ಸೆಲ್ಫಿಗೆ ಸ್ಮೈಲ್ ಮಾಡಿದರೂ ಕದಲದ ಮಹಿಳಾ ಅಭಿಮಾನಿ ; ಕಾರ್ಯಕ್ರಮವನ್ನೇ ನಿಲ್ಲಿಸಿದ ಖ್ಯಾತ ಗಾಯಕ

ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ.

ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ‌ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೂ ಕೂಡ ಈ ಸೆಲ್ಫಿ ಹಾವಳಿ ಇದೆ. ಇಂತಹದ್ದೊಂದು ವಿಷಯ ಈಗಷ್ಟೇ ಬೆಳಕಿಗೆ ಬಂದಿದೆ. ಅಭಿಮಾನಿಯ ಸೆಲ್ಫಿ ಕಿರುಕುಳದಿಂದ ಪ್ರಖ್ಯಾತ ಗಾಯಕ ಅತಿಫ್ ಅಸ್ಲಾಂ ನರಳಿರುವ ವಿಡಿಯೋ ವೈರಲ್ ಆಗಿದೆ. ಹೌದು. ಅತಿಫ್ ಅಸ್ಲಾಂ.. ಪಾಕಿಸ್ತಾನದವರಾದರೂ ತಮ್ಮ ಕಂಠದಿಂದನೇ ವಿಶ್ವವ್ಯಾಪಿ ಅದರಲ್ಲಿಯೂ ಭಾರತದಲ್ಲಿ ಹೆಸರು ಮಾಡಿದವರು ಇವರು.

Selfie Chaos Atif Aslam Forced to Stop Karachi Concert After Fan Storms Stage

2005ರಲ್ಲಿ ''ವೋ ಲಮ್ಹೇ'' ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪರಿಚಯವಾದ ಅತಿಫ್ ಅಸ್ಲಾಂ ಇಲ್ಲಿಯವರೆಗೆ 150ಕ್ಕೂ ಅಧಿಕ ಭಾರತದ ಹಿಂದಿ ಹಾಡುಗಳಿಗೆ ಧ್ವನಿಯಾಗಿದ್ದಾರೆ. ''ಪೆಹಲಿ ನಜ್ ಮೇ''.. ''ತೇರಾ ಹೋನೆ ಲಗಾ ಹೂ''.. ''ದಿಲ್ ದಿಯಾ ಗಲ್ಲಾ''.. ''ತೇರೆ ಸಂಗ್ ಯಾರಾ''.. ''ಪಾನಿಯೋ ಸಾ''.. ''ಆದತ್''.. ಹೀಗೆ ಒಂದಾ..ಎರಡಾ.. 150ಕ್ಕೂ ಅಧಿಕ ಹಾಡುಗಳನ್ನು ಇವರು ಬಾಲಿವುಡ್‌ನಲ್ಲಿ ಹಾಡಿದ್ದಾರೆ. ಅದರಲ್ಲಿಯೂ ಪ್ರೀತಂ ಸಂಗೀತದಲ್ಲಿ ಇವರ ಕಂಠ ಕುಣಿದಾಗ ಜನ ಹುಚ್ಚೆದ್ದಿದೇ ಹೆಚ್ಚು.

ಇಂಥಾ ಅತಿಪ್ ಅಸ್ಲಾಂ ಅವರನ್ನು ಭಾರತ ಸರ್ಕಾರ ಸದ್ಯ ನಿಷೇಧಿಸಿದೆ. ಇಲ್ಲಿ ಯಾವ ಕೆಲಸವನ್ನಾಗಲಿ, ಸಂಗೀತ ಕಾರ್ಯಕ್ರಮವನ್ನಾಗಲಿ ಅತಿಫ್ ನೀಡುವಂತೆ ಇಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೇ ಅತಿಫ್ ಅಸ್ಲಾಂ ಸದ್ಯ ಪಾಕಿಸ್ತಾನದ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವು ಸಿಕ್ಕಾಗೆಲ್ಲಾ ಸಂಗೀತ ಕಚೇರಿ ನಡೆಸುತ್ತಿದ್ದಾರೆ. ಹೀಗೆ ಕರಾಚಿಯಲ್ಲಿ ಅತಿಫ್ ನಡೆಸಿದ ಸಂಗೀತ ಕಚೇರಿ ಈಗ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮತ್ತದೇ ಅಂಧಾಭಿಮಾನ.

ಹೌದು, ಅಸಲಿಗೆ ಕರಾಚಿಯ ಡಿಎಚ್‌ಎ ಸ್ಪೋರ್ಟ್ಸ್ ಕ್ಲಬ್ (ಮೊಯಿನ್ ಖಾನ್ ಅಕಾಡೆಮಿ) ನಲ್ಲಿ ಅತಿಫ್ ಅಸ್ಲಾಂ ಅವರ ಸಂಗೀತ ಕಾರ್ಯಕ್ರಮ ಇತ್ತು. ಅಸಂಖ್ಯಾತ ಜನರು ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಬಂದಿದ್ದರು ಕೂಡ. ಆದರೆ, ಇದೇ ವೇಳೆ ಯುವತಿಯೊಬ್ಬಳು ಭದ್ರತೆಯ ಕೋಟೆ ದಾಟಿಕೊಂಡು ವೇದಿಕೆ ಏರಿದ್ದಾಳೆ. ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ, ಗಾಯಕ ಪ್ರದರ್ಶನ ನೀಡುತ್ತಿದ್ದಾಗ ಅಭಿಮಾನಿಯೊಬ್ಬಳು ಭದ್ರತಾ ಸಿಬ್ಬಂದಿಗಳನ್ನು ಮೀರಿ ವೇದಿಕೆ ಹತ್ತಿದ್ದಾಳೆ.ಸೆಲ್ಫಿಗೆ ಹಿಂಸೆ ನೀಡಿದ್ದಾಳೆ.

ಆದರೆ ಅಭಿಮಾನಿಯ ಈ ವರ್ತನೆ ಕಂಡು ಅತಿಫ್ ಬೆಚ್ಚಿ ಬಿದ್ದಿಲ್ಲ. ಹಾಡು ನಿಲ್ಲಿಸಿ ಓಡಿಯೂ ಹೋಗಿಲ್ಲ. ಬದಲಿಗೆ ಸಮಾಧಾನದಿಂದಲೇ ಅವಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸೌಜನ್ಯದಿಂದಲೇ ಸೆಲ್ಪಿಗೆ ಪೋಸ್ ಕೂಡ ನೀಡಿದ್ದಾರೆ.

selfie-chaos-atif-aslam-forced-to-stop-karachi-concert-after-fan-storms-stage

ಆದರೆ, ಅದ್ಯಾಕೋ ಯುವತಿಯ ಆತ್ಮ ಇಷ್ಟಕ್ಕೆ ತೃಪ್ತಿಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸೆಲ್ಫಿ ಕ್ಲಿಕಿಸಿಕೊಂಡ ಮೇಲೆ ವೇದಿಕೆಯಿಂದ ಕೆಳಗಿಳಿಯುವ ಬದಲು ಆ ಯುವತಿ ಕಿರಿಕ್ ಮಾಡಿದ್ದಾಳೆ. ಮತ್ತೆ ಮತ್ತೆ ಸೆಲ್ಫಿಗೋಸ್ಕರ ಅತಿಫ್ ಅವರನ್ನು ಪೀಡಿಸಿದ್ದಾಳೆ. ಯುವತಿಯ ಈ ವರ್ತನೆಯಿಂದ ಬೇಸತ್ತ ಅತಿಫ್ ತಮ್ಮ ಸಂಗೀತ ಕಾರ್ಯಕ್ರಮಕ್ಕೆ ಅರ್ಧಕ್ಕೆ ಬ್ರೇಕ್ ಹಾಕಿದ್ದಾರೆ. ಕೊನೆಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ಯುವತಿಯನ್ನು ಅಲ್ಲಿಂದ ಹೊರ ದಬ್ಬಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನದ ಪರಾಕಾಷ್ಠೆ ಮತ್ತು ಅನಾಗರಿಕ ವರ್ತನೆ ಕುರಿತು ಹಲವರು ಚರ್ಚೆಯನ್ನು ಮಾಡುತ್ತಿದ್ದಾರೆ. ಸೆಲ್ಫಿಗಾಗಿ ಕಲಾವಿದರ ಮೇಲೆರಗುವುದು ಅಥವಾ ಅವರು ಇದ್ದಲ್ಲಿ ನುಗ್ಗುವುದು ಪ್ರೀತಿಯಲ್ಲ, ಬದಲಿಗೆ ಅದು ಕಿರುಕುಳ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Shocking security breach at Atif Aslam’s Karachi show! Watch as a fan’s selfie obsession brings the concert to a standstill. See how the rockstar handled the stage invasion that has everyone talking.
Read more about: viral video selfie singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X