»   » ಬಾಲಿವುಡ್ ನಲ್ಲಿ 'ಕಾಮ ಕಸ್ತೂರಿ' ಆಯೇಷಾ ಪರಿಮಳ

ಬಾಲಿವುಡ್ ನಲ್ಲಿ 'ಕಾಮ ಕಸ್ತೂರಿ' ಆಯೇಷಾ ಪರಿಮಳ

Posted By:
Subscribe to Filmibeat Kannada
Ayesha Carmela
ಕಾಮ ಕನ್ಯೆ ಸನ್ನಿ ಲಿಯೋನ್ ಬಾಲಿವುಡ್ ಬಾಗಿಲು ಬಡಿದು ಒಳಸೇರಿಕೊಂಡಿದ್ದಾಗಿದೆ. ಇನ್ನೇನು ಅವರ ಅಭಿನಯದ ಚಿತ್ರ ಜಿಸ್ಮ್-2 ಬಿಡುಗಡೆಯಾಗಲಿದೆ. ಅಷ್ಟರಲ್ಲೇ ಇನ್ನೊಬ್ಬಳು ಕಾಮಕಸ್ತೂರಿ ಬಾಲಿವುಡ್ ಬಾಗಿಲಲ್ಲಿ ಹಾಜರಾಗಿದ್ದಾಳೆ. ಹೆಸರು ಆಯೆಷಾ ಕಾರ್ಮೆಲಾ.

ತಮ್ಮ ದೇಹವನ್ನೇ ಮಾರಾಟದ ಸರಕನ್ನಾಗಿಸಿಕೊಂಡು ಕೆಲವು ನೀಲಿ ತಾರೆಯರು ಅದೆಷ್ಟೋ ಪ್ರಖ್ಯಾತಿ ಪಡೆದಿದ್ದಾರೆ. ಈಗಂತೂ ಮೊದಲಿನಂತೆ ಬಾಲಿವುಡ್ ನಲ್ಲಿ ಮಡಿವಂತಿಕೆ ಇಲ್ಲವೆಂಬುದು ಸನ್ನಿ ಲಿಯೋನ್ ಆಗಮನದಿಂದ ಖಾತ್ರಿಯಾಗಿದೆ. ಸರಿ ಇನ್ನೇಕೆ ತಡ ಎಂದು ಒಬ್ಬೊಬ್ಬರಾಗಿ ಬಾಲಿವುಡ್ ನತ್ತ ಮುಖ ಮಾಡತೊಡಗಿದ್ದಾರೆ.

ಈ ಸಾಲಿನಲ್ಲಿ ಸದ್ಯ ಕೇಳಿಬರುತ್ತಿರುವ ಭಾರೀ ಹೆಸರು ನೀಲಿ ತಾರೆ ಆಯೆಷಾ ಕಾರ್ಮೆಲ್. ಭಾರತೀಯ ಮೂಲದ ಬ್ರಿಟಿಷ್ ಡಾಲ್ ಈಕೆ. ಸನ್ನಿ ಲಿಯೋನ್ ಅಮೇರಿಕದವಳಾದರೆ ನಾನು ಬ್ರಿಟಿಷ್ ಪ್ರಾಡಕ್ಟ್ ಎಂದು ಹೇಳಿಕೊಳ್ಳುವ ಈಕೆ, ಕೇವಲ 20 ವರ್ಷದ ಬಳುಕುವ ಬಳ್ಳಿ. ಬ್ರಿಟಿಷ್ ನೀಲಿ ಚಿತ್ರಗಳಲ್ಲಿ ಸಮಸ್ತವನ್ನೂ ತೆರೆದಿಟ್ಟಾಕೆ.

ಬ್ರಿಟನ್ನಿನ ನೀಲಿ ಚಿತ್ರೋದ್ಯಮ ಆಯೆಷಾಳನ್ನು ಗುರುತಿಸುವುದು 'ಏಷ್ಯನ್ ಬಾರ್ಬಿ ಡಾಲ್' ಅಂತ. ಕೆಲವರು 'ಮಸ್ತಿ ಬೇಬಿ' ಎಂದೂ ಕರೆಯುತ್ತಾರೆ. ಸ್ಕೈ ಚಾನೆಲ್ 906 ಇಂಗ್ಲೆಂಡಿನಲ್ಲಿ ಪ್ರಸಾರವಾಗುವ ಲೈವ್ ಮಸ್ತಿ ಚಾಟ್ನಲ್ಲಿ ವೀಕ್ಷಕರ ಕಾಮೆನಗಳನ್ನು ಕೆರಳಿಸುತ್ತಾ ಅವರ ಬೇಡಿಕೆಯಂತೆ ಕೊನೆಗೆ ಬೆತ್ತಲಾಗುವ ಏಷ್ಯನ್ ಬ್ಯೂಟಿ ಈಕೆ.

ಇಷ್ಟೇ ಆಗಿದ್ದರೆ ಅವಳ ಬಗ್ಗೆ ಬರೆಯಬೇಕಾಗಿರಲಿಲ್ಲ. ಭಾರತೀಯ ನಿರ್ಮಾಪಕರೊಬ್ಬರು ಈಕೆಯನ್ನು ಸಂಪರ್ಕಿಸಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಎಂದು ಕೇಳಿದ್ದಾರಂತೆ. ಬಾಲ್ಯದಿಂದಲೂ ನಟನೆ ಹುಚ್ಚು ಹತ್ತಿಸಿಕೊಂಡಿದ್ದ ಈಕೆಗೆ, ಈ ಮಾತು ಕೇಳಿ ಆಕಾಶಕ್ಕೆ ಮೂರೆ ಗೇಣು ಎಂಬಂತಾಗಿದೆಯಂತೆ.

ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿ ಇನ್ನೊಂದು ಸಿನಿಮಾಗೆ ಸಹಿಕಾಕುವುದು ತನ್ನಂತೆ ಇರುವ ಸನ್ನಿಗೆ ಸಾಧ್ಯವಾಗಿದೆ ಎಂದ ಮೇಲೆ ನಾನ್ಯಾಕೆ ಪ್ರಯತ್ನಿಸಬಾರದು ಎಂಬುದು ಆಯೆಷಾ ಬಯಕೆ. ಇಷ್ಟೇ ಅಲ್ಲ, ಸನ್ನಿ ನಟನೆಯ 'ಜಿಸ್ಮ್-2' ಚಿತ್ರವನ್ನು ಈಕೆ ನೋಡಲಿದ್ದಾಳಂತೆ.

ಸನ್ನಿ ಬಾಲಿವುಡ್ ಪ್ರವೇಶಿಸುವ ಮೂಲಕ ನಮ್ಮಂತವರಿಗೆ ಇದ್ದ ದೊಡ್ಡ ತೊಡಕನ್ನು ನಿವಾರಿಸಿದ್ದಾಳೆ. ಅಷ್ಟೇ ಅಲ್ಲ, ಬಾಲಿವುಡ್ಡಿನಲ್ಲಿ ನಮ್ಮಂತವರಿಗೆ ಬೇಕಾದಷ್ಟು ಬೇಡಿಕೆ ಇದೆ ಎಂಬುದನ್ನು ಪ್ರೂವ್ ಮಾಡಿದ್ದಾಳೆ. ಹಾಗಾಗಿ ನಾನು ಸಿದ್ಧಳಾಗಿ ನಿಂತಿದ್ದೇನೆ, ಕರೆಯೂ ಬಂದಿದೆ. ಸದ್ಯದಲ್ಲೇ ಬರಲಿದ್ದೇನೆ ಎಂದು ಹೇಳಿದ್ದಾಳೆ ಆಯೆಷಾ.

ನನಗೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಬೇಕೆಂಬ ದೊಡ್ಡ ಆಸೆಯಿದೆ ಎಂದಿದ್ದಾಳೆ ಆಯೆಷಾ. ಸಲ್ಮಾನ್ ಅವರಿಗೆ ಕೂಡ ನಿಮ್ಮಂತವರ ಜೊತೆ ನಟಿಸುವ ಆಸೆ ಇದ್ದೇ ಇದೆ ಬಿಡಿ ಎಂದು ಯಾರೋ ಹೇಳಿದ್ದು ಬಾಲಿವುಡ್ ಮಂದಿಯ ಕಿವಿಗೆ ಬಿದ್ದಿದೆಯಂತೆ. ಅದು ಆಯೆಷಾ ಕಿವಿಗೂ ತಲುಪಿ ಆಕೆ ಥ್ರಿಲ್ ಆಗಿದ್ದಾಳೆ.

ಈಕೆಯ ಬಗ್ಗೆ ಇಷ್ಟೆಲ್ಲಾ ಗೊತ್ತಾದ ಮೇಲೆ ಪಡ್ಡೆ ಹುಡುಗರ ಕನಸಿನಲ್ಲಿ ಆಯೆಷಾ ಬರುವುದಂತೂ ಖಾತ್ರಿ. ಆಯೇಷಾ ಬಾಲಿವುಡ್ಡಿಗೆ ಬರುವುದೂ ಖಾತ್ರಿ ಎಂಬಂತಾಗಿದೆ. ಸರಿ, ಇನ್ನೇಕೆ ತಡ, ಇನ್ನೊಬ್ಬಳು ಕಾಮ ಕಸ್ತೂರಿಯನ್ನು ಸ್ವಾಗತಿಸಲು ಸಿದ್ಧರಾಗಿ... (ಏಜೆನ್ಸೀಸ್)

English summary
Another actress like Sunny Leone, Ayesha Carmela acts in a Bollywood Movies very soon. As the sources are reviled, one of the Bollywood producer asked her to act in his upcoming movie. 
 
Please Wait while comments are loading...