For Quick Alerts
  ALLOW NOTIFICATIONS  
  For Daily Alerts

  'ಟೈಮ್'ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತ ಏಕೈಕ ನಟ ಆಯುಷ್ಮಾನ್: ದೀಪಿಕಾ ಹೇಳಿದ್ದೇನು?

  |

  ಟೈಮ್ ನಿಯತಕಾಲಿಕೆಯ ಪ್ರಭಾವಿ 100 ಜನರ ಪಟ್ಟಿಯಲ್ಲಿ ಭಾರತದ ಖ್ಯಾತ ನಟ ಆಯುಷ್ಮಾನ್ ಖುರಾನ ಸ್ಥಾನ ಪಡೆದಿದ್ದಾನೆ. ವಿಶೇಷ ಅಂದರೆ ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನ ಖ್ಯಾತ ನಟರಲ್ಲಿ ಆಯುಷ್ಮಾನ್ ಖುರಾನ ಕೂಡ ಒಬ್ಬರು. ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಆಯುಷ್ಮಾನ್ ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದ ನಟ.

  ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್ ಗೆ ಟೈಮ್ ನಿಯತಕಾಲಿಕೆ ಪ್ರಭಾವಿ ವ್ಯಕ್ತಿಯ ಪಟ್ಟ ನೀಡಿದೆ. ಈ ಬಗ್ಗೆ ನಟ ಆಯುಷ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಟೈಮ್ ನಿಯತಕಾಲಿಕೆಯ ವಿಶ್ವದ 100 ಜನರ ಪಟ್ಟಿಯಲ್ಲಿ ನಾನು ಸಹ ಭಾಗವಾಗಿದ್ದು ಗೌರವಿದೆ" ಎಂದಿದ್ದಾರೆ. ಆಯುಷ್ಮಾನ್ ಈ ಪೋಸ್ಟ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಅಭಿನಂದನೆಗಳು ಹರಿದುಬರುತ್ತಿದೆ. ಆಯುಷ್ಮಾನ್ ಗೆ ನಟಿ ದೀಪಿಕಾ ಪಡುಕೋಣೆ ಸಹ ಮನಸಾರೆ ಹಾಡಿ ಹೊಗಳಿದ್ದಾರೆ. ಮುಂದೆ ಓದಿ...

  ನಟ ಆಯುಷ್ಮಾನ್ ಖುರಾನ ವಿರುದ್ಧ ತಿರುಗಿ ಬಿದ್ದ ನಟಿ ಕಂಗನಾ ರಣಾವತ್ ಟೀಂ

  ಸಿನಿಮಾ ಮೂಲಕ ಬದಲಾವಣೆ ತರಲು ಪ್ರಯತ್ನಿಸಿದ್ದೇನೆ- ಆಯುಷ್ಮಾನ್

  ಸಿನಿಮಾ ಮೂಲಕ ಬದಲಾವಣೆ ತರಲು ಪ್ರಯತ್ನಿಸಿದ್ದೇನೆ- ಆಯುಷ್ಮಾನ್

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಷ್ಮಾನ್ "ಟೈಮ್ ನನಗೆ ನೀಡಿದ ಮಾನ್ಯತೆಗೆ ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ. ಒಬ್ಬ ಕಲಾವಿದನಾಗಿ ನಾನು ಸಿನಿಮಾ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದೇನೆ. ಈ ಕ್ಷಣ ನನ್ನ ನಂಬಿಕೆ ಮತ್ತು ಪ್ರಯಾಣದ ದೊಡ್ಡ ಮೌಲ್ಯಮಾಪನದಂತಿದೆ. ಸರಿಯಾದ ವಿಚಾರಗಳನ್ನು ಹೇಳುವ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವ ಶಕ್ತಿ ಸಿನಿಮಾಕ್ಕೆ ಇದೆ ಎಂದು ನಾನು ನಂಬಿದ್ದೇನೆ. ಉತ್ತಮ ಸಿನಿಮಾಗಳ ಆಯ್ಕೆ ಮೂಲಕ ನನ್ನ ದೇಶಕ್ಕೆ ನಾನು ಕೊಡುಗೆ ನೀಡಿದ್ದೇನೆ ಎಂದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

  ಆಯುಷ್ಮಾನ್ ಬಗ್ಗೆ ದೀಪಿಕಾ ಹೇಳಿದ್ದೇನು?

  ಆಯುಷ್ಮಾನ್ ಬಗ್ಗೆ ದೀಪಿಕಾ ಹೇಳಿದ್ದೇನು?

  ನಟ ಆಯುಷ್ಮಾನ್ ಸಾಧನೆಗೆ ನಟಿ ದೀಪಿಕಾ ಪಡುಕೋಣೆ ಮನಸಾರೆ ಹಾಡಿ ಹೊಗಳಿದ್ದಾರೆ. ಆಯುಷ್ಮಾನ್ ಮೊದಲ ಸಿನಿಮಾ 'ವಿಕಿ ಡೋನರ್' ಸಿನಿಮಾವನ್ನು ನೆನಪಿಸಿಕೊಳ್ಳುವ ಮೂಲಕ ಆಯುಷ್ಮಾನ್ ಬಗ್ಗೆ ಸಿಹಿ ಮಾತುಗಳನ್ನು ಆಡಿದ್ದಾರೆ. "ಆಯುಷ್ಮಾನ್ ಖುರಾನ ಅವರ ಮೊದಲ ಸಿನಿಮಾ ವಿಕಿ ಡೋನರ್ ಅನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೂ ಮೊದಲು ಅವರು ಹಲವಾರು ವರ್ಷಗಳಿಂದ ಮನರಂಜನಾ ಉದ್ಯಮದ ಭಾಗವಾಗಿದ್ದರು." ಎಂದಿದ್ದಾರೆ.

  ಸವಾಲೊಡ್ಡುವ ಪಾತ್ರದಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ

  ಸವಾಲೊಡ್ಡುವ ಪಾತ್ರದಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ

  "ಆದರೆ ಇವತ್ತು ನಾನು ಮತ್ತು ನೀವು ಅವರ ಬಗ್ಗೆ ಮಾತನಾಡಲು ಕಾರಣ ಅದ್ಭುತ ಸಿನಿಮಾಗಳು ಮತ್ತು ಅಪ್ರತಿಮ ಪಾತ್ರಗಳು. ಸಿನಿಮಾ ನಾಯಕನ ಪಾತ್ರಗಳು ಹೀರೋಯಿಸಂಗೆ ಗಂಟು ಬೀಳುವ ಟ್ರೆಂಡ್ ಇರುವಾಗಲೂ ಆಯುಷ್ಮಾನ್ ಖುರಾನ ಅದಕ್ಕೆ ಸವಾಲೊಡ್ಡಿ ಬೇರೆ ಪಾತ್ರಗಳನ್ನು ಮಾಡುವಲ್ಲಿ ಯಶಸ್ವಿಯಾದವರು" ಎಂದು ಹೇಳಿದ್ದಾರೆ.

  ಕನ್ನಡದ 'ಬೀರ್ ಬಲ್' ರಿಮೇಕ್ ಮಾಡ್ತಾರಾ ಆಯುಷ್ಮಾನ್ ಖುರಾನ?

  ಮಗಳಿಗೆ ಮುದ್ದೆ, ಬಸ್ಸಾರು, ಸಪ್ಪಿನ ಪಲ್ಯ ತಿನ್ನಿಸಿದ Shwetha Srivatsav | Filmibeat Kannada
  ಆಯುಷ್ಮಾನ್ ಖುರಾನ ಸಿನಿಮಾಗಳು

  ಆಯುಷ್ಮಾನ್ ಖುರಾನ ಸಿನಿಮಾಗಳು

  2012ರಲ್ಲಿ 'ವಿಕಿ ಡೋನರ್' ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟ ನಟ ಆಯುಷ್ಮಾನ್ ಇದುವರೆಗೂ ಮಾಡಿರುವ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. 'ಬದಾಯಿ ಹೋ', 'ಅರ್ಟಿಕಲ್ 15', 'ಅಂಧಾಧುನ್' ಇನ್ನು ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅಂಧಾಧುನ್ ಸಿನಿಮಾದ ಅದ್ಭುತ ನಟನೆಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ 'ಗುಲಾಬೋ ಸಿತಾಬೋ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರದಲ್ಲಿ ಆಯುಷ್ಮಾನ್, ಅಮಿತಾಭ್ ಬಚ್ಚನ್ ತೆರೆ ಹಂಚಿದ್ದಾರೆ.

  English summary
  Bollywood Actor Ayushmann Khurrana makes it to Time's 100 most influential list. Deepika Padukone praises actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X