For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಅನ್ನು ಕಡಿಮೆ ಮೊತ್ತಕ್ಕೆ ಜಾಹೀರಾತಿನಲ್ಲಿ ನಟಿಸಲು ಒಪ್ಪಸಿದ ಆಸಕ್ತಿಕರ ಕತೆ ಹೇಳಿದ ಉದ್ಯಮಿ

  |

  ಇತ್ತೀಚೆಗೆ ಬಹುತೇಕ ಫೈನ್ಯಾನ್ಶಿಯಲ್ ಜಗತ್ತು ಡಿಜಿಟಲ್ ಆಗಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ಸಹ ಡಿಜಿಟಲ್ ಪೇಮೆಂಟ್ ಪಡೆಯುತ್ತಾರೆ. ಈ ಡಿಜಿಟಲ್ ಪೇಮೆಂಟ್‌ನಲ್ಲಿ ಬಹಳ ಯಶಸ್ವಿಯಾಗಿದೆ. ಇದರ ಹಿಂದಿರುವುದು ಅಶ್ನೀರ್ ಗ್ರೋವರ್ ಎಂಬ ಉದ್ಯಮಿ.

  ಡಿಜಿಟಲ್ ಪೇಮೆಂಟ್ ಅನ್ನು ಕೇವಲ ಕಾರ್ಪೊರೇಟ್ ಸಂಸ್ಥೆಗಳು ಮಾತ್ರವೇ ಬಳಸುತ್ತಿದ್ದ, ಯಾವುದೇ ಶಾಪ್‌ಗಳು ಡಿಜಿಟಲ್ ಪೇಮೆಂಟ್ ಪಡೆದರೆ ಕಮೀಷನ್ ಕೊಡಬೇಕಾಗಿದ್ದ ಕಾಲದಲ್ಲಿ ಭಾರತ್ ಪೇ ಸಂಸ್ಥೆ ನಿರ್ಮಿಸಿದ ಅಶ್ನೀರ್ ಗ್ರೋವರ್, ಡಿಜಿಟಲ್ ಪೇಮೆಂಟ್ ಉಚಿತವಾಗಿಯೂ, ಸರಳವಾಗಿಯೂ, ಎಲ್ಲರಿಗೂ ಲಭ್ಯವಾಗುವಂತೆ ಮಾಡಿದರು.

  ಕೇವಲ 100 ಕೋಟಿಯಿಂದ ಆರಂಭವಾದ ಭಾರತ್ ಪೇ ಸಂಸ್ಥೆ ಇಂದು 2.23 ಲಕ್ಷ ಕೋಟಿ ಮೌಲ್ಯದ ಸಂಸ್ಥೆ. ತಾವು ಸಂಸ್ಥೆ ಆರಂಭಿಸುವಾಗ ಸಲ್ಮಾನ್ ಖಾನ್ ಅನ್ನು ತಮ್ಮ ಬ್ರ್ಯಾಂಡ್‌ನ ರಾಯಭಾರಿಯನ್ನಾಗಿ ಕಡಿಮೆ ಮೊತ್ತಕ್ಕೆ ಆಯ್ಕೆ ಮಾಡಿಕೊಂಡಿದ್ದ ಆಸಕ್ತಿಕರ ಸಂಗತಿಯನ್ನು ಅಶ್ನೀರ್ ಗ್ರೋವರ್ ಹೇಳಿದ್ದಾರೆ.

  ನನಗೆ ಸಲ್ಮಾನ್ ಖಾನ್ ಬೇಕಾಗಿತ್ತು: ಅಶ್ನೀರ್ ಗ್ರೋವರ್

  ನನಗೆ ಸಲ್ಮಾನ್ ಖಾನ್ ಬೇಕಾಗಿತ್ತು: ಅಶ್ನೀರ್ ಗ್ರೋವರ್

  ಕಾಲೇಜೊಂದರಲ್ಲಿ ನೀಡಿದ ಉಪನ್ಯಾಸದಲ್ಲಿ ಈ ಸಂಗತಿ ಬಿಚ್ಚಿಟ್ಟ ಅಶ್ನೀರ್ ಗ್ರೋವರ್, ''ನನ್ನ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ಹಣವಿತ್ತು. ಅದರಲ್ಲಿಯೇ ನಾನು ಸಂಸ್ಥೆ ಕಟ್ಟಬೇಕಿತ್ತು. ನಾನು ಹಣದ ಲೇವಾದೇವಿಯ ಸಂಸ್ಥೆ ಕಟ್ಟುತ್ತಿರುವ ಕಾರಣ ಇದರಲ್ಲಿ ನಂಬಿಕೆ ಬಹಳ ಮುಖ್ಯವಾಗಿರುತ್ತದೆ. ಅತ್ಯಂತ ವೇಗವಾಗಿ ನಾನು ಗ್ರಾಹಕರ ನಂಬಿಕೆ ಗಳಿಸಿಕೊಳ್ಳಬೇಕಿತ್ತು. ಹಾಗಾಗಿ ನಾನು ಫವರ್‌ಫುಲ್ ಜಾಹೀರಾತು ನೀಡಬೇಕಿತ್ತು. ಆಗ ನನಗೆ ಸಲ್ಮಾನ್ ಖಾನ್ ಅನ್ನು ರಾಯಭಾರಿಯನ್ನಾಗಿಸಿಕೊಳ್ಳುವ ಯೋಚನೆ ಬಂತು'' ಎಂದು ವಿವರಿಸಿದ್ದಾರೆ ಅಶ್ನೀರ್ ಗ್ರೋವರ್.

  ಜಾಹೀರಾತಿನಲ್ಲಿ ನಟಿಸಲು 7.50 ಕೋಟಿ ಕೇಳಿದ್ದ ಸಲ್ಮಾನ್ ಖಾನ್

  ಜಾಹೀರಾತಿನಲ್ಲಿ ನಟಿಸಲು 7.50 ಕೋಟಿ ಕೇಳಿದ್ದ ಸಲ್ಮಾನ್ ಖಾನ್

  ''ಸಲ್ಮಾನ್ ಖಾನ್ ಬಹಳ ಜನಪ್ರಿಯ ಹಾಗೂ ಆತನ ಬಗ್ಗೆ ನಂಬಿಕೆಯು ಇದೆ ಎನಿಸಿತು. 2017 ರಲ್ಲಿ ಜಾಹೀರಾತಿನಲ್ಲಿ ನಟಿಸಲು ಕೇಳಿದಾಗ ಸಲ್ಮಾನ್ ಖಾನ್‌ರ ತಂಡ 7.50 ಕೋಟಿ ರುಪಾಯಿ ಸಂಭಾವನೆ ಕೇಳಿದರು. ನನ್ನ ಖಾತೆಯಲ್ಲಿ ಇದ್ದಿದ್ದೆ 100 ಕೋಟಿ. ನನಗೆ ಪ್ರತಿ ರುಪಾಯಿಯನ್ನೂ ಜಾಗೃತೆಯಿಂದ ಖರ್ಚು ಮಾಡಬೇಕಿತ್ತು. ಸಂಭಾವನೆಯೇ 7.50 ಕೋಟಿ ನೀಡಿದರೆ ಜಾಹೀರಾತು ಚಿತ್ರೀಕರಣ, ಆ ಜಾಹೀರಾತನ್ನು ಟಿವಿಗಳಲ್ಲಿ ಇತರೆಡೆ ಪ್ರಸಾರ ಮಾಡಲು ಹಣ ಎಲ್ಲ ಸೇರಿ ಸುಮಾರು 20 ಕೋಟಿ ಖರ್ಚಾಗುವುದಕ್ಕಿತ್ತು'' ಎಂದು ತಮ್ಮ ಆಗಿನ ಸಂದಿಗ್ಧ ಸ್ಥಿತಿ ವಿವರಿಸಿದರು.

  ಸಲ್ಮಾನ್ ಖಾನ್ ಬಳಿ ಚೌಕಾಶಿ ಮಾಡಿದೆ: ಅಶ್ನೀರ್

  ಸಲ್ಮಾನ್ ಖಾನ್ ಬಳಿ ಚೌಕಾಶಿ ಮಾಡಿದೆ: ಅಶ್ನೀರ್

  ''ಆದರೆ ನಾನು ಬಿಡಲಿಲ್ಲ, ನನಗೆ ಸಲ್ಮಾನ್ ಖಾನ್ ಬೇಕಾಗಿತ್ತು. ಅವರ ಬಳಿ ಚೌಕಾಶಿ ಮಾಡಿದೆ. ಕೊನೆಗೆ ಸಲ್ಮಾನ್ ಖಾನ್ 4.20 ಕೋಟಿ ಸಂಭಾವನೆಗೆ ಒಪ್ಪಿಕೊಂಡರು. ಒಮ್ಮೆಯಂತೂ ಅವರ ಮ್ಯಾನೇಜರ್, ಏನು ತರಕಾರಿ ವ್ಯಾಪಾರ ಮಾಡಲು ಬಂದಿದ್ದೀರಾ?' ಎಂದು ಕೇಳಿದರು. ಹೌದು, ನನ್ನ ಬಳಿ ಕೊಡಲು ಬಹಳ ಕಡಿಮೆ ಹಣವಿದೆ ಎಂದು ನೇರವಾಗಿ ಹೇಳಿದ್ದೆ. ಆದರೆ ಕಡಿಮೆ ಹಣಕ್ಕೆ ಸಲ್ಮಾನ್ ಖಾನ್ ಬಂದು ನಟಿಸಿದರು. ನಮ್ಮ ಬ್ರ್ಯಾಂಡ್‌ ಬೆಳೆಯಲು ಸಹಾಯ ಮಾಡಿದರು'' ಎಂದಿದ್ದಾರೆ ಅಶ್ಮೀರ್ ಗ್ರೋವರ್.

  ಶಾರ್ಕ್‌ ಟ್ಯಾಂಕ್‌ನಲ್ಲಿ ಇನ್‌ವೆಸ್ಟರ್‌ ಆಗಿದ್ದ ಅಶ್ಮೀರ್ ಗ್ರೋವರ್

  ಶಾರ್ಕ್‌ ಟ್ಯಾಂಕ್‌ನಲ್ಲಿ ಇನ್‌ವೆಸ್ಟರ್‌ ಆಗಿದ್ದ ಅಶ್ಮೀರ್ ಗ್ರೋವರ್

  ಜನಪ್ರಿಯ ರಿಯಾಲಿಟಿ ಶೋ ಶಾರ್ಕ್‌ ಟ್ಯಾಂಕ್‌ನಲ್ಲಿ ಅಶ್ಮೀರ್ ಗ್ರೋವರ್ ಭಾಗವಹಿಸಿದಾಗ ಅವರ ಹೆಚ್ಚು ಜನಪ್ರಿಯರಾದರು. ಅವರು ಇನ್‌ವೆಸ್ಟ್ ಮಾಡುವ ರೀತಿಯನ್ನು ಹಲವರು ಮೆಚ್ಚಿಕೊಂಡರು, ಅವರು ಹೊಸ ಉದ್ಯಮಿಗಳನ್ನು ಬೈಯ್ಯುವ ರೀತಿಯೂ ಜನರಿಗೆ ಬಹಳ ಹಿಡಿಸಿತ್ತು. ಈಗ ಭಾರತ್ ಪೇ ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನದಿಂದ ಅಶ್ಮೀರ್ ಗ್ರೋವರ್ ಅನ್ನು ಹೊರಗೆ ಹಾಕುವ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ತಾವು ಸಂಸ್ಥೆಯಿಂದ ಹೊರಗೆ ಹೋಗುವುದಿಲ್ಲ ಎಂದು ಅಶ್ಮೀರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮುಂದೇ ಏನಾಗುತ್ತದೆಯೋ ಕಾದು ನೋಡಬೇಕಿದೆ.

  English summary
  Bharat Pe founder Ashneer Grower talked about how he convinced Salman Khan to act in his brand's advertisement for less remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X