Sunil Shetty Birthday: ಅಪರೂಪದ ಫೋಟೋ ಮೂಲಕ ಅಪ್ಪನಿಗೆ ಆಥಿಯಾ ಶೆಟ್ಟಿ ಪ್ರೀತಿಯ ವಿಶ್

ಬಾಲಿವುಡ್ ನಲ್ಲಿ ಖ್ಯಾತಿಗಳಿಸಿರುವ ಕರಾವಳಿ ಮೂಲದ ನಟ ಸುನಿಲ್ ಶೆಟ್ಟಿಗೆ ಇಂದು (ಆಗಸ್ಟ್ 11) ಹುಟ್ಟುಹಬ್ಬದ ಸಂಭ್ರಮ. ಸುನಿಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಬಾಲಿವುಡ್ ಮತ್ತು ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. 60ನೇ ವಸಂತಕ್ಕೆ ಕಾಲಿಟ್ಟಿರುವ ಸುನಿಲ್ ಶೆಟ್ಟಿ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸುನಿಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಮಗಳು, ನಟಿ ಆಥಿಯಾ ಶೆಟ್ಟಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಪನಿಗೆ ವಿಶ್ ಮಾಡಿರುವ ಆಥಿಯಾ ನಿಮ್ಮ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪುಟ್ಟ ಆಥಿಯಾಳನ್ನು ಸುನಿಲ್ ಶೆಟ್ಟಿ ಎತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಆಥಿಯಾ ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ತಂದೆ ಭುಜದಮೇಲೆ ಕೈಹಾಕಿ ನಿಂತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

Athiya Shetty wishes her father Suniel Shetty on his 60th birthday; see instagram post

"60ನೇ ವರ್ಷದ ಶುಭಾಶಯಗಳು ಅಪ್ಪಾ. ನನ್ನ ಎಲ್ಲಾ ಆಲೋಚನೆಗಳನ್ನು ಓದಿದವರು ನೀವು. ನಿಮ್ಮ ಮೇಲಿನ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ನೀವು ನನಗೆ ಜೀವನದಲ್ಲಿ ಅತ್ಯುತ್ತಮವಾದುದನ್ನು ನೀಡಿದ್ದೀರಿ. ನಿಮ್ಮ ಸಮಯ, ಪ್ರೀತಿ, ನಿರಂತರ ಕಾಳಜಿ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ನಟಿ ಆಥಿಯಾ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಪ್ರೀತಿಯಲ್ಲಿರುವ ಗುಟ್ಟಾಗಿ ಉಳಿದಿಲ್ಲ. ಆಗಾಗ ರಾಹುಲ್ ಜೊತೆ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸುತ್ತಿದ್ದ ಆಥಿಯಾ ಇತ್ತೀಚಿಗೆ ರಾಹುಲ್ ಜೊತೆ ಇಂಗ್ಲೆಡ್ ಪ್ರವಾರ ಕೈಗೊಳ್ಳುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

ಇಬ್ಬರು ಒಟ್ಟಿಗೆ ಫೋಟೋಗೆ ಪೋಸ್ ನೀಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಮೂಲಕ ಪ್ರಣಯ ಹಕ್ಕಿಗಳು ಮದುವೆ ಸೂಚನೆ ನೀಡಿದ್ದಾರೆ. ಅಂದಹಾಗೆ ಇಂಗ್ಲೆಂಡ್ ಪ್ರವಾಸ ವೇಳೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಜೊತೆ ಹೆಚ್ಚಾಗಿ ಸುತ್ತಾಡುತ್ತಿದ್ದಾರೆ. ರಾಹುಲ್ ಮತ್ತು ಅಥಿಯಾ ಪ್ರಣಯ ಪಕ್ಷಿಗಳ ಜೊತೆ ವಿರಾಟ್ ಕೊಹ್ಲಿ ದಂಪತಿ ಹೆಚ್ಚಾಗಿ ಕಾಣಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲವು ಸುಂದರ ಫೋಟೋಗಳನ್ನು ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ಫೋಟೋಗಳನ್ನು ಶೇರ್ ಮಾಡಿ, "ಹಮ್ ಸಾಥ್ ಸಾಥ್ ಹೈ" ಎಂದು ಕ್ಯಾಪ್ಷನ್ ನೀಡಿದ್ದರು. ಈ ಫೋಟೋಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬಂದಿತ್ತು.

ಅಂದಹಾಗೆ ಈ ಹಿಂದೆ ಅಥಿಯಾ ಮತ್ತು ರಾಹುಲ್ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುನಿಲ್ ಶೆಟ್ಟಿ, "ಅವರ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅಥಿಯಾ ಏನಾದರು ನಿಮಗೆ ಹೇಳಿದ್ರೆ ಅಮೇಲೆ ಬಂದು ನನಗೆ ಹೇಳಿ" ಎಂದು ಸುನಿಲ್ ಶೆಟ್ಟಿ ಉತ್ತರಿಸಿದ್ರು.

ಇನ್ನು ಆಥಿಯಾ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ 2015ರಲ್ಲಿ ಹೀರೋ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ, ನಟ ಸೂರಜ್ ಪಾಂಚೋಲಿ ಜೊತೆ ನಟಿಸಿದ್ದರು. ಆದರೆ ಬಾಲಿವುಡ್ ನಲ್ಲಿ ಆಥಿಯಾಗೆ ಹೇಳಿಕೊಳ್ಳುವಷ್ಟು ಪ್ರಸಿದ್ಧಿ ಸಿಕ್ಕಿಲ್ಲ. ಅಥಿಯಾ ಸಿನಿಮಾಗಿಂತ ಹೆಚ್ಚಾಗಿ ರಾಹುಲ್ ಜೊತೆಗಿನ ಪ್ರೀತಿ, ಡೇಟಿಂಗ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.

More from Filmibeat

English summary
Actress Athiya Shetty wishes her father Suniel Shetty on his 60th birthday; see instagram post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X