ಹೇಗಿದ್ದ 'ಆಯೇಶಾ ಟಾಕೀಯಾ' ಹೇಗಾದರು ; 'ಕಾಂಪ್ಲ್ಯಾನ್ ಗರ್ಲ್' ಕಂಡು ಬೆಚ್ಚಿ ಬಿದ್ದ ಬಾಲಿವುಡ್ ..!
ತೀರಾ ಚಿಕ್ಕ ವಯಸ್ಸಿಗೆ ಹೆಸರು ಕೀರ್ತಿಯನ್ನ ಗಳಿಸಿದವರು ಆಯೇಶಾ ಟಾಕಿಯಾ. ಎಳೇ ವಯಸ್ಸಿಗೆ ವೇಗವಾಗಿ ಎತ್ತರಕ್ಕೇರಿ, ಅಷ್ಟೇ ಸ್ಪೀಡಿನಲ್ಲಿ ಮಂಗಮಾಯವಾದ ಈ ದುಂಡು ಮಲ್ಲಿಗೆ , ಈಗ ಗುರುತು ಸಿಗದಷ್ಟು ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ವಿಮಾನ ನಿಲ್ದಾಣದಲ್ಲಿ ಇವರನ್ನ ನೋಡಿದ ಅನೇಕರು ಹೌಹಾರಿದ್ದಾರೆ.
ನೀಲಿ ಬಣ್ಣದ ಸಲ್ವಾರ್ ನಲ್ಲಿ ಕಾಣಿಸಿಕೊಂಡ ಆಯೇಶಾ ಅವರನ್ನ ನೋಡಿದ ಅನೇಕರು, ನಿಮ್ಮ ಸೌಂದರ್ಯಕ್ಕೆ ಏನಾಯಿತು ಎಂಬ ಪ್ರಶ್ನೆಯನ್ನ ಕೇಳ್ತಿದ್ದಾರೆ. ಕೆಲವರ ಕಣ್ಣಿಗೆ ಇದೆಲ್ಲ ಸರ್ಜರಿಯ ಸೈಡ್ ಎಫೆಕ್ಟ್ ನಂತೆ ಭಾಸವಾದರೆ, ಇನ್ನೂ ಕೆಲವರಿಗೆ ಆಯೇಶಾ ತುಟಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಇನ್ನೂ ಬಹುತೇಕರು ರಾಖಿ ಸಾವಂತ್ ಅವರ ಸಹೋದರಿ ಎಂದು ಆಯೇಶಾ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಹಿಂದೆ ನಟಿಯಾಗಿದ್ದಾಗ ಸೌಂದರ್ಯ ಕಾಪಾಡಿಕೊಳ್ಳಲು ಆಯೇಶಾ ಟಾಕಿಯಾ ನಿತ್ಯ ಎರಡು ಗಂಟೆ ಏರೋಬಿಕ್ಸ್ , ವ್ಯಾಯಾಮ ಮತ್ತು ಧ್ಯಾನ ಮಾಡುತ್ತಿದ್ದರು. ಆದರೆ ಈಗ ಏನೇ ಮಾಡಿದರೂ ತೂಕ ಕಂಟ್ರೋಲ್ ಗೆ ಬರುತ್ತಿಲ್ಲವಾ ಎಂಬ ಪ್ರಶ್ನೆಯೂ ಅನೇಕರನ್ನ ಸದ್ಯಕ್ಕೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಆಯೇಶಾ ದಪ್ಪವಾಗಿದ್ದಾರೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗ್ತಿದೆ.
2017ರಲ್ಲಿ ಕೂಡ ಟ್ರೋಲ್ ಗೆ ಒಳಗಾಗಿದ್ದ ವಾಟೆಂಡ್ ನಟಿ
2017ರಲ್ಲಿ ಕೂಡಾ ಆಯೇಶಾ ಟಾಕಿಯಾ ಬಗ್ಗೆ ಇಂಥಹದ್ದೇ ಚರ್ಚೆ ನಡೆದಿತ್ತು. ಆಯೇಶಾ ಮೇಲೆ ಪ್ಲಾಸ್ಟಿಕ್ ಸರ್ಜರಿಯ ಅಡ್ಡ ಪರಿಣಾಮವಾಗಿದೆ ಎಂಬ ಅಭಿಪ್ರಾಯ ಆಗ್ಲೂ ವ್ಯಕ್ತವಾಗಿತ್ತು. ಆಗ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಯೇಶಾ ಟಾಕೀಯಾ ನಾನು ಯಾವುದೇ ಸರ್ಜರಿಗೆ ಒಳಗಾಗಿಲ್ಲವೆಂದಿದ್ದರು. ಟ್ರೋಲ್ ಹೈಕ್ಳಿಗಳಿಗೆ ಖಡಕ್ ಉತ್ತರವನ್ನೂ ಕೂಡ ಕೊಟ್ಟಿದ್ದರು. ಆ ನಂತರ ಕಾಲಾನುಕ್ರಮೇಣ ಆಯೇಶಾ ಅವರನ್ನ ಮತ್ತೆ ಎಲ್ಲರು ಮರೆತರು. ಆಯೇಶಾ ಕೂಡ ಮನೆ..ಮಗ.. ಸಂಸಾರವೆಂದು ಕಳೆದು ಹೋದರು.
13 ನೇ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಬಂದ ಆಯೇಶಾ
4 ನೇ ವಯಸ್ಸಿನಲ್ಲಿಯೇ ಕ್ಯಾಮೆರಾ ಎದುರಿಸಿದ ಅನುಭವ ಜತೆಗಿಟ್ಟುಕೊಂಡು ಹಿಂದಿಯನ್ನು ನಿರರ್ಗಳವಾಗಿ ಮಾತನಾಡೋ ಈ ಚೆಂದುಳ್ಳಿ ಚೆಲುವೆ, ಕೇವಲ 13ರ ಪ್ರಾಯದಲ್ಲಿಯೇ ಆಯೇಶಾ ಟಾಕೀಯಾ ಬಣ್ಣದ ಲೋಕಕ್ಕೆ ಬಂದರು. ಕಾಂಪ್ಲಾನ್ ನ ಜಾಹೀರಾತಿನಲ್ಲಿ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು. ಆ ನಂತರ ಡಿಸ್ನಿ ಚಾನೆಲ್‌ನಲ್ಲಿಯೂ ಕೆಲಸ ಮಾಡಿದರು. ಅತ್ಯಲ್ಪ ಅವಧಿಯಲ್ಲಿ ಬಾಲಿವುಡ್ ನ ಕಣ್ಣಿಗೂ ಬಿದ್ದರು.

13ಕ್ಕೆ ಜಾಹೀರಾತು 19ಕ್ಕೆ ನಾಯಕಿ
ಟಾರ್ಜನ್ ಚಿತ್ರಕ್ಕೆ ಆಯೇಶಾ ನಾಯಕಿಯಾಗಿ ಆಯ್ಕೆಯಾದಾಗ ಅವರಿಗೆ ಕೇವಲ 19ರ ಪ್ರಾಯ. ಮೊದಲ ಚಿತ್ರದಲ್ಲಿಯೇ ಎಲ್ಲರ ಕಣ್ಮನವನ್ನ ಸೆಳೆದು, ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡ ಆಯೇಶಾ, ಚಿತ್ರದಲ್ಲಿನ ಅಭಿನಯಕ್ಕೆ ಫಿಲ್ಮ್ ಫೇರ್ ಹಾಗೂ ಐಫಾ ಪ್ರಶಸ್ತಿಯನ್ನೂ ಪಡೆದರು. ಅಲ್ಲಿಂದಾಚೆ ಹಿಂದೆ ತಿರುಗಿ ನೋಡದ ಆಯೇಶಾ ಟಾಕೀಯಾ ಒಂದಾದ ಮೇಲೊಂದು ಸಿನಿಮಾದಲ್ಲಿ ನಟಿಸಿದರು. ಆ ಪೈಕಿ ಸಲ್ಮಾನ್ ಖಾನ್ ಜೊತೆ ಅಭಿನಯಿಸಿದ ವಾಟೆಂಡ್ ಪ್ರಮುಖವಾದದ್ದು.
ರೆಸ್ಟೋರೆಂಟ್ ಮಾಲೀಕರನ್ನು ವಿವಾಹವಾದ ಆಯೇಶಾ
ಖ್ಯಾತಿಯ ತುತ್ತತುದಿಯಲ್ಲಿ ಇದ್ದಾಗ್ಲೇ, 2009ರಲ್ಲಿ ಆಯೇಶಾ ಟಾಕೀಯಾ ಮದುವೆಯ ಬಂಧನಕ್ಕೆ ಒಳಗಾದರು. ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರ ಪುತ್ರ ಫರ್ಹಾನ್ ಜೊತೆ ಹೊಸ ಬದುಕಿಗೆ ಕಾಲಿಟ್ಟರು. ರೆಸ್ಟೋರೆಂಟ್ ನ ಮಾಲೀಕರಾಗಿರುವ ಫರ್ಹಾನ್ ಜೊತೆ ಮದುವೆಯಾದಾಗ ಆಯೇಶಾ ವಯಸ್ಸು Just 23

ಒಟ್ಟಿನಲ್ಲಿ ಅಸಾಧಾರಣ ಪ್ರತಿಭೆ, ಸೌಂದರ್ಯದಿಂದ ಒಂದ್ಕಾಲದಲ್ಲಿ ಹಿಂದಿ ಚಿತ್ರರಂಗದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಆಯೇಶಾ ಟಾಕೀಯಾ, ಈಗ ಸಂಪೂರ್ಣ ಬದಲಾಗಿ ಹೋಗಿದ್ದಾರೆ. ಐ ಆಮ್ ಕಾಂಪ್ಲ್ಯಾನ್ ಗರ್ಲ್ ಅಂತ ಬೆಳೆದು, ಬಾಲಿವುಡ್‌ನಲ್ಲಿ 20 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿರುವ ಆಯೇಶಾ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.


Click it and Unblock the Notifications











