7 ವರ್ಷದ ವಿರಹ ವೇದನೆ ಅಂತ್ಯ ; 41ರ ಹರೆಯದಲ್ಲಿ 2ನೇ ಮದುವೆಗೆ ಸಜ್ಜಾದ ಶಾರುಖ್‌ ಖಾನ್‌ನ ಕಾವೇರಮ್ಮ

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್‌ ಅಪ್‌ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು.

ಆದರೆ ಮನಸಿಗೆ ಆದ ಗಾಯ ಮರೆಯಲು ಸಾಧ್ಯವಾಗಲ್ಲ. ಅದರಲ್ಲಿಯೂ ಮದುವೆ ಆಗಿ ಡಿವೋರ್ಸ್ ಆದರಂತೂ ಮುಗೀತು. ಹಲವರಿಗೆ ಜೀವನವೇ ಬೇಡ ಎಂದು ಅನ್ಸುತ್ತೆ. ಆದರೂ ಬದುಕಬೇಕು. ಎಲ್ಲ ನೋವನ್ನು ಮರೆತು ಮುನ್ನಡೆಯುವ ಪ್ರಯತ್ನ ಮಾಡಬೇಕು. ಹೀಗಾಗಿ ಹಲವರು ಕಾಲಾನುಕ್ರಮೇಣ ಹಳೆಯ ಕಹಿಯನ್ನೆಲ್ಲ ಮರೆತು ಬದುಕನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಲು ಮುಂದಾಗುತ್ತಾರೆ. ಉದಾಹರಣೆಗೆ ರಿಧಿ ಡೋಗ್ರಾ.

At 41 Ridhi Dogra Finds Forever Again Wedding Bells for 50 Star 7 Years After Raqesh Bapat Split

ಹೌದು, ರಿಧಿ ಡೋಗ್ರಾ.. ಹಿಂದಿ ಬೆಳ್ಳಿತೆರೆ ಮತ್ತು ಕಿರುತೆರೆಯ ಚೆಲುವೆ. ''ಸಾವಿತ್ರಿ''..''ದಿಯಾ ಔರ್ ಬಾತಿ ಹಮ್''.. ''ಓ ಅಪ್ನಾ ಸಾ'' ಸೇರಿ ಇನ್ನು ಕೆಲ ಧಾರಾವಾಹಿಯನ್ನು ಮಾಡಿರುವ ರಿಧಿ 2023ರಲ್ಲಿ ತೆರೆಗೆ ಬಂದ ''ಜವಾನ್'' ಚಿತ್ರದಲ್ಲಿ ಶಾರುಖ್ ಖಾನ್ ಅವರ ತಾಯಿಯ ಪಾತ್ರವನ್ನು (ಕಾವೇರಮ್ಮ) ನಿರ್ವಹಿಸಿದ್ದರು. ಈ ಮೂಲಕ ಹಲವರ ಹುಬ್ಬೇರಿಸಿದ್ದರು. ಯಾಕೆಂದರೆ ''ಜವಾನ್'' ತೆರೆಗೆ ಬಂದಾಗ ರಿಧಿಗೆ ಕೇವಲ 38 ವರ್ಷವಷ್ಟೇ.

''ಜವಾನ್'' ಹೊರತು ಪಡಿಸಿ ''ಟೈಗರ್ 3''.. ''ದಿ ಸಾಬರಮತಿ ರಿಪೋರ್ಟ್''.. ''ಅಬಿರ್ ಗುಲಾಲ್''.. ಚಿತ್ರಗಳಲ್ಲಿ ಅಭಿನಯಿಸಿರುವ ರಿಧಿ ''ಅಸುರ್''.. ''ದಿ ಮ್ಯಾರಿಡ್ ವುಮೆನ್'' ಅಂತಹ ವೆಬ್ ಸರಣಿಗಳಲ್ಲಿ ಕೂಡ ಮಾಡಿದ್ದಾರೆ. ಇಂಥಾ ರಿಧಿ ಡೋಗ್ರಾಗೆ ಈಗ 41 ವರ್ಷ. ಮೊದಲ ಮದುವೆ ಮುರಿದು ಬಿದ್ದು 8 ವರ್ಷಗಳಾಗಿವೆ. ಈಗ ರಿಧಿ ಎರಡನೇ ಮದುವೆಯಾಗುವ ಮನಸ್ಸು ಮಾಡಿದ್ದಾರೆ.

ಹೌದು, ಅಸಲಿಗೆ ರಿಧಿ ಡೊಗ್ರಾ ಸದ್ಯ ಫರ್‍ಹಾ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ''ದಿ 50''ಯಲ್ಲಿ ಭಾಗವಹಿಸಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮುನ್ನ ರಿಧಿ ಹಲವರಿಗೆ ಸಂದರ್ಶನ ನೀಡಿದ್ದರು. ಆ ಪೈಕಿ ''ಇನ್‌ಸ್ಟೆಂಟ್ ಬಾಲಿವುಡ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಿಧಿ ನಾನು ತುಂಬಾನೇ ರೊಮ್ಯಾಂಟಿಕ್ ವ್ಯಕ್ತಿ ಎಂದು ಹೇಳಿದ್ದರು.

ನಾನು ಪ್ರೀತಿಯಲ್ಲಿ ಬೀಳುವುದಕ್ಕೆ ಸದಾ ಸಿದ್ದ ಎಂದು ಹೇಳಿದ್ದ ರಿಧಿ, ನನಗೆ ಯಾರನ್ನಾದರೂ ಪ್ರೀತಿಸಲು ಹೆಚ್ಚಿನ ಸಮಯ ಬೇಕಾಗಲ್ಲ ಎಂದು ಹೇಳಿದ್ದರು. ಒಂದು ಹಂತದಲ್ಲಿ ನನ್ನ ಆತ್ಮ ಗೌರವ ಮತ್ತು ಸ್ವಾಭಿಮಾನ ಮರೆತು ಒಬ್ಬ ವ್ಯಕ್ತಿಯನ್ನು ಗಾಢವಾಗಿ ಪ್ರೀತಿ ಮಾಡಿದೆ, ಅದು ನನ್ನ ಬದುಕಿನ ಬಹುದೊಡ್ಡ ತಪ್ಪು ಎಂದು ಹೇಳಿದ್ದ ರಿತಿ ಯಾರೂ ಈ ತಪ್ಪು ಮಾಡಬೇಡಿ, ನಿಮ್ಮತನವನ್ನು ಮರೆಯಬೇಡಿ, ಯಾಕೆಂದರೆ ಕೊನೆಯಲ್ಲಿ ನಿಮಗೆ ನೀವು ಯಾರು ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ ಎಂದು ಬುದ್ದಿ ಮಾತು ಹೇಳಿದ್ದರು.

At 41 Ridhi Dogra Finds Forever Again Wedding Bells for 50 Star 7 Years After Raqesh Bapat Split

''ದಿ 50'' ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ವೇದಿಕೆ ಮೇಲೆ ಕೂಡ ತಾವು ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುವುದಕ್ಕೆ ಮತ್ತು ಮದುವೆ ಆಗುವುದಕ್ಕೆ ಸಿದ್ದ ಎಂಬ ಮಾತುಗಳನ್ನಾಡಿದ್ದರು ರಿಧಿ. ಇದಕ್ಕೂ ಮುನ್ನ ತಮ್ಮ ''ದಿ ಸಾಬರಮತಿ ರಿಪೋರ್ಟ್'' ಚಿತ್ರದ ಪ್ರಚಾರದ ಸಮಯದಲ್ಲಿ ತಮ್ಮ ವಿಚ್ಛೇದನದ ಕುರಿತು ಮಾತನಾಡಿದ್ದ ''ರಿಧಿ'' ಸಂಗಾತಿಗಳಾಗಿ ನಮಗೆ ಹೊಂದಾಣಿಕೆಯಾಗಲಿಲ್ಲ ಎಂದು ಹೇಳಿದ್ದರು.

ನಮ್ಮ ನಡುವೆ ತುಂಬಾನೇ ಆತ್ಮೀಯವಾದ ಸ್ನೇಹ ಇತ್ತು, ಆದರೆ ಮದುವೆ ನಂತರ ಆ ಸ್ನೇಹಕ್ಕೆ ಹಿನ್ನೆಡೆ ಆಯ್ತು ಎಂದು ಹೇಳಿದ್ದ ರಿಧಿ ಕೊನೆ ಪಕ್ಷ ನಮ್ಮ ಸ್ನೇಹವನ್ನಾದರೂ ಉಳಿಸಿಕೊಳ್ಳೋಣ ಎಂದು ನಾವು ವಿಚ್ಛೇದನ ಪಡೆದೆವು ಎಂದು ಹೇಳಿದ್ದರು. ಇಂದಿಗೂ ನಾವು ಇಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು.

ಅಂದ್ಹಾಗೇ ರಿಧಿ 2010ರಲ್ಲಿ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಆ ಸೀರಿಯಲ್ ಹೆಸರು ''ಮರ್ಯಾದಾ-ಲೆಕಿನ್ ಕಬ್ ತಕ್''. ಇದೇ ಧಾರಾವಾಹಿಯಲ್ಲಿ ಇವರಿಗೆ ಜೋಡಿಯಾಗಿದ್ದವರು ರಾಕೇಶ್ ಬಾಪಟ್. ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಇಬ್ಬರು ಪ್ರೀತಿಯಲ್ಲಿ ಬಿದ್ದರು 2011ರಲ್ಲಿ ಮದುವೆಯಾಗಿದ್ದರು. 2018-19ರವರೆಗೆ ಆದರ್ಶ ದಂಪತಿಗಳಂತೆ ಬದುಕಿದರು.

ಆದರೆ, 2019ರ ಫೆಬ್ರವರಿಯಲ್ಲಿ ಇಬ್ಬರು ದೂರವಾಗುತ್ತಿರುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದರು. ಸದ್ಯ ರಿಧಿ ''ದಿ 50'' ರಿಯಾಲಿಟಿ ಶೋನಲ್ಲಿದ್ದರೆ, ರಾಕೇಶ್ ಮರಾಠಿಯ ''ಬಿಗ್ ಬಾಸ್'' ಸೀಸನ್ 6ರ ಮನೆಯಲ್ಲಿದ್ದಾರೆ.

''ದಿ 50''ಯಲ್ಲಿ ರಿಧಿ ಗೆಲ್ಲುವ ಪ್ರಬಲ ಸ್ಫರ್ಧಿಯಾಗಿದ್ದು ಇದೇ ವೇಳೆ ಹೊರಗಡೆ ಇವರ ಮದುವೆ ಕುರಿತು ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ರಿಧೀ ಡೋಗ್ರಾಗೆ ಈಗಾಗಲೇ ತಮ್ಮ ಕನಸಿನ ರಾಜಕುಮಾರ ಸಿಕ್ಕಿದ್ದು ''ದಿ 50'' ಶೋದಿಂದ ಹೊರ ಬಂದ ನಂತರ ರಿಧಿ ಎರಡನೇ ಬಾರಿ ಮದುವೆಯ ಬಂಧನಕ್ಕೊಳಗಾಗಲಿದ್ದಾರೆ.

More from Filmibeat

English summary
Wedding bells are ringing for Ridhi Dogra! The fan-favorite actress is set to tie the knot soon, marking a beautiful new beginning 7 years post-divorce. Inside Ridhi Dogra’s secret romance and why fans of The 50 are celebrating.
Read more about: rumours divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X