67ನೇ ವಯಸ್ಸಿನಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಇಬ್ಬರೂ ಸಾಯ್ತಾರೆ; ಜ್ಯೋತಿಷಿಯ ಭವಿಷ್ಯಕ್ಕೆ ಕಿಡಿ
ಕೆಲವರು ಜ್ಯೋತಿಷಿಗಳು ಎಂದು ಕೊಂಡು ಸೆಲೆಬ್ರೆಟಿಗಳ ಭವಿಷ್ಯ ಹೇಳುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಅದರಲ್ಲೂ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಂದು ಸೂಪರ್‍ಸ್ಟಾರ್‍ಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್‌ನಲ್ಲಿ ಈ ಸಂಸ್ಕೃತಿ ಹೆಚ್ಚಾಗಿತ್ತು. ಆದ್ರೀಗ ಅದು ಬಾಲಿವುಡ್‌ಗೂ ವ್ಯಾಪಿಸಿರುವ ಹಾಗೆ ಕಾಣುತ್ತಿದೆ.
ಈ ಹಿಂದೆ ಜ್ಯೋತಿಷಿಗಳು ಸೂಪರ್‍ಸ್ಟಾರ್‍ಗಳ ಸಿನಿಮಾ ಸೋಲುತ್ತಾ ಗೆಲ್ಲುತ್ತಾ? ಅವರ ವೃತ್ತಿ ಬದುಕು ಹೇಗಿರುತ್ತೆ? ಅನ್ನೋದನ್ನಷ್ಟೇ ಹೇಳುತ್ತಿದ್ದರು. ಆದ್ರೀಗ ಡಿವೋರ್ಸ್, ಸಾವಿನ ಬಗ್ಗೆನೂ ಭವಿಷ್ಯ ಹೇಳುವುದಕ್ಕೆ ಶುರು ಮಾಡಿದ್ದಾರೆ. ಈಗ ಸುಶೀಲ್ ಕುಮಾರ್ ಸಿಂಗ್ ಎಂಬ ಜ್ಯೋತಿಷಿಯೊಬ್ಬರು ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಾವಿನ ಕುರಿತು ಭವಿಷ್ಯ ನುಡಿದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳು. ವಯಸ್ಸು 60 ದಾಟಿದರೂ ಇನ್ನೂ ಇವರ ಸಿನಿಮಾಗಳಿಗೆ ಬೇಡಿಕೆಯಿದೆ. ಸಲ್ಮಾನ್ ಖಾನ್ ನಟಿಸಿದ ಸಿಕಂದರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆಗಲೇ ಸಿನಿಮಾ ನೋಡುವುದಕ್ಕೆ ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ನುಡಿದ ಭವಿಷ್ಯದಲ್ಲಿ ಏನಿದೆ? ಇದಕ್ಕೆ ಫ್ಯಾನ್ಸ್ ಪ್ರತಿಕ್ರಿಯೆ ಏನು? ತಿಳಿಯಲು ಮುಂದೆ ಓದಿ.
ಇದೇ ಮೊದಲ ಬಾರಿಗೆ ಜ್ಯೋತಿಷಿಯೊಬ್ಬರು ಸೂಪರ್‌ಸ್ಟಾರ್‌ಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದೂವರೆಗೂ ಸೆಲೆಬ್ರೆಟಿಗಳಿಗೆ ಹುಟ್ಟುವ ಮಕ್ಕಳು, ವಿಚ್ಛೇದನ, ಮದುವೆ ಬಗ್ಗೆ ಭವಿಷ್ಯ ಹೇಳುತ್ತಿದ್ದವರು. ಆದ್ರೀಗ ಇದೇ ಮೊದಲ ಬಾರಿಗೆ ಬಾಲಿವುಡ್ ಸೂಪರ್‌ಸ್ಟಾರ್‌ಗಳ ಸಾವಿನ ಬಗ್ಗೆ ಭವಿಷ್ಯ ನುಡಿದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿದ್ದಾರ್ಥ್ ಕಣ್ಣನ್ ಜೊತೆಗಿನ ಸಂದರ್ಶನದಲ್ಲಿ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ಬಾಲಿವುಡ್ ಇಬ್ಬರು ಸೂಪರ್‌ಸ್ಟಾರ್ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದೇ ವರ್ಷ ಸಾಯುತ್ತಾರೆಂದು ಹೇಳಿಬಿಟ್ಟಿದ್ದಾರೆ. ಇದು ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಳ ಬಗ್ಗೆ ಸುಶೀಲ್ ಕುಮಾರ್ ಸಿಂಗ್ ನುಡಿದ ಭವಿಷ್ಯ ಹೀಗಿದೆ. "ಶಾರುಖ್ ಖಾನ್ ಸಮಯ ಈಗ ಚೆನ್ನಾಗಿದೆ. ಅದೇ ಸಲ್ಮಾನ್ ಖಾನ್‌ಗೆ ಈಗ ಅಷ್ಟು ಒಳ್ಳೆಯ ಸಮಯವಿಲ್ಲ. 2025, 2026, 2027 ಈ ಮೂರು ವರ್ಷವೂ ಕೆಟ್ಟದಾಗಿರುತ್ತೆ. ಆದರೆ, ಇಬ್ಬರಲ್ಲೂ ಒಂದು ಸಾಮ್ಯತೆಯಿದೆ. ಸಲ್ಮಾನ್ ಖಾನ್‌ಗೆ ಶೀಘ್ರದಲ್ಲೇ ಒಂದು ಕಾಯಿಲೆ ಕಾಣಿಸಿಕೊಳ್ಳುತ್ತೆ. ಅದರ ಹೆಸರನ್ನು ಹೇಳಲು ಆಗುವುದಿಲ್ಲ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದೇ ವರ್ಷ ಸಾಯುತ್ತಾರೆ. 67ನೇ ವಯಸ್ಸಿಗೆ ಇಬ್ಬರೂ ಭೂಮಿಯನ್ನು ತೊರೆಯುತ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ.

ಇಷ್ಟೇ ಅಲ್ಲ ಸಲ್ಮಾನ್ ಖಾನ್ ಜಾತಕದಲ್ಲಿ ಈಗಾಗಲೇ ಕಾಯಿಲೆಗೆ ತುತ್ತಾಗುತ್ತಾರೆಂದು ಹೇಳಲಾಗಿದೆ. ಅವರ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತೆ. ಇದೇ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಆಗುವುದಿಲ್ಲ. ಅವರ ಕೊನೆಯ ದಿನ ಸಿಕ್ಕಾಪಟ್ಟೆ ಕೆಟ್ಟದಾಗಿರುತ್ತೆ ಎಂದು ಹೇಳಿದ್ದಾರೆ. ಸುಶೀಲ್ ಕುಮಾರ್ ಸಿಂಗ್ ಭವಿಷ್ಯ ವಾಣಿಗೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.
ಅದರಲ್ಲೂ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಸುಶೀಲ್ ಕುಮಾರ್ ಸಿಂಗ್ ನುಡಿದ ಭವಿಷ್ಯ ಅವರಿಗೆ ಕಣ್ಣುಗಳನ್ನು ಕೆಂಪು ಮಾಡುವಂತೆ ಮಾಡಿದೆ. ನೆಟ್ಟಿಗರೊಬ್ಬರು " ಇಲ್ನೋಡಿ.. ಇವನು ಒಬ್ಬ ದೇವರು. ಇವನನ್ನು ಭೇಟಿ ಮಾಡಿ" ಎಂದು ಕಿಡಿ ಕಾಡಿದ್ದರೆ, ಇನ್ನೊಬ್ಬರು "ಈ ಜಗತ್ತಿನಲ್ಲಿ ಇನ್ನೂ ಇಂತಹ ಜನರು ಇದ್ದಾರಾ?" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು "ಇನ್ನೊಬ್ಬರ ಜೀವನದ ಬಗ್ಗೆ ಹೀಗೆಲ್ಲ ಕಾಮೆಂಟ್‌ಗಳನ್ನು ಮಾಡುವುದು ಒಳ್ಳೆಯದಲ್ಲ." ಎಂದಿದ್ದಾರೆ, ಹಾಗೇ " ಇದು ಬೇಜವಾಬ್ದಾರಿ ಹೇಳಿಕೆ. ಇನ್ನೊಬ್ಬರು ಖಾಸಗಿ ಜೀವನದ ಬಗ್ಗೆ ಯಾಕೆ ಹೀಗೆ ಮಾತಾಡುತ್ತಾರೆ" ಎಂದು ಮತ್ತೊಂದು ಕಿಡಿಕಾರಿದ್ದಾರೆ.
ಇದೇ ಜ್ಯೋತಿಷ್ಯ ಈ ಹಿಂದೆನೂ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಹಾಗೂ ಜಾಹೀರ್ ಇಕ್ಬಾಲ್ ಇಬ್ಬರೂ ಬೇರೆಯಾಗುತ್ತಾರೆ ಎಂದಿದ್ದರು. ಹಾಗೇ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಆಗುತ್ತೆ ಅಂತಲೂ ಹೇಳಿದ್ದರು. ಆದರೆ, ಅದ್ಯಾವೂ ನಿಜ ಆಗಲಿಲ್ಲ. ಈಗ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದೂ ಸುಳ್ಳಾಗಲಿ ಎಂದು ಅಭಿಮಾನಿಗಳು, ಸಿನಿಪ್ರಿಯರು ಹಾರೈಸಿದ್ದಾರೆ.


Click it and Unblock the Notifications











