ಆಶಾ ಭೋಸ್ಲೆಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಸುನಿಲ್ ಶೆಟ್ಟಿ ಮಗಳು ಆಥಿಯಾ ಎಡವಟ್ಟು ; ಕರುನಾಡಿನ ಸೊಸೆ ವಿರುದ್ಧ ಆಕ್ರೋಶ

ಸಾಮಾನ್ಯ ಜ್ಞಾನ ತುಂಬಾನೇ ಮುಖ್ಯ. ಯಾಕೆಂದರೆ ಜ್ಞಾನ ಸಾಮಾನ್ಯವಾದರು ಅದು ಅಸಮಾನ್ಯ. ಮನುಷ್ಯನಲ್ಲಿ ಇರಲೇಬೇಕಾದ ಪ್ರಮುಖ ಗುಣ. ಆದರೆ.. ಈ ಜ್ಞಾನ ಪಠ್ಯ ಪುಸ್ತಕದಲ್ಲಿ ಲಭ್ಯ ಇರುವುದಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆ ಕೂಡ ಬರುವುದಿಲ್ಲ.

ಹೀಗಾಗಿ ಹಲವರು ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಾರೆ ಹೊರತು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವ ಉತ್ಸಾಹ ತೋರಿಸುವುದಿಲ್ಲ. ಜೀವನಾನುಭವದ ಮೂಲಕ ಬೇರೆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ನನಗೆ ಎಲ್ಲವೂ ಗೊತ್ತು ಎಂಬ ಭ್ರಮೆಯಲ್ಲಿ ಇವರು ಓಡಾಡುತ್ತಾರೆ.

Athiya Shetty Faces Backlash Over Massive Identity Blunder in Asha Bhosle Tribute

ಬದಲಾದ ಈ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಹಂಚಿಕೊಳ್ಳುವ ಮುನ್ನವೂ ಕೂಡ ಸಾಮಾನ್ಯ ಜ್ಞಾನವನ್ನು ಇವರು ಉಪಯೋಗ ಮಾಡುವುದಿಲ್ಲ. ತಂತ್ರಜ್ಞಾನದ ಮೂಲಕವಾದರೂ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಉದಾಹರಣೆಗೆ ಆಥಿಯಾ ಶೆಟ್ಟಿ ಅವರನ್ನೇ ತೆಗೆದುಕೊಳ್ಳಿ.

ಹೌದು.. ಆಥಿಯಾ ಶೆಟ್ಟಿ, ಬಾಲಿವುಡ್‌ನ ಅಣ್ಣ ಸುನೀಲ್ ಶೆಟ್ಟಿಯ ಮುದ್ದಿನ ಮಗಳು. ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್, ಕನ್ನಡಿಗ ಕೆ.ಎಲ್.ರಾಹುಲ್ ಪತ್ನಿ.

2023ರಲ್ಲಿ ಕೆ.ಎಲ್.ರಾಹುಲ್ ಜೊತೆ ಸಪ್ತಪದಿಯನ್ನು ತುಳಿದ ಆಥಿಯಾಗೆ ಚಿತ್ರರಂಗದಲ್ಲಿ ಗೆಲುವು ಸಿಗಲಿಲ್ಲ. ಮಾಡಿದ ಮೂರು ಮತ್ತೊಂದು ಚಿತ್ರಗಳಲ್ಲಿ ಯಾವ ಚಿತ್ರ ಕೂಡ ಹೆಸರು ತಂದು ಕೊಡಲಿಲ್ಲ. ಆದರೂ ಮಾಡೆಲಿಂಗ್ ಕ್ಷೇತ್ರದಲ್ಲಿ ಆಥಿಯಾಗೆ ಬೇಡಿಕೆ ಇದೆ. ಜಾಹೀರಾತು ಕ್ಷೇತ್ರದಲ್ಲಿ ಆಥಿಯಾ ಅವರಿಗೆ ಉತ್ತಮವಾದ ಬೆಲೆಯೂ ಇದೆ.

ಸದ್ಯ ಆಥಿಯಾ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದು ಮನೆ-ಮಕ್ಕಳು-ಗಂಡ-ಸಂಸಾರ ಎಂದು ಮುಳುಗಿ ಹೋಗಿದ್ದಾರೆ. ಇಂಥಾ ಆಥಿಯಾ ಸದ್ಯ ಅಪಹಾಸ್ಯಕ್ಕೀಡಾಗಿದ್ದಾರೆ. ಟ್ರೋಲಿಗರಿಗೆ ಆಹಾರವಾಗಿದ್ದಾರೆ.

Athiya Shetty Faces Backlash Over Massive Identity Blunder in Asha Bhosle Tribute

ಹೌದು, ಎಲ್ಲರಿಗೆ ಗೊತ್ತಿರುವಂತೆ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ನಿನ್ನೆ( ಏಪ್ರಿಲ್ 12) ಬರಸಿಡಿಲಿನಂತೆ ಬಂದು ಬಡಿದಿತ್ತು. ಚಿತ್ರರಂಗದವರು ಮಾತ್ರವಲ್ಲದೇ ರಾಜಕೀಯ ಗಣ್ಯರು.. ಕ್ರೀಡಾ ತಾರೆಯರು.. ಜನಸಾಮಾನ್ಯರು ಕೂಡ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಆಶಾ ಭೋಸ್ಲೆ ಅವರ ಕಲಾ ಸೇವೆ, ಅವರ ಹಾಡುಗಳನ್ನು ನೆನೆದು ಕಣ್ಣೀರು ಹಾಕಿದ್ದರು.

ಇದೇ ಸಮಯದಲ್ಲಿ ತಮ್ಮ ನೋವನ್ನು ಹೊರ ಹಾಕಲು ಮುಂದಾಗಿದ್ದ ಆಥಿಯಾ ಶೆಟ್ಟಿ, ಶೇರ್, ಲೈಕ್, ಸಬ್‌ಸ್ಕ್ರೈಬ್, ಫಾಲೋ ಮಂತ್ರ ಜಪಿಸುವ ಈ ಕಾಲದಲ್ಲಿ ಆತುರಾತುರವಾಗಿ ಆಶಾ ಭೋಸ್ಲೆ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಮುಂದಾಗಿದ್ದಾರೆ.

ಎಲ್ಲರಿಗಿಂತ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಅಪ್‌ಡೇಟ್ ಮಾಡುವ ಭರದಲ್ಲಿ ಆಶಾ ಭೋಸ್ಲೆ ಅವರ ಬದಲು ನಾಲ್ಕು ವರ್ಷದ ಹಿಂದೆ ಅಗಲಿದ ಆಶಾ ಭೋಸ್ಲೆ ಅವರ ಅಕ್ಕ ಮತ್ತು ಗಾನ ಕೋಗಿಲೆ-ಭಾರತ ರತ್ನ ಲತಾ ಮಂಗೇಶ್ಕರ್ ಅವರ ಫೋಟೊವನ್ನು ತಮ್ಮ ಸ್ಟೋರಿಯಲ್ಲಿ ಹಾಕಿದ್ದಾರೆ. ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ತಾವು ಮಾಡಿದ ಈ ತಪ್ಪಿನ ಅರಿವು ಆಥಿಯಾ ಅವರಿಗೆ ಯಾವಾಗ ಆಯ್ತು ಗೊತ್ತಿಲ್ಲ. ಆದರೆ.. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಹಲವರು ಆಥಿಯಾ ಅವರ ಸ್ಟೋರಿಯ ಸ್ಕ್ರೀನ್ ಶಾಟ್‌ ಕ್ಲಿಕ್ ಮಾಡಿ ತಮ್ಮ ಬಳಿ ಸೇವ್ ಮಾಡಿಕೊಂಡಿದ್ದರು. ಟ್ರೋಲ್ ಮಾಡಲು ಶುರು ಮಾಡಿದರು. ತಪ್ಪಿನ ಅರಿವಾಗಿ ಆ ನಂತರ ಸ್ಟೋರಿ ಡಿಲೀಟ್ ಮಾಡಿ ಪುನಃ ಆಶಾ ಭೋಸ್ಲೆ ಅವರ ಬೇರೆ ಫೋಟೊವನ್ನು ಹಂಚಿಕೊಂಡಿದ್ದಾರಾದರೂ ಟ್ರೋಲಿಗರಿಗೆ ಇನ್ನೂ ಸಮಾಧಾನವಾಗಿಲ್ಲ.

Photo Credit Athiya Shetty Instagram

ಹೀಗಾಗಿಯೇ ಆಥಿಯಾ ವಿರುದ್ಧ ಕೆಂಡ ಕಾರುತ್ತಿರುವ ಹಲವರು, ಬಾಲಿವುಡ್‌ನಲ್ಲಿಯೇ ತಿಂದು-ಉಂಡು-ಬೆಳೆದರೂ ಕೂಡ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಯಾರು ಎನ್ನುವುದೇ ನಿಮಗೆ ಗೊತ್ತಿಲ್ಲವಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ಧಾರೆ. ನೋಡಲು ಸುಂದರವಾಗಿದ್ದೀರಾ ಆದರೆ ನಿಮ್ಮ ತಲೆಯಲ್ಲಿ ಬುದ್ದಿ ಮಾತ್ರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ಅರಿವಿನ ಕೊರತೆ.. ಸಾಂಸ್ಕೃತಿಕ ಅನಕ್ಷರತೆ..ನಾಚಿಕೆಗೇಡು.. ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Athiya Shetty faces intense social media backlash after a major tribute fail. See why fans are calling her "embarrassing" for mixing up these two music icons.
Read more about: sunil shetty troll kl rahul
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X