For Quick Alerts
  ALLOW NOTIFICATIONS  
  For Daily Alerts

  ರಣ್ಬೀರ್-ಆಲಿಯಾರ ನೆರೆಯವರಾಗಲಿದ್ದಾರೆ ಕೆ.ಎಲ್.ರಾಹುಲ್-ಆತಿಯಾ ಶೆಟ್ಟಿ

  |

  ಬಾಲಿವುಡ್‌ನಲ್ಲಿ ಈಗ ಮದುವೆಗಳ ಸಂಭ್ರಮ. ರಣ್ಬೀರ್ ಕಪೂರ್-ಆಲಿಯಾ ಭಟ್ ವಿವಾಹದ ಬಳಿಕ ಇದೀಗ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ನಟಿ ಆತಿಯಾ ಶೆಟ್ಟಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

  ಈ ಐಪಿಎಲ್ ಸೀಸನ್ ಮುಗಿದ ಕೂಡಲೇ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ಪರಸ್ಪರ ವಿವಾಹವಾಗಲಿದ್ದು, ವಿವಾಹಕ್ಕೆ ಮುನ್ನವೇ ತಮ್ಮ ಜೀವನಕ್ಕೆ ವಿಶೇಷ ಯೋಜನೆಗಳನ್ನು ಈ ಜೋಡಿ ಮಾಡಿಕೊಂಡಿದ್ದಾರೆ.

  ಮದುವೆಯಾದ ಮೇಲೆ ಸಂಸಾರ ಹೂಡಲೆಂದು ಐಶಾರಾಮಿ ಮನೆಯನ್ನು ಈಗಾಗಲೇ ಖರೀದಿಸಿಟ್ಟಿದೆ ಈ ತಾರಾ ಯುವ ಜೋಡಿ.

  ಬಾಂದ್ರಾದ ಕಾಟರ್‌ ರಸ್ತೆಯ ಬಳಿ 4 ಬಿಎಚ್‌ಕೆ ಮನೆಯೊಂದನ್ನು ಖರೀದಿಸಿದ್ದಾರೆ. ಪಾಲಿ ಬಿಲ್ಡಿಂಗ್‌ನಲ್ಲಿ ಸೀ ಫೇಸಿಂಗ್ ಮನೆಯಾಗಿರುವ ಇದಕ್ಕೆ ದೊಡ್ಡ ಮೊತ್ತದ ಹಣವನ್ನೇ ಈ ತಾರಾ ಜೋಡಿ ನೀಡಿದ್ದಾರೆ.

  ಈ ಮನೆಗೆ ಆಗಾಗ್ಗೆ ಸುನಿಲ್ ಶೆಟ್ಟಿ ಪತ್ನಿಯೊಂದಿಗೆ ಬಂದು ಹೋಗಿ ಮಾಡುತ್ತಿದ್ದಾರಂತೆ. ಮನೆಯ ಒಳಾಂಗಣ ವಿನ್ಯಾಸವನ್ನು ಆತಿಯಾ ಶೆಟ್ಟಿ ಖುದ್ದಾಗಿ ಹಾಜರಿದ್ದು ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಪಾರ್ಟ್‌ಮೆಂಟ್‌ನ ಒಂಬನೇ ಮಹಡಿಯಲ್ಲಿ ಮನೆ ಇದ್ದು, ಮನೆಯ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ.

  ರಣ್ಬೀರ್ ಹಾಗೂ ಆಲಿಯಾ ವಾಸವಿರುವ 'ವಾಸ್ತು' ಹೆಸರಿನ ಹೊಸ ಮನೆಗೆ ಪಕ್ಕದಲ್ಲೇ ಈ ಬಿಲ್ಡಿಂಗ್ ಇದ್ದು ಇನ್ನು ಮುಂದೆ ರಾಹುಲ್ ಹಾಗೂ ರಣ್ಬೀರ್ ನೆರೆ-ಹೊರೆಯವರಾಗಲಿದ್ದಾರೆ.

  ಐಪಿಎಲ್ ಹಾಗೂ ಟಿ20 ವಿಶ್ವಕಪ್ ಸೀಸನ್ ಮುಗಿದ ಬಳಿಕ ಕೆ.ಎಲ್.ರಾಹುಲ್ ಹಾಗೂ ಆತಿಯಾ ಶೆಟ್ಟಿ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ. ಸುನಿಲ್ ಶೆಟ್ಟಿ ಮಗಳಾದ ಆತಿಯಾ ಶೆಟ್ಟಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ವರೆಗೆ ದೊಡ್ಡ ಹಿಟ್ ನೀಡಿಲ್ಲ. ಇನ್ನು ಕೆಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರರಾಗಿದ್ದಾರೆ.

  ಕೆಎಲ್ ರಾಹುಲ್ ಕರ್ನಾಟಕದವರು, ಆತಿಯಾ ಶೆಟ್ಟಿ ಮೂಲವೂ ಕರ್ನಾಟಕವೇ, ಹಾಗಾಗಿ ಈ ಜೋಡಿ ಮದುವೆಯ ನಂತರ ಬೆಂಗಳೂರಿನಲ್ಲಿ ನೆಲೆಸಲಿದ್ದಾರೆ ಎನ್ನಲಾಗುತ್ತು. ಆದರೆ ಮುಂಬೈನಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ.

  ಕೆಎಲ್ ರಾಹುಲ್ ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದು, ಲಖನೌ ತಂಡದ ನಾಯಕತ್ವ ವಹಿಸಿದ್ದಾರೆ. ಅವರ ತಂಡ ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿದೆ. ಇನ್ನು ಆತಿಯಾ ಶೆಟ್ಟಿ ಈವರೆಗೆ ನಾಲ್ಕು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಬಳಿಕ ಅವರಿಗೆ ಹೆಚ್ಚಿನ ಅವಕಾಶಗಳು ದೊರಕಿಲ್ಲ.

  English summary
  Athiya Shetty and KL Rahul bought new house in Bandra Katar Road. It is a 4 BHK sea face house. House is very near to Alia Bhatt Ranbir's new house.
  Monday, May 2, 2022, 10:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X