ಅರ್ಜುನ್‌ ಕಪೂರ್‌ನ ಮರೆತು 51ನೇ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದ ಮಲೈಕಾ ಅರೋರಾ..!

ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಇದಕ್ಕೆ ಮಲೈಕಾ ಅರೋರಾ ಸದ್ಯದ ಉದಾಹರಣೆ.

ಹೌದು, ಅರ್ಜುನ್ ಕಪೂರ್‌ಗಾಗಿ ಅರ್ಬಾಜ್ ಖಾನ್‌ಗೆ ತಲಾಖ್ ನೀಡಿದ್ದ ಮಲೈಕಾ, ಈಗ ಅರ್ಜುನ್ ಕಪೂರ್ ಜೊತೆಯೂ ಇಲ್ಲ. ಇದು ಎಲ್ಲರಿಗೆ ಗೊತ್ತಿರುವಂಥದ್ದೇ. ಸದ್ಯದ ಸಮಾಚಾರ ಏನೆಂದರೆ ಅರ್ಜುನ್ ಕಪೂರ್ ಅವರಿಂದ ದೂರವಾದ ಮಲೈಕಾ ಅರೋರಾ ಅವರ ಮನಸನ್ನು ಈಗ ರಾಹುಲ್ ವಿಜಯ್ ಗೆದ್ದಿದ್ದಾರೆ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಮೊನ್ನೆಯ ದಿವಸ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎ.ಪಿ. ದಿಲ್ಲೋನ್ ಅವರ ಸಂಗೀತ ಸಂಜೆಗೆ ರಾಹುಲ್ ವಿಜಯ್ ಜೊತೆ ಮಲೈಕಾ ಅರೋರಾ ಹೋಗಿದ್ದಾರೆ. ಹಾಡು ಕೇಳುತ್ತಾ ಕುಣಿದಿದ್ದಾರೆ. ಸಖತ್ ಎಂಜಾಯ್ ಮಾಡಿದ್ದಾರೆ.

at-the-age-of-51-did-malaika-arora-find-love-again-after-her-breakup-with-arjun-kapoor

ಇನ್ನು ರಾಹುಲ್ ವಿಜಯ್ ಕೂಡ ಮಲೈಕಾ ಅರೋರಾ ಜೊತೆ ಸೆಲ್ಪಿ ಕ್ಲಿಕಿಸಿಕೊಂಡಿದ್ದು, ಈ ಫೋಟೊವನ್ನು ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿತ್ ಯೂ ಹಾಡನ್ನು ಹಾಕಿ ಶೇರ್ ಮಾಡಿದ್ದಾರೆ. ಇನ್ನು ಕಳೆದ ವಾರ ಕೂಡ ಮಲೈಕಾ ಅರೋರಾ ಇದೇ ರಾಹುಲ್ ವಿಜಯ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ರೆಸ್ಟೋರೆಂಟ್‌ ನಲ್ಲಿ ಒಟ್ಟಿಗೆ ಊಟವನ್ನು ಮಾಡಿದ್ದರು.

ಅಂದ್ಹಾಗೇ ಮಲೈಕಾ ಅವರ ಹೊಸ ಮನದರಸನಾದ ರಾಹುಲ್ ವಿಜಯ್ ವೃತ್ತಿಯಲ್ಲಿ ಸ್ಟೈಲಿಸ್ಟ್. ಫ್ಯಾಷನ್ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ರಾಹುಲ್ ವಿಜಯ್ 2011ರಿಂದ ಈ ಕ್ಷೇತ್ರದಲ್ಲಿದ್ದಾರೆ. ಇನ್ನು ಲ್ಯಾಕ್ಮೆ ಫ್ಯಾಶನ್ ವೀಕ್‌ನ ಮೂವರು ನಿರ್ದೇಶಕರಲ್ಲಿ ಇವರು ಕೂಡ ಒಬ್ಬರು. ರಾಜೇಶ್ ಪ್ರತಾಪ್ ಸಿಂಗ್,ಆಶಿಕ್ ಸೋನಿಯಂತಹ ವಿನ್ಯಾಸಕರ ಜೊತೆ ಸ್ನೇಹಿವನ್ನು ಹೊಂದಿರುವ ರಾಹುಲ್ ವಿಜಯ್, ಮಲೈಕಾ ಅರೋರ ಅವರಿಗೆ ಪರಿಚಯವಾಗಿದ್ದು ಎಲ್ಲಿ ಮತ್ತು ಹೇಗೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಮಲೈಕಾ ಅರೋರಾ ಮತ್ತು ರಾಹುಲ್ ವಿಜಯ್ ಅವರ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಇನ್ನುಳಿದಂತೆ ಕೆಲ ದಿನಗಳ ಹಿಂದೆ ಸಂದರ್ಶನ ನೀಡಿದ್ದ ಮಲೈಕಾ ಅರೋರಾ, ಬದುಕಿನಲ್ಲಿ ಏನೇ ಆಗಲಿ ಆದರೆ ನಿಜವಾದ ಪ್ರೀತಿಯಲ್ಲಿನ ನಂಬಿಕೆಯನ್ನು ನಾನು ಯಾವತ್ತು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೇಳಿ..ಕೇಳಿ.. ನನ್ನದು ವೃಶ್ಚಿಕ್ ರಾಶಿ. ಹೀಗಾಗಿ ಕೊನೆಯವರೆಗೆ ನಾನು ಪ್ರೀತಿಗಾಗಿ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಆದರೆ ನಾನು ವಾಸ್ತವದಲ್ಲಿ ಬದುಕುವವಳು. ನನಗೆ ಯಾವ ಹಂತದಲ್ಲಿ ಗೆರೆ ಹಾಕಬೇಕು ಎನ್ನುವುದು ಗೊತ್ತಿದೆ ಎಂದು ಕೂಡ ಹೇಳಿದ್ದರು. ಮುಂದುವರೆದು ಮೊದಲೆಲ್ಲ ಕೆಲವು ವಿಷಯಗಳು ಮತ್ತು ಟ್ರೋಲ್‌ಗಳು ನನ್ನ ಮೇಲೆ ಕೂಡ ಪರಿಣಾಮ ಬೀರುತ್ತಿದ್ದವು ಎಂದು ಹೇಳಿರುವ ಮಲೈಕಾ, ಇದೆಲ್ಲದರಿಂದ ನನಗೆ ನಿದ್ದೆಯೇ ಬರುತ್ತಿರಲಿಲ್ಲ ಎಂದಿದ್ದರು. ಹಲವಾರು ಬಾರಿ ನೊಂದು ಬೆಂದು ಕಣ್ಣೀರು ಹಾಕಿರುವುದಾಗಿಯೂ ಹೇಳಿದ್ದರು. ಆದರೆ.. ಆ ಕಣ್ಣೀರು ಕೇವಲ ನಾಲ್ಕು ಗೋಡೆಗಳ ನಡುವೆ ಅಷ್ಟೇ ಕಾಣಿಸುತ್ತೆ ಹೊರತು, ಸಾರ್ವಜನಿಕವಾಗಿ ನಾನು ಯಾವತ್ತು ಕಣ್ಣೀರು ಹಾಕಲಾರೆ ಎಂದು ಹೇಳಿದ್ದರು ಮಲೈಕಾ ಅರೋರಾ.

More from Filmibeat

Read more about: malaika arora love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X