ಮನೆಯ 'ಬೆಲ್' ಅಂದುಕೊಂಡು ತಮನ್ನಾ ಮಾಡಿದ್ದೇನು ? ವೈರಲ್ ಆಯ್ತು ಹಾಲು ಬಣ್ಣದ ಚೆಲುವೆಯ ಮುದ್ದಾದ ವಿಡಿಯೋ..!

ಕೆಲ ಒಮ್ಮೆ ತಾರೆಯರು ಏನೋ ಮಾಡಲು ಹೋಗಿ ಇನ್ನೇನೋ ಅವಘಡಗಳಾಗಿ ಪಬ್ಲಿಕ್ಕಿನಲ್ಲಿ ಮಾನ ಕಳೆದುಕೊಳ್ಳುತ್ತಾರೆ. ಇಂತಹ ವಿಚಾರಕ್ಕೆ ಕೆಲವರು ನಾಚಿಕೊಂಡರೆ ಇನ್ನೂ ಕೆಲವರು ಕೋಪಗೊಂಡು ಆ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗುತ್ತಾರೆ. ಇನ್ನೂ.. ಜನಸಾಮಾನ್ಯರಂತೆ ಸೆಲೆಬ್ರೆಟಿಗಳು ಕೂಡ ಮನುಷ್ಯರೇ. ಎಲ್ಲರಲ್ಲಿ ಇರುವಂತೆ ಕೆಲ ಗೊಂದಲ ಅವರಲ್ಲಿ ಕೂಡ ಇರುತ್ತವೆ. ಹೀಗೆ ಕೆಲವೊಮ್ಮೆ ಉಂಟಾಗುವ ಸಣ್ಣ ಪುಟ್ಟ ಗೊಂದಲಗಳಿಂದ ಕೂಡ ತಾರೆಯರು ಮುಜುಗರಕ್ಕೀಡಾಗುತ್ತಾರೆ. ಇದಕ್ಕೆ ಹಾಲು ಬಣ್ಣದ ಚೆಲುವೆ ತಮನ್ನಾ ಸದ್ಯದ ಉದಾಹರಣೆ.

ಹೌದು, ತಮ್ಮ ಪ್ರಿಯಕರ ವಿಜಯ್ ವರ್ಮಾ ಜೊತೆ ಸಪ್ತಪದಿಯನ್ನು ತುಳಿಯಲು ಸಿದ್ಧರಾಗಿರುವ ತಮನ್ನಾ ಮೊನ್ನೆ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ತೆರಳಿದ್ದರು. ತಮ್ಮ ಮದುವೆಯ ವಸ್ತ್ರ ವಿನ್ಯಾಸದ ಕುರಿತು ಚರ್ಚೆ ಮಾಡಲು ಹೋಗಿದ್ದರಾ ಗೊತ್ತಿಲ್ಲ. ಯಾಕೆಂದರೆ ತಮ್ಮ ಮದುವೆಯ ವೇಷ ಭೂಷಣವನ್ನು ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದರೆ ಸಾಕು ಎಂದು ಅನೇಕ ತಾರೆಯರು ಕಾಯುತ್ತಾರೆ. ಹಾತೊರೆಯುತ್ತಾರೆ. ಈ ಕಾರಣಕ್ಕೆ ಮದುವೆಯ ಬಟ್ಟೆಯ ಕುರಿತು ಮಾತನಾಡಲು ತಮನ್ನಾ ಹೋಗಿದ್ದರು ಹೋಗಿರಬಹುದು.

At Manish Malhotra s residence the beautiful Tamannaah confused the camera with the doorbell

ಆದರೆ ಹೀಗೆ ಮನೀಷ್ ಮಲ್ಹೋತ್ರಾ ಮನೆಗೆ ಹೋದ ತಮನ್ನಾಗೆ ಮನೆಯ ಬೆಲ್ ಯಾವುದು, ಎಲ್ಲಿದೆ ಎಂದು ಗೊತ್ತಾಗಿಲ್ಲ. ಹೀಗಾಗಿಯೇ ಬೆಲ್ ಹುಡುಕುತ್ತಾ ತಮನ್ನಾ ಮನೀಷ್ ಮಲ್ಹೋತ್ರಾ ಮನೆಯಾಚೆ ಇದ್ದ ಕ್ಯಾಮರಾವನ್ನೇ ಬೆಲ್ ಎಂದು ತಿಳಿದುಕೊಂಡು ಪ್ರೆಸ್ ಮಾಡಿದ್ದಾರೆ.

ಇನ್ನು ನಿಮಗೆ ಗೊತ್ತು.. ಬಾಲಿವುಡ್‌ನಲ್ಲಿ ಹೋದಲ್ಲಿ ಬಂದಲ್ಲಿ ಕ್ಯಾಮರಾ ಕರೆಸಿಕೊಳ್ಳುವ ಸಂಪ್ರದಾಯ ಇದೆ. ಮನೀಷ್ ಮಲ್ಹೋತ್ರಾ ಮನೆಗೆ ತಮನ್ನಾ ಹೋದಾಗ ಕೂಡ ಅಲ್ಲಿ ಮನೆಯಾಚೆ ಪಾಪರಾಜಿಗಳು ಬಿಡಾರ ಹೂಡಿದ್ದರು. ತಮನ್ನಾ ವಿಡಿಯೋವನ್ನು ಸೆರೆ ಹಿಡಿಯುತ್ತಿದ್ದರು. ಇದೇ ಸಮಯದಲ್ಲಿ ತಮನ್ನಾ ಪರದಾಟವನ್ನು ಕಂಡ ಪಾಪರಾಜಿಗಳು ಕ್ಯಾಮರಾವನ್ನು ಬೆಲ್ ಎಂದು ತಿಳಿದುಕೊಂಡು ತಮನ್ನಾ ಪ್ರೆಸ್ ಮಾಡಿದಾಗ ಪಾಪರಾಜಿಗಳು ಅಯ್ಯೋ ಮೇಡಂ ಅದು ಬೆಲ್ ಅಲ್ಲ ಕ್ಯಾಮರಾ ಎಂದು ಹೇಳಿದ್ಧಾರೆ. ಬೆಲ್ ಆ ಕಡೆ ಇದೆ ನೋಡಿ ಎಂದು ತಮನ್ನಾಗೆ ಹೇಳಿದ್ದಾರೆ.

ಬಹುಶಃ ತಮನ್ನಾ ಜಾಗದಲ್ಲಿ ಬೇರೆ ಯಾರೇ ಆಗಿದ್ದರು ಕೂಡ ಮುಜುಗರಕ್ಕೀಡಾದ ಹಿನ್ನೆಲೆ ಪಾಪರಾಜಿಗಳ ಮೇಲೆ ಸಿಡಿಮಿಡಿಗೊಳ್ಳುತ್ತಿದ್ದರು. ಆದರೆ, ತಮನ್ನಾ ಮಾತ್ರ ಮುಗ್ದತೆಯಿಂದ ಕ್ಯಾಮರಾದವರ ಕಡೆ ಕಣ್ಣಾಯಿಸಿದ್ದಾರೆ. ಆ ನಂತರ ಬೆಲ್ ಹುಡುಕುತ್ತಾ ಮನೆಯ ಬಾಗಿಲ ಬಳಿ ತೆರಳಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮನ್ನಾ ಅವರ ಸರಳತೆ ಮತ್ತು ಮುಗ್ದತೆ ಅನೇಕರ ಹೃದಯವನ್ನು ಗೆದ್ದಿದೆ.

ಕೆಲವರಿಗೆ ತಮನ್ನಾ ಅವರ ಕಾಟನ್ ಸಲ್ವಾರ್ ಕಮೀಜ್ ಇಷ್ಟವಾಗಿದ್ದರೆ, ಇನ್ನೂ ಕೆಲವರು ಸರಳ ಸುಂದರಿ ಎಂದು ಕರೆದಿದ್ದಾರೆ. ಮತ್ತೊಬ್ಬರು ತಮನ್ನಾ ಎಷ್ಟೊಂದು ಮುದ್ದಾಗಿ ಕಾಣುತ್ತಿದ್ದಾರೆ ಎಂದರೆ ಇನ್ನೊಬ್ಬರು ತಮನ್ನಾ ಕೂಡ ನಮ್ಮಂತೆಯೇ ಅವರಿಗೂ ಕೂಡ ಕನ್ಪ್ಯೂಸ್ ಆಗುತ್ತೆ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ. ನಿಮಗೆ ಯಾರ ಮನೆಯಲ್ಲಿ ಎಲ್ಲಿ ತೂತು ಇರುತ್ತೆ ಎನ್ನುವುದು ಕೂಡ ಗೊತ್ತಿರುತ್ತಲ್ವಾ ಎಂದು ಪಾಪರಾಜಿಗಳ ಕಾಲೆಳೆದಿದ್ದಾರೆ.

ಇನ್ನುಳಿದಂತೆ ಮುಂದಿನ ವರ್ಷದ ಆರಂಭದಲ್ಲಿ ಇಬ್ಬರು ಅದ್ಧೂರಿಯಾಗಿ ಮದುವೆಯಾಗಲಿದ್ದಾರಂತೆ ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಮನ್ನಾ ಮತ್ತು ವಿಜಯ್ ವರ್ಮಾ ಜೊತೆಯಲ್ಲಿ ವಾಸ ಮಾಡಲು ಭವ್ಯವಾದ ಬಂಗಲೆಯನ್ನು ಹುಡುಕುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.ಹೀಗಾಗಿ 2025ರಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಮದುವೆ ಖಚಿತ- ನಿಶ್ಚಿತ ಅಂತಲೇ ಎಲ್ಲರೂ ಭಾವಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X