Don't Miss!
- Education
Chamarajanagar WCD Recruitment 2021: 223 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Sports
ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ - Automobiles
ಕೇವಲ 2.7 ಸೆಕೆಂಡ್ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ - News
ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ - Lifestyle
ಈ ನೈಸರ್ಗಿಕ ವಿಷಯಗಳಿಂದ ನಿಮ್ಮ ಬ್ಲಾಕ್ ಹೆಡ್ಸ ನ್ನು ತೆಗೆದುಹಾಕಬಹುದು - Finance
ಚಿನ್ನದ ಬೆಲೆ ಇಳಿಕೆ: 3 ದಿನಗಳಲ್ಲಿ 1,000 ರೂಪಾಯಿ ಕುಸಿತ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋ ಮೂಲಕ ಕೆ.ಎಲ್ ರಾಹುಲ್ ಗೆ ಶುಭಕೋರಿದ ರೂಮರ್ ಗರ್ಲ್ ಫ್ರೆಂಡ್ ಅತಿಯಾ ಶೆಟ್ಟಿ
ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 29ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್ ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗ ಮತ್ತು ಕ್ರೀಡಾರಂಗದ ಗಣ್ಯರು ಶುಭಕೋರುತ್ತಿದ್ದಾರೆ.
ವಿಶೇಷ ಎಂದರೆ ರಾಹುಲ್ ಜನ್ಮದಿನಕ್ಕೆ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ಬಾಲಿವುಡ್ ನಟಿ, ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಪ್ರೀತಿಯ ವಿಶ್ ತಿಳಿಸಿದ್ದಾರೆ. ರಾಹುಲ್ ಜೊತೆ ಇರುವ ಫೋಟೋ ಹಂಚಿಕೊಂಡು ಗ್ರೇಟ್ ಫುಲ್ ಎಂದಿದ್ದಾರೆ.
ಹೂಗಳೆಂದರೆ ಇಷ್ಟ ಎಂದ ಗೆಳತಿಗೆ ಹೂ ಕಳಿಸಿದ ಕೆಎಲ್ ರಾಹುಲ್
ಇಬ್ಬರ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಅನೇಕ ಬಾರಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಆದರೆ ಇಬ್ಬರ ಪ್ರೀತಿ-ಪ್ರೇಮದ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಬ್ಬರ ಸ್ನೇಹ ಬಾಂಧವ್ಯ ಡೇಟಿಂಗ್ ವಿಚಾರವನ್ನು ಬಹಿರಂಗ ಪಡಿಸುತ್ತಿದೆ.
ಇಂದು ರಾಹುಲ್ ಹುಟ್ಟುಹಬ್ಬದ ದಿನ ಮಿರರ್ ಮುಂದೆ ಇಬ್ಬರು ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. 'ಗ್ರೇಟ್ ಫುಲ್ ಟು ಯು. ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ಅತಿಯಾ ಪೋಸ್ಟ್ ಗೆ ನೆಟ್ಟಿಗರು, ಬಾಲಿವುಡ್ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯ ಕೋರುತ್ತಿದ್ದಾರೆ.
ವಿಶೇಷ ಎಂದರೆ ನಟ ಸುನಿಲ್ ಶೆಟ್ಟಿ ಕೂಡ ಕಾಮೆಂಟ್ ಮಾಡಿ, ನಿಜವಾಗಿಯು ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಕಳೆದ ವರ್ಷ ಅತಿಯಾ ಹುಟ್ಟುಹಬ್ಬಕ್ಕೆ ರಾಹುಲ್ ವಿಶ್ ಮಾಡಿ, ಮ್ಯಾಡ್ ಚೈಲ್ಡ್ ಎಂದು ಹೇಳಿದ್ದರು. ಇಬ್ಬರ ಫೋಟೋಗಳು ಆಗಾಗ ವೈರಲ್ ಆಗುತ್ತಾ ಇರುತ್ತೆ. ಸುಂದರ ಜೋಡಿಯ ಮುದ್ದಾದ ಫೋಟೋಗಳಿಗೆ ಅಭಿಮಾನಿಗಳು ಲೈಕ್ ಮಾಡಿ, ಮೆಚ್ಚುಗೆಯ ಕಾಮೆಂಟ್ ಮಾಡುತ್ತಿರುತ್ತಾರೆ.
ಕಳೆದ ವರ್ಷ ಅತಿಯಾ ಮತ್ತು ರಾಹುಲ್ ಪ್ರೀತಿಯ ವಿಚಾರವಾಗಿ, ನಟ ಸುನಿಲ್ ಶೆಟ್ಟಿ ಅವರನ್ನು ಕೇಳಿದಾಗ, 'ನಾನು ಈ ರೀತಿಯ ಯಾವುದೇ ಸಂಬಂಧ ಹೊಂದಿಲ್ಲ. ಅದರ ಬಗ್ಗೆ ಅತಿಯಾಳನ್ನೇ ಕೇಳಿ' ಎಂದು ತೀಕ್ಷ್ಣವಾಗಿ ಹೇಳಿದ್ದರು.


Click it and Unblock the Notifications






























