ಮುಂದಿನ ಒಂದೂವರೆ ವರ್ಷದಲ್ಲಿ ಮುರಿದು ಬೀಳಲಿದೆಯಂತೆ ಈ ಸ್ಟಾರ್ ಜೋಡಿಯ ದಾಂಪತ್ಯ...!

ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ.

ಈ ವಾದ-ವಿವಾದಗಳ ನಡುವೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಾಂಪತ್ಯ ಇನ್ನು ಒಂದೂವರೆ ವರ್ಷದಲ್ಲಿ ಮುರಿದು ಬೀಳಲಿದೆ ಎನ್ನುವ ಭವಿಷ್ಯವಾಣಿ ಕೇಳಿ ಬಂದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಸಖತ್ ಸದ್ದು ಮಾಡುತ್ತಿದೆ.ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅಭಿಮಾನಿಗಳ ಆತಂಕಕ್ಕೆ ಕೂಡ ಕಾರಣವಾಗಿದೆ.

Astrologer Sushil Kumaar Predicts Saif Ali Khan and Kareena Kapoor will Divorce in 1 5 Years

ಹೌದು, ಸುಶೀಲ್ ಕುಮಾರ್ ಎಂಬ ಜ್ಯೋತಿಷಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ದಾಂಪತ್ಯ ಜೀವನದ ಕುರಿತು ಭವಿಷ್ಯವನ್ನು ಹೇಳಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಸೈಫೀನಾ ದೂರವಾಗುವುದು ಖಚಿತ ನಿಶ್ಚಿತ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸುಶೀಲ್ ಕುಮಾರ್ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರದ್ದು ಹೇಳಿ ಮಾಡಿಸಿದ ಜೋಡಿಯಲ್ಲ ಎಂದು ಅವರು ಇಬ್ಬರು ಮದುವೆಯಾಗುವ ಮುನ್ನ ಅಂದರೆ 2010ರಲ್ಲಿಯೇ ನಾನು ಹೇಳಿದ್ದೇ ಎಂದು ಹೇಳಿದ್ದಾರೆ. ಮುಂದುವರೆದು ಮದುವೆಯಾದರೆ ಹೆಚ್ಚೆಂದರೆ 15 ವರ್ಷ ಇಬ್ಬರು ಸಂಸಾರ ಮಾಡಬಹುದಷ್ಟೇ ಆ ನಂತರ ಡಿವೋರ್ಸ್ ಪಡೆಯುವುದು ಗ್ಯಾರಂಟಿ ಎಂದು ನಾನು ಅವತ್ತೇ ಹೇಳಿದ್ದೇ ಎಂದಿರುವ ಸುಶೀಲ್ ಕುಮಾರ್ ಇವತ್ತು ಕೂಡ ನನ್ನ ಮಾತುಗಳಿಗೆ ನಾನು ಬದ್ದ ಎಂದಿದ್ದಾರೆ. ಮುಂಬರುವ ಒಂದೂವರೆ ವರ್ಷದಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ನಡುವೆ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗಲಿದ್ದು, ಇಬ್ಬರು ವಿಚ್ಛೇದನ ಪಡೆಯುವುದು ಗ್ಯಾರಂಟಿ, ಇದನ್ನು ಯಾರಿಂದಲೂ ತಡೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಇಬ್ಬರ ಜಾತಕವೇ ಹಾಗಿದೆ, ಜಾತಕದಲ್ಲಿಯೇ ದೋಷ ಇದೆ ಎಂದು ಕೂಡ ಸುಶೀಲ್ ಕುಮಾರ್ ಹೇಳಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿತ್ತು. ಈ ವಿಚಾರ ತುಂಬಾ ಚರ್ಚೆಗೀಡಾಗಿತ್ತು. ಸೈಫ್ ಅಲಿ ಖಾನ್ ಅವರ ನಡಾವಳಿಯ ಬಗ್ಗೆ ಒಂದು ವರ್ಗ ಅನುಮಾನ ಕೂಡ ವ್ಯಕ್ತಪಡಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಮಾತನಾಡಿರುವ ಸುಶೀಲ್ ಕುಮಾರ್ ಅದು ಮನೆಯ ಆಂತರಿಕ ವಿಚಾರವಾಗಿದ್ದರೂ ಆಗಿರಬಹುದು ಆದರೆ ಹಲ್ಲೆಯ ಹಿಂದಿನ ಸತ್ಯ ಯಾವತ್ತು ಬಯಲಾಗುವುದಿಲ್ಲ ಪ್ರಕರಣ ಯಾವತ್ತು ಬಗೆಹರಿಯುವುದಿಲ್ಲ ಎಂದು ಹೇಳಿದ್ದಾರೆ.

ಸದ್ಯ ಸುಶೀಲ್ ಕುಮಾರ್ ಅವರ ಈ ಭವಿಷ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಪ್ರಚಾರದ ಹುಚ್ಚಿಗೆ ಜನ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಈ ಸುಶೀಲ್ ಕುಮಾರ್ ಎಂಬ ವ್ಯಕ್ತಿಯೇ ಅತ್ಯುತ್ತಮ ಉದಾಹರಣೆ ಎಂದು ಹೇಳಿದ್ದಾರೆ. ಸುಶೀಲ್ ಕುಮಾರ್ ಅವರನ್ನು ಅನೇಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಹಲವರು ಟ್ರೋಲ್‌ ಕೂಡ ಮಾಡುತ್ತಿದ್ದಾರೆ.

ಅಂದ್ಹಾಗೇ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮದುವೆ 2012ರಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸೈಫ್ ಅಲಿ ಖಾನ್ ಅವರ ಪಟೌಡಿ ಪ್ಯಾಲೇಸ್‌ನಲ್ಲಿ ನಡೆದ ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಬಾಲಿವುಡ್‌ನ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಇಬ್ಬರು ವಿಚ್ಚೇದನ ಪಡೆಯುವುದು ಗ್ಯಾರಂಟಿ ಎನ್ನುವ ಮಾತು ಕೇಳಿ ಬರುತ್ತಲೇ ಇದೆಯಾದರೂ ಯಾವುದು ನಿಜವಾಗಿಲ್ಲ. ಸುಶೀಲ್ ಕುಮಾರ್ ನುಡಿದ ಭವಿಷ್ಯ ನಿಜವಾಗುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X