ಅಥಿಯಾ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು: ಸೀಕ್ರೆಟ್ ರಿವೀಲ್ ಮಾಡಿದ ಡಿಸೈನರ್

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ 2023ರ ಜನವರಿ 23ರಂದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಮಹಾರಾಷ್ಟ್ರದ ಖಂಡಾಲಯದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ಮದುವೆಯಾಗಿದ್ದಾರೆ. ಇಬ್ಬರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗ್ತಿವೆ.

ವಿವಾಹ ಸಮಾರಂಭದಲ್ಲಿ ನಟಿ ಅಥಿಯಾ ಶೆಟ್ಟಿ ಲೈಟ್ ಪಿಂಕ್ ಬಣ್ಣದ ಅನಾಮಿಕಾ ಖನ್ನಾ ಚಿಕಂಕರಿ ಲೆಹಂಗಾ ಧರಿಸಿ ಮಿಂಚಿದ್ರೆ, ಕೆ.ಎಲ್.ರಾಹುಲ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರು. ಅಥಿಯಾ ಲೆಹಂಗಾಗೆ ಸರಿಯಾಗಿ ಹೊಂದುವ ಹಾಗೆ ಗ್ರ್ಯಾಂಗ್ ಚೋಕರ್ ನೆಕ್ಲೇಸ್, ಮಾಂಗ್ ಟಿಕಾ, ಕಿವಿಯೋಲೆ ಮತ್ತು ಬಳೆ ಧರಿಸಿದ್ದರು. ವಿವಾಹ ಸಮಾರಂಭದಲ್ಲಿ ಅಥಿಯಾ ಅವರ ಸಖತ್ ರಿಚ್ ಲುಕ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಅಥಿಯಾ ಶೆಟ್ಟಿ ಲೆಹಂಗಾ ತಯಾರಿಸಲು ತೆಗೆದುಕೊಂಡ ಸಮಯವನ್ನು ಡಿಸೈನರ್ ರಿವೀಲ್ ಮಾಡಿದ್ದು, ಎಲ್ಲರು ಶಾಕ್ ಆಗಿದ್ದಾರೆ.

 ಅಥಿಯಾ ಲೆಹಂಗಾ ವಿಶೇಷತೆಯೇನು?

ಅಥಿಯಾ ಲೆಹಂಗಾ ವಿಶೇಷತೆಯೇನು?

ನಟಿ ಅಥಿಯಾ ಶೆಟ್ಟಿ ಮದುವೆಯಲ್ಲಿ ಧರಿಸಿದ್ದ ಬ್ಯೂಟಿಫುಲ್ ಹ್ಯಾಂಡ್ ಮೇಡ್ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು ಎಂದು ಡಿಸೈನರ್ ಅನಾಮಿಕ ಖನ್ನಾ ತಿಳಿಸಿದ್ದಾರೆ. ವೋಗ್ ಸಂದರ್ಶನದಲ್ಲಿ ಮಾತನಾಡಿದ ಅವರು, ಅಥಿಯಾ ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಅಭಿರುಚಿಯುಳ್ಳವರಾಗಿದ್ದಾರೆ. ಹಾಗಾಗಿ ಅವರಿಗೆ ಪ್ರೀತಿಯಿಂದ ಹಾಗೂ ಬಹಳ ವಿಶೇಷವಾಗಿ ಈ ಲೆಹಂಗಾವನ್ನು ತಯಾರಿಸಲಾಗಿದೆ. ಅಥಿಯಾ ಧರಿಸಿದ್ದ ಲೆಹಂಗಾ ಮೇಲೆ ಹ್ಯಾಂಡ್ ಮೇಡ್ ವರ್ಕ್ ಮಾಡಲಾಗಿದೆ. ಜದೋರ್ಜಿ ಮಚ್ಚು ಜಾಲಿ ವರ್ಕ್ ಅನ್ನು ರೇಷ್ಮೆಯಿಂದ ಮಾಡಿಸಲಾಗಿದೆ. ಜೊತೆಗೆ ದುಪ್ಪಟ್ಟಾವನ್ನು ಸಿಲ್ಕ್ ಆರ್ಗನ್ಜಾದಿಂದ ಮಾಡಲಾಗಿದೆ ಎಂದಿದ್ದಾರೆ.

 ಮದುವೆ ಕುರಿತು ಅಥಿಯಾ ಪೋಸ್ಟ್

ಮದುವೆ ಕುರಿತು ಅಥಿಯಾ ಪೋಸ್ಟ್

ನಟಿ ಅಥಿಯಾ ಶೆಟ್ಟಿ ಮದುವೆಯ ಫೋಟೋಗಳ ಜೊತೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮ್ಮ ಬೆಳಕಿನಲ್ಲಿ ನಾನು ಹೇಗೆ ಪ್ರೀತಿಸಬೇಕು ಎಂಬುದನ್ನು ಕಲಿತೆ. ನಮ್ಮ ಅತ್ಯಂತ ಪ್ರೀತಿಪಾತ್ರರ ಜೊತೆ, ನಮಗೆ ಅಪಾರ ಸಂತೋಷ ಮತ್ತು ಎಲ್ಲವನ್ನು ನೀಡಿದ ಮನೆಯಲ್ಲಿ ನಾವು ಮದುವೆಯಾದವು. ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ಈ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದರು.

 ರಿಸೆಪ್ಶನ್ ಯಾವಾಗ?

ರಿಸೆಪ್ಶನ್ ಯಾವಾಗ?

ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹ ಸಮಾರಂಭ ನಟ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು. ಇವರ ಮದುವೆಗೆ ಕೇವಲ 70 ಜನ ಅಥಿತಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಯ ನಂತರ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ರಿಸೆಪ್ಶನ್ ಸಮಾರಂಭ ಯಾವಾಗ ನಡೆಯಲಿದೆ ಎಂಬ ಚರ್ಚೆ ಆರಂಭವಾಗಿತ್ತು. ಈ ಬಗ್ಗೆ ಸ್ವತಃ ನಟ ಸುನೀಲ್ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದು, ಐಪಿಎಲ್ ನಂತರವೇ ಇವರಿಬ್ಬರ ರಿಸೆಪ್ಶನ್ ಪಾರ್ಟಿ ನಡೆಯಲಿದೆ ಎಂದಿದ್ದಾರೆ.

More from Filmibeat

English summary
athiya shetty married kl rahul in pink handmade lehenga, designer took 10,000 to make,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X