For Quick Alerts
  ALLOW NOTIFICATIONS  
  For Daily Alerts

  ಹೆಣ್ಣಲ್ಲ, ಗಂಡು ಎಂಬ ಆರೋಪ ಎದುರಿಸಿದ್ದ ಅಥ್ಲೆಟ್ ಪಿಂಕಿ ಪ್ರಮಾಣಿಕ್ ಬಗ್ಗೆ ಸಿನಿಮಾ

  |

  ಬಾಲಿವುಡ್‌ನಲ್ಲಿ ಮತ್ತೊಂದು ಬಯೋಪಿಕ್ ಘೋಷಣೆಯಾಗಿದೆ. ಈ ಸಲ ವಿವಾದಾತ್ಮಕ ಅಥ್ಲೆಟ್ ಪಿಂಕಿ ಪ್ರಮಾಣಿಕ್ ಜೀವನ ಕಥೆ ತೆರೆಮೇಲೆ ತರಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ. ಅಶೋಕ್ ಪಂಡಿತ್ ಈ ಚಿತ್ರ ನಿರ್ಮಿಸಲು ಸಜ್ಜಾಗಿದ್ದು, ಪ್ರಿಯಾಂಕಾ ಘಟಕ್ ಸ್ಕ್ರಿಪ್ಟ್ ಮಾಡಲಿದ್ದಾರೆ.

  ಭಾರತೀಯ ಕ್ರೀಡಾ ಲೋಕದಲ್ಲಿ ಖ್ಯಾತ ಹೆಸರು ಪಿಂಕಿ ಪ್ರಮಾಣಿಕ್. ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪಿಂಕಿ ಪ್ರಮಾಣಿಕ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರು. ಪಿಂಕಿ ಪ್ರಮಾಣಿಕ್ ಹೆಣ್ಣಲ್ಲ, ಗಂಡು ಎಂದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದರು. ಈ ಸಂಬಂಧ ಪಿಂಕಿ ಬಂಧನವಾಗಿ ಜೈಲು ವಾಸ ಸಹ ಅನುಭವಿಸಿದ್ದರು. ಇದೀಗ, ಪಿಂಕಿ ಜೀವನ ರೋಚಕ ಕತೆ ಸಿನಿಮಾ ರೂಪ ಪಡೆಯುತ್ತಿದೆ. ಮುಂದೆ ಓದಿ....

  ಸಿನಿಮಾ ಆಗ್ತಿದೆ ಖ್ಯಾತ ನೃತ್ಯ ನಿರ್ದೇಶಕಿಯ ಜೀವನ: 'ಮಾಸ್ಟರ್ ಜೀ' ಪಾತ್ರದಲ್ಲಿ ಯಾರು ನಟಿಸುತ್ತಾರೆ? ಸಿನಿಮಾ ಆಗ್ತಿದೆ ಖ್ಯಾತ ನೃತ್ಯ ನಿರ್ದೇಶಕಿಯ ಜೀವನ: 'ಮಾಸ್ಟರ್ ಜೀ' ಪಾತ್ರದಲ್ಲಿ ಯಾರು ನಟಿಸುತ್ತಾರೆ?

  ಪಿಂಕಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ?

  ಪಿಂಕಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ?

  ಪಿಂಕಿ ಪ್ರಮಾಣಿಕ್ ಜೀವನ ಕುರಿತು ಸಿನಿಮಾ ಮಾಡಲು ನಿರ್ಮಾಪಕ ಅಶೋಕ್ ಪಂಡಿತ್ ಹಕ್ಕು ಖರೀದಿ ಮಾಡಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಈ ಕುರಿತು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ತೆರೆಮೇಲೆ ಈ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತುಹಲ ಹೆಚ್ಚಿಸಿದೆ.

  ಹೆಣ್ಣಲ್ಲ, ಗಂಡು....ಅತ್ಯಾಚಾರದ ಆರೋಪ!

  ಹೆಣ್ಣಲ್ಲ, ಗಂಡು....ಅತ್ಯಾಚಾರದ ಆರೋಪ!

  2012ರಲ್ಲಿ ಪಿಂಕಿ ಸ್ನೇಹಿತೆಯೊಬ್ಬರು ಪ್ರಮಾಣಿಕ್ ಹೆಣ್ಣಲ್ಲ, ಗಂಡು. ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪಿಂಕಿ ಬಂಧನ ಸಹ ಆಗಿತ್ತು. ಲಿಂಗ ಪತ್ತೆಗಾಗಿ ವೈದ್ಯಕೀಯ ಪರೀಕ್ಷೆ ನಡೆಸಲು ಕೋರ್ಟ್ ಆದೇಶಿಸಿತ್ತು. ನ್ಯಾಯಾಂಗ ಬಂಧನ ಸಹ ಅನುಭವಿಸಿದರು. ಆಮೇಲೆ ಈ ಕೇಸ್‌ನಿಂದ ಹೊರಬಂದರು.

  ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಬಯೋಪಿಕ್ ಘೋಷಣೆಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಬಯೋಪಿಕ್ ಘೋಷಣೆ

  ಪಿಂಕಿ ಪ್ರಮಾಣಿಕ್ ಸಾಧನೆ

  ಪಿಂಕಿ ಪ್ರಮಾಣಿಕ್ ಸಾಧನೆ

  ದೋಹಾದಲ್ಲಿ ನಡೆದ 2006ರ ಏಷ್ಯನ್ ಗೇಮ್ಸ್ ನ 4×400 ಮೀ ರಿಲೇ ನಲ್ಲಿ ಪಿಂಕಿ ಪ್ರಮಾಣಿಕ್ ಚಿನ್ನದ ಪದಕ ಗೆದ್ದಿದ್ದರು. ಮೆಲ್ಬೋರ್ನಿನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಸಿಕ್ಕಿತ್ತು. 2006ರ ಕಾಮನ್ ವೆಲ್ತ್ ನಲ್ಲಿ ಬೆಳ್ಳಿ, 2006ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ, 2005ರ ಏಷ್ಯನ್ ಇಂಡೋರ್ ಗೇಮ್ಸ್ ನಲ್ಲಿ ಚಿನ್ನ ಹಾಗೂ 2006ರ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಸಾಧನೆ ಪಿಂಕಿ ಹೆಸರಲ್ಲಿದೆ. 17 ವರ್ಷ ವಯಸ್ಸಿನಲ್ಲಿ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ನಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದು, ಆಲ್ ಇಂಡಿಯಾ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದರು.

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat
  ನನಗೆ ಆದ ಅನ್ಯಾಯ ಜಗತ್ತಿಗೆ ತಿಳಿಯಬೇಕು

  ನನಗೆ ಆದ ಅನ್ಯಾಯ ಜಗತ್ತಿಗೆ ತಿಳಿಯಬೇಕು

  ಬಯೋಪಿಕ್ ಕುರಿತು ಪಿಂಕ್‌ವಿಲ್ಲಾಗೆ ಪ್ರತಿಕ್ರಿಯೆ ನೀಡಿರುವ ಪಿಂಕಿ ಪ್ರಮಾಣಿಕ್, ''ನಾನು ಅನುಭವಿಸಿದ ಅನ್ಯಾಯ ಮತ್ತು ಭಯಾನಕತೆಯನ್ನು ಜಗತ್ತು ತಿಳಿಯಬೇಕೆಂದು ಬಯಸುತ್ತೇನೆ. ಅಶೋಕೆ ಅವರ ನಿರ್ಮಾಣವು ನನ್ನ ಕಥೆಗೆ ಗೌರವಯುತವಾಗಿ ನ್ಯಾಯ ಒದಗಿಸುತ್ತದೆ ಎಂದು ನಾನು ಸಂಪೂರ್ಣವಾಗಿ ನಂಬುತ್ತೇನೆ.'' ಎಂದಿದ್ದಾರೆ.

  English summary
  Producer Ashoke Pandit has acquired the rights to make a film on Indian athlete Pinki Pramanik. The film not titled yet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X