19 ಕೋಟಿ ಮೌಲ್ಯದ ಮನೆ ಖರೀದಿಸಿದ ನಟ: ವಿಶೇಷತೆ ಏನು?

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಬಾಲಿವುಡ್ ನಟರು ಮುಂಬೈನಲ್ಲಿ ಐಶಾರಾಮಿ ಮನೆಗಳನ್ನು ಖರೀದಿಸಿದರು. ಕೆಲವರು ಮಾರಿದರು ಸಹ. ಖರೀದಿಸಿದವರ ಸಾಲಿಗೆ ಬಾಲಿವುಡ್‌ನ ಪ್ರತಿಭಾವಂತ ನಟ ಆಯುಷ್ಮಾನ್ ಖುರಾನ ಸಹ ಸೇರಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಭಿನ್ನ ಮಾದರಿಯ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟ ಆಯುಷ್ಮಾನ್ ಖುರಾನಾ ರಿಯಲ್ ಎಸ್ಟೇಟ್‌ ಮೇಲೆ ಬಂಡವಾಳ ಹೂಡಿದ್ದು, ಮುಂಬೈನ ಅಂಧೇರಿಯ ಲೋಕಂಡ್‌ವಾಲಾ ಕಾಂಪ್ಲೆಕ್ಸ್‌ನಲ್ಲಿ ಐಶಾರಾಮಿ ಮನೆ ಖರೀದಿ ಮಾಡಿದ್ದಾರೆ.

ವಿಂಡ್ಸರ್ ಗ್ರ್ಯಾಂಡ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಲ್ಲಿ ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದು, ಒಳಾಂಗಣ ವಿನ್ಯಾಸದ ಬದಲಾವಣೆ ಬಳಿಕ ಹೊಸ ಮನೆಗೆ ಪ್ರವೇಶ ಮಾಡಲಿದ್ದಾರೆ ಆಯುಷ್ಮಾನ್ ಖುರಾನಾ ಮತ್ತು ಪತ್ನಿ.

Ayushmann Khurrana Purchased New House In Mumbai

ಆಯುಷ್ಮಾನ್ ಖುರಾನ ಈಗ ಖರೀದಿಸಿರುವ ಫ್ಲ್ಯಾಟ್‌ ಬರೋಬ್ಬರಿ 4027 ಚದರ ಅಡಿ ಇದ್ದು, ಹಲವು ಬೆಡ್‌ರೂಮ್ ಇನ್ನಿತರೆ ಐಶಾರಾಮಿ ಸವಲತ್ತುಗಳನ್ನು ಹೊಂದಿದೆ. ಜೊತೆಗೆ ನಾಲ್ಕು ಕಾರಿಗೆ ಪಾರ್ಕಿಂಗ್ ಸ್ಥಳವನ್ನೂ ನೀಡಲಾಗಿದೆ. ಈ ಫ್ಲ್ಯಾಟ್‌ಗೆ 19.30 ಕೋಟಿ ರುಪಾಯಿ ನೀಡಿದ್ದಾರೆ ಆಯುಷ್ಮಾನ್ ಖುರಾನಾ.

ಆಯುಷ್ಮಾನ್ ಖುರಾನಾ ಮಾತ್ರವೇ ಅಲ್ಲದೆ ಅವರ ಸಹೋದರ, ನಟ ಅಪರಿಕ್ಷಿತ್ ಖುರಾನಾ ಸಹ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್‌ಗೆ 7.25 ಕೋಟಿ ರುಪಾಯಿ ಹಣ ವ್ಯಯಿಸಿದ್ದಾರೆ.

2020 ರಲ್ಲಿ ಆಯುಷ್ಮಾನ್ ಖುರಾನಾ ಹಾಗೂ ಅಪರಿಕ್ಷಿತ್ ಖುರಾನಾ ಅವರುಗಳು ಜಂಟಿಯಾಗಿ ಹರಿಯಾಣದ ಪಂಚ್‌ಕುಲಾನಲ್ಲಿ 9 ಕೋಟಿ ನೀಡಿ ಮನೆ ಖರೀದಿಸಿದ್ದರು. ಈ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರಿಗಾಗಿ ಸಹೋದರರು ಖರೀದಿಸಿದ್ದರು. ಖುರಾನಾ ಸಹೋದರರ ಕುಟುಂಬವು ಚಂಡೀಘಡದಲ್ಲಿ ನೆಲೆಸಿತ್ತು. ಇದೀಗ ಪಂಚ್‌ಕುಲಾಕ್ಕೆ ಸ್ಥಳಾಂತರಗೊಂಡಿದೆ.

ಆಯುಷ್ಮಾನ್ ಖುರಾನಾ ಹಾಗೂ ಪತ್ನಿ ತಾಹಿರಾ ಕಶ್ಯಪ್ ತಮ್ಮ ಇಬ್ಬರು ಮಕ್ಕಳಾದ ವಿರಜ್‌ವೀರ್ ಮತ್ತು ವರುಷ್ಕಾ ಜೊತೆ 4000 ಚದರ ಅಡಿಯ ಏಳು ಬೆಡ್‌ರೂಮ್‌ಗಳುಳ್ಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ಆಯುಷ್ಮಾನ್ ಖುರಾನಾ ತಮ್ಮ ನಿವಾಸ ಬದಲಾಯಿಸಲಿದ್ದಾರೆ.

ಆಯುಷ್ಮಾನ್ ಖುರಾನಾ ನಟಿಸಿರುವ 'ಚಂಡೀಘಡ್ ಕರೇ ಆಷಿಕಿ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದು ಅಭಿಷೇಕ್ ಕಪೂರ್ ನಿರ್ದೇಶನ ಮಾಡಿದ್ದಾರೆ. ಆಯುಷ್ಮಾನ್ ಖುರಾನಾ, 'ಡಾಕ್ಟರ್ ಜೀ', 'ಆಕ್ಷನ್ ಹೀರೋ', 'ಅನೇಕ್' ಹೆಸರಿನ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, 'ಡಾಕ್ಟರ್ ಜೀ' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

More from Filmibeat

English summary
Actor Ayushmann Khurrana purchased new house in Mumbai. He spent 19.30 crore rs for his new house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X