ಕೆ.ಎಲ್ ರಾಹುಲ್-ಅತಿಯಾ ಪ್ರೀತಿ ವಿಷ್ಯ ಬಿಚ್ಚಿಡ್ತು ರೋಮ್ಯಾಂಟಿಕ್ ಫೋಟೋ ಮತ್ತು ವಿಶ್
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 28ನೇ ವರ್ಷದ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ರಾಹುಲ್ ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗ ಮತ್ತು ಕ್ರೀಡಾರಂಗದ ಗಣ್ಯರು ಶುಭಕೋರುತ್ತಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿಯೆ ರಾಹುಲ್ ಪ್ರೀತಿಯ ವಿಚಾರ ಬಹಿರಂಗವಾಗಿದೆ.
ಹೌದು, ಕೆ.ಎಲ್.ರಾಹುಲ್, ಬಾಲಿವುಡ್ ನಟಿ ಅತಿಯಾ ಶೆಟ್ಟಿ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ, ಇಬ್ಬರು ಪ್ರೀತಿ-ಪ್ರೇಮ ಅಂತ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಆತಿಯಾ ಅಥವಾ ರಾಹುಲ್ ಎಲ್ಲಿಯೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರಿವತ್ತು ಹುಟ್ಟುಹಬ್ಬದ ದಿನ ಅತಿಯಾ ಮತ್ತು ರಾಹುಲ್ ಪ್ರೀತಿಯನ್ನು ಅಧಿಕೃತವಾಗಿ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮುಂದೆ ಓದಿ..

ಪ್ರೀತಿ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಿದ್ದ ಜೋಡಿ
ಕನ್ನಡಿಗ ಕೆ.ಎಲ್ ರಾಹುಲ್, ಬಾಲಿವುಡ್ ನ ಸ್ಟಾರ್ ನಟ, ಕನ್ನಡಿಗ ಸುನೀಲ್ ಶೆಟ್ಟಿ ಮಗಳು ಅತಿಯಾ ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ವರ್ಷದಿಂದ ಕೇಳಿ ಬರುತ್ತಿದೆ. ನಟಿ ಅತಿಯಾ ಶೆಟ್ಟಿ ಮತ್ತು ರಾಹುಲ್ ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈ ಬಗ್ಗೆ ಕೇಳಿದರೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

'ನನ್ನ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು..'
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೆ.ಎಲ್ ರಾಹುಲ್ ಗೆ ನಟಿ ಅತಿಯಾ ಶೆಟ್ಟಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಅತಿಯಾ "ನನ್ನ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು" ಎಂದು ವಿಶ್ ಮಾಡಿ ಹಾರ್ಟ್ ಇಮೋಜಿ ಹಾಕಿದ್ದಾರೆ.

ಮೊದಲ ಬಾರಿಗೆ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ ಜೋಡಿ
ರಾಹುಲ್ ಮತ್ತು ಅತಿಯಾ ಶೆಟ್ಟಿ ಪ್ರೀತಿಯ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲವಾದರೂ, ಗುಟ್ಟಗೇನು ಉಳಿದಿಲ್ಲ. ಆದರೆ ಮೊದಲ ಬಾರಿಗೆ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರು ಕ್ಲೋಸ್ ಆಗಿ ಕುಳಿತು, ನಗುತ್ತಿರುವ ಫೋಟೋ ಇದಾಗಿದೆ. ಅತಿಯಾ ಪ್ರೀತಿಯ ರಾಹುಲ್ ಗೆ ವಿಶ್ ಮಾಡಿರುವ ಫೋಸ್ಟ್ ಗೆ, ಬಾಲಿವುಡ್ ನ ಅನೇಕ ಮಂದಿ ಶುಭಾಶಯ ಕೋರಿದ್ದಾರೆ.

ಮಗಳನ್ನೆ ಕೇಳಿ ಎಂದಿದ್ದ ಸುನಿಲ್
ಇನ್‌ಸ್ಟಾಗ್ರಾಂನಲ್ಲಿ ರಾಹುಲ್, ಅತಿಯಾ ಜತೆಗಿನ ಫೋಟೊಗಳನ್ನು ಈ ಹಿಂದೆ ಹಾಕಿಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಅತಿಯಾ ಜನ್ಮದಿನಕ್ಕೆ ರಾಹುಲ್ ಶುಭ ಹಾರೈಸಿದ್ದರು. ಈ ಬಗ್ಗೆ ಅವರಿಬ್ಬರೂ ಬಹಿರಂಗ ಹೇಳಿಕೆ ನೀಡಿಲ್ಲ. ಮಗಳ ಪ್ರೀತಿಯ ಬಗ್ಗೆ ನಟ ಸುನಿಲ್ ಶೆಟ್ಟಿ ಅವರನ್ನು ಕೇಳಿದಾಗ, 'ನಾನು ಈ ರೀತಿಯ ಯಾವುದೇ ಸಂಬಂಧ ಹೊಂದಿಲ್ಲ. ಅದರ ಬಗ್ಗೆ ಅತಿಯಾಳನ್ನೇ ಕೇಳಿ' ಎಂದು ತೀಕ್ಷ್ಣವಾಗಿ ಹೇಳಿದ್ದರು.


Click it and Unblock the Notifications











