'ಬ್ರಹ್ಮಾಸ್ತ್ರ' ಕಲೆಕ್ಷನ್ ಬಗ್ಗೆ ಇನ್ನು ಅನುಮಾನ? ಆಗ್ಲೇ ಬಂತು 'ಅವತಾರ್‌' ರೀತಿ ಪಾರ್ಟ್- 2, 3 ರಿಲೀಸ್ ಡೇಟ್

ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಕಳೆದ ವರ್ಷ ರಿಲೀಸ್ ಆಗಿ ಸದ್ದು ಮಾಡಿತ್ತು. ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ಅಮಿತಾಬ್ ಬಚ್ಚನ್, ನಾಗಾರ್ಜುನ, ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್‌ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಈ ಹಿಂದೆಯೇ ಚಿತ್ರತಂಡ ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿತ್ತು.

ಇದೀಗ 'ಬ್ರಹ್ಮಾಸ್ತ್ರ' ಸರಣಿಯ ಮತ್ತೆರಡು ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಯಾಗಿದೆ. ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ಚಿತ್ರದ ಫಸ್ಟ್ ಸೀಕ್ವೆಲ್ ಡಿಸೆಂಬರ್ 2026ಕ್ಕೆ ರಿಲೀಸ್ ಆದರೆ ಎರಡನೇ ಸೀಕ್ವೆಲ್ ಡಿಸೆಂಬರ್ 2027ಕ್ಕೆ ತೆರೆಗಪ್ಪಳಿಸೋದಾಗಿ ಘೋಷಿಸಲಾಗಿದೆ. ಆದರೆ ಕೆಲವರು ಮೊದಲ ಭಾಗವೇ ಸರಿಯಾಗಿ ಸಕ್ಸಸ್ ಆಗಲಿಲ್ಲ. ಅದು ಹೇಗೆ 2 ಮತ್ತು 3 ಭಾಗ ತೆರೆಗೆ ತರ್ತಿದ್ದೀರಾ ಎಂದು ಕೇಳುತ್ತಿದ್ದಾರೆ. 'ಬ್ರಹ್ಮಾಸ್ತ್ರ' ಸಿನಿಮಾ ಕಲೆಕ್ಷನ್ ಬಗ್ಗೆ ಸಾಕಷ್ಟು ಜನ ಅನುಮಾನ ವ್ಯಕ್ತಪಡಿಸಿದ್ದರು.

Ayan Mukerji announced the release of Brahmastra part 2 and Part 3

ಕಳೆದ ವರ್ಷ ಸೆಪ್ಟೆಂಬರ್ 9ಕ್ಕೆ ರಿಲೀಸ್ ಆಗಿದ್ದ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ರೆಸ್ಪಾನ್ಸ್‌ಗೂ ಕಲೆಕ್ಷನ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಕಲೆಕ್ಷನ್ ರಿಪೋರ್ಟ್ ಕೊಡುತ್ತಾ ಹೋಗಿತ್ತು ಚಿತ್ರತಂಡ. ಸ್ವತಃ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಸಿನಿಮಾ ಕಲೆಕ್ಷನ್ ಅಪ್‌ಡೇಟ್ ಕೊಡುತ್ತಾ ಬಂದಿದ್ದರು. ಆದರೆ ಸಾಕಷ್ಟು ಜನ ಈ ಲೆಕ್ಕವನ್ನು ಒಪ್ಪಲು ಸಿದ್ಧರಿರಲಿಲ್ಲ. ಇನ್ನು 'ಬ್ರಹ್ಮಾಸ್ತ್ರ' ಚಿತ್ರಕ್ಕೆ ಯಾರು ಹೀರೊ ಆಗ್ತಾರೆ ಎನ್ನುವ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬಂದಿತ್ತು.

'ಬ್ರಹ್ಮಾಸ್ತ್ರ' ಸೀಕ್ವೆಲ್‌ಗೆ ಹೀರೊ ಆಗಿ ರಾಕಿಂಗ್ ಸ್ಟಾರ್ ಯಶ್ ಹೆಸರನ್ನೂ ತೇಲಿಬಿಟ್ಟಿದ್ದರು. ಆದರೆ ಅದೆಲ್ಲಾ ಸುಳ್ಳು ಎಂದು ಯಶ್ ಸ್ಪಷ್ಟಪಡಿಸಿದ್ದರು. ಜೇಮ್ಸ್ ಕ್ಯಾಮರೂನ್ 'ಅವತಾರ್‌' ಸೀಕ್ವೆಲ್‌ಗಳ ರಿಲೀಸ್ ಡೇಟ್ ಘೋಷಿಸಿದಂತೆ ಒಟ್ಟೊಟ್ಟಿಗೆ 2 ಚಿತ್ರಗಳ ರಿಲೀಸ್ ಡೇಟ್ ಘೋಷಿಸಿದ್ದಾರೆ. ಏಕಕಾಲಕ್ಕೆ ಎರಡೂ ಸಿನಿಮಾಗಳ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದಿರುವ ನಿರ್ದೇಶಕರು ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.

Ayan Mukerji announced the release of Brahmastra part 2 and Part 3

"ಬ್ರಹ್ಮಾಸ್ತ್ರ ಸಿನಿಮಾ ನೋಡಿ ಪ್ರೇಕ್ಷರು ತೋರಿದ ಪ್ರೀತಿ, ವ್ಯಕ್ತಪಡಿಸಿದ ಅಭಿಪ್ರಾಯ ನೋಡಿದ ಮೇಲೆ ಪಾರ್ಟ್‌-2 ಹಾಗೂ ಪಾರ್ಟ್‌- ವಿಚಾರದಲ್ಲಿ ಮತ್ತಷ್ಟು ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ಪಾರ್ಟ್‌-1ಗೆ ಹೋಲಿಸಿದರೆ ಇನ್ನೆರಡು ಭಾಗಗಳು ಮತ್ತಷ್ಟು ದೊಡ್ಡದಾಗಿ ಅದ್ಭುತವಾಗಿ ಇರಬೇಕೆಂದು ನಾನು ಅಂದುಕೊಳ್ಳುತ್ತೇನೆ. 3 ಭಾಗಗಳಿಗೆ ಬೇಕಾದ ಕಥೆ ಸಿದ್ದಪಡಿಸಲು ಹೆಚ್ಚಿನ ಸಮಯ ಬೇಕು ಎಂದು ಅರ್ಥವಾಗುತ್ತಿದೆ.

"ಈ 2 ಸಿನಿಮಾಗಳನ್ನು ಒಟ್ಟಿಗೆ ಚಿತ್ರೀಕರಣ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಅದೇ ರೀತಿ ಬಹಳ ಕಡಿಮೆ ಅಂತರದಲ್ಲಿ 2 ಸಿನಿಮಾಗಳನ್ನು ರಿಲೀಸ್ ಮಾಡುತ್ತೇವೆ. ಇದಕ್ಕಾಗಿ ನಾನು ಒಂದಷ್ಟು ಸಮಯ ಎತ್ತಿಡುತ್ತಿದ್ದೇನೆ. ಇದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕು ಎನಿಸಿತು" ಎಂದು ಅಯಾನ್ ಮುಖರ್ಜಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಕಡೆ ಅಯಾನ್ ಮುಖರ್ಜಿ ಹೃತಿಕ್ ರೋಷನ್ ನಟನೆಯ 'ವಾರ್‌- 2' ಆಕ್ಷನ್ ಕಟ್ ಹೇಳ್ತಾರೆ. ಹಾಗಾಗಿ 'ಬ್ರಹ್ಮಾಸ್ತ್ರ'- 2 ಹಾಗೂ 3 ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎನ್ನಲಾಗ್ತಿದೆ.

'ಬ್ರಹ್ಮಾಸ್ತ್ರ' ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಅಯಾನ್ ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದರು. ಕರಣ್ ಜೋಹರ್, ಅಪೂರ್ವ ಮೆಹ್ತಾ, ನಮಿತ್ ಮಲ್ಹೋತ್ರಾ, ರಣ್‌ಬೀರ್ ಕಪೂರ್ ಸಹ ನಿರ್ಮಾಪಕರಾಗಿದ್ದರು. 3D ಐಮ್ಯಾಕ್ಸ್ 3D ವರ್ಷನ್‌ಗಳಲ್ಲೂ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಸೀಕ್ವೆಲ್ ಸಿನಿಮಾಗಳನ್ನು ಅದಕ್ಕಿಂತ ರೋಚಕವಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ.

More from Filmibeat

English summary
Ayan Mukerji announced the release of Brahmastra part 2 and Part 3. Ayan Also Directing War- 2 with Hrithik Roshan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X