ಆಗಸ್ಟ್ 2...ಅಮಿತಾಭ್ ಬಚ್ಚನ್ ಗೆ ಎರಡನೇ ಜನ್ಮ ಸಿಕ್ಕಿದ್ದ ದಿನ

ಅಕ್ಟೋಬರ್ 11.....ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಬರ್ತಡೇ. ಬಚ್ಚನ್ ಗೆ ಆ ಹುಟ್ಟುಹಬ್ಬಕ್ಕಿಂತ ಎರಡನೇ ಬರ್ತಡೇ ಮುಖ್ಯವಾದದು. ಯಾಕಂದ್ರೆ, ಎರಡನೇ ಹುಟ್ಟುಹಬ್ಬ ಬಚ್ಚನ್ ಗೆ ಮರುಜನ್ಮ ನೀಡಿತ್ತು.

ಹೌದು, ಆಗಸ್ಟ್ 2 ಅಮಿತಾಭ್ ಬಚ್ಚನ್ ಜೀವನದಲ್ಲಿ ಇನ್ನೊಂದು ಜನ್ಮ ಪಡೆದ ದಿನ. ಈ ದಿನಾಂಕದ ಹಿಂದೆ ಬಿಗ್ ಬಿ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದಿದೆ. ಆ ವಿಷ್ಯ ತಿಳಿಯಲು ಸುಮಾರು 37 ವರ್ಷಕ್ಕೆ ಹಿಂದಕ್ಕೆ ಹೋಗಬೇಕು.

ಈ ಘಟನೆಯನ್ನ ಅಮಿತಾಭ್ ಬಚ್ಚನ್ ನೆನಪಿಸಿಕೊಂಡಿದ್ದು, ಟ್ವಿಟ್ಟರ್ ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ''ಪ್ರೀತಿ, ಗೌರವ, ಪ್ರಾರ್ಥನೆಗಳಿಂದ ತುಂಬಿದ ಈ ದಿನ ಬಹಳಷ್ಟು ಮಂದಿಗೆ ನೆನಪಿರುತ್ತೆ. ಅಂದು ಅವರು ತೋರಿದ ಪ್ರೀತಿ ನನ್ನೊಂದಿಗಿದೆ. ಇದು ನಾನು ಎಂದಿಗೂ ತೀರಿಸಿದ ಋಣ'' ಎಂದು ಧನ್ಯವಾದ ತಿಳಿಸಿದ್ದಾರೆ.

August 2 Second Birthday for Amitabh Bachchan

37 ವರ್ಷದ ಹಿಂದೆ ಅಂದ್ರೆ ಜುಲೈ 26, 1982ರಲ್ಲಿ ಕೂಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಕ್ಷನ್ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅಮಿತಾಭ್ ಬಚ್ಚನ್ ಗೆ ತೀವ್ರ ಗಾಯವಾಗಿತ್ತು.

ಕೂಡಲೇ ಮುಂಬೈಗೆ ಅಮಿತಾಭ್ ಅವರನ್ನ ಸ್ಥಳಾಂತರಿಸಲಾಯಿತು. ತುರ್ತು ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಐಸಿಯುನಲ್ಲಿರುವಾಗ ಅಮಿತಾಭ್ ಜೀವಂತವಾಗಿಲ್ಲ ಎಂದು ವೈದ್ಯರು ತಿಳಿಸಿದ್ದರು ಎಂದು ಬಿಗ್ ಬಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರಂತೆ.

ಈ ಸಂದರ್ಭದಲ್ಲಿ ಅಮಿತಾಭ್ ಅವರಿಗೆ ಏನು ಆಗಬಾರದು, ದೇವರ ಒಳ್ಳೆಯದು ಮಾಡಲಿ ಎಂದು ಜನರು ಪ್ರಾರ್ಥಿಸಿದ್ದರು. ಮಸೀದಿ, ದೇವಸ್ಥಾನ, ಚರ್ಚೆಗಳಲ್ಲಿ ಬಚ್ಚನ್ ಗಾಗಿ ಪೂಜೆ ಸಲ್ಲಿಸಿದ್ದರು. ನಂತರ ಆಗಸ್ಟ್ 2 ರಂದು ಪ್ರಜ್ಞೆ ಬಂದಿತ್ತು.

English summary
August 2....it is Second Birthday For bollywood super star Amitabh bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X