದಿನ ಸಂಭ್ರಮಿಸಿದ್ದಾರೆ. ಕತ್ರಿನಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

ಇದರ ಬೆನ್ನಲ್ಲೇ ಈಗ ಕತ್ರಿನಾ ಕೈಫ್ ಮದುವೆ ವಿಚಾರ ಸದ್ದು ಮಾಡುತ್ತಿದ್ದಾರೆ. ಕತ್ರಿಕಾ ಕೈಫ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕತ್ರಿನಾ ಮದುವೆ ಸುಳಿವು ನೀಡಿದ್ದಾರೆ ಸಲ್ಮಾನ್ ಖಾನ್ ಕಾಸ್ಟ್ಯೂಮ್ ಡಿಸೈನರ್. ಕತ್ರಿನಾ ಕೈಫ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಸಲ್ಮಾನ್ ಡಿಸೈನರ್ ಆಶ್ಲೇ ರೆಬೆಲ್ಲೋ ಕತ್ರಿನಾ ಮದುವೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಅಂದಹಾಗೆ ಡಿಸೈನರ್ ಆಶ್ಲೇ, ಮದುಮಗಳ ಹಾಗೆ ಕಾಣಿಸುತ್ತಿರುವ ನಟಿ ಕತ್ರಿನಾ ಬಿಳಿ ಬಣ್ಣದ ಗೌನ್ ಧರಿಸಿರುವ ಫೋಟೋವನ್ನು ಶೇರ್ ಮಾಡಿ, "ಇದು ಆದಷ್ಟು ಬೇಗ ಸಂಭವಿಸಲಿದೆ" ಎಂದು ಹೇಳಿದ್ದಾರೆ. ಡಿಸೈನರ್ ಆಶ್ಲೇ, ಕತ್ರಿನಾ ಅವರಿಗೂ ಉತ್ತಮ ಸ್ನೇಹಿತರಾಗಿದ್ದು ಕತ್ರಿನಾ ಈ ಪೋಸ್ಟ್ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ashley-rebello-reveal-katrina-kaif-and-vicky-kaushal-marriage-plans

ಅಂದಹಾಗೆ ಕತ್ರಿನಾ ಕೈಫ್ ಸದ್ಯ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಳೆದ ಎರಡು ವರ್ಷಗಳಿಂದ ಇಬ್ಬರ ಡೇಟಿಂಗ್, ಪ್ರೀತಿ, ಪ್ರೇಮದ ವಿಚಾರ ಸದ್ದು ಮಾಡುತ್ತಲೇ ಇದೆ. ಆದರೆ ಈ ಬಗ್ಗೆ ಕತ್ರಿನಾ ಅಥವಾ ವಿಕ್ಕಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಇದೀಗ ಇಬ್ಬರೂ ಸೈಲೆಂಟ್ ಆಗಿ ಹಸೆಮಣೆ ಏರುವ ಪ್ಲಾನ್ ಮಾಡುತ್ತಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

Recommended Video

Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

ಡಿಸೈನರ್ ಪೋಸ್ಟ್ ನೋಡಿದ್ರೆ ಸದ್ಯದಲ್ಲೇ ಕತ್ರಿನಾ ವೈವಾಹಿಕ ಜೀವನಕ್ಕೆ ಕಾಲಿಡುವ ಸೂಚನೆ ಸಿಗುತ್ತಿದೆ. ಆದರೆ ವಿಕ್ಕಿ ಕೌಶಲ್ ಜೊತೆನಾ ಅಥವಾ ಬೇರೆಯವರ ಜೊತೆನಾ ಎನ್ನುವುದು ಬಹಿರಂಗವಾಗಬೇಕಿದೆ.

More from Filmibeat

English summary
Did Ashley Rebello reveal Katrina Kaif and Vicky Kaushal marriage plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X