For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ ಬದಲು ಸ್ಟಾರ್ ನಟನ ಜೊತೆ ಆನಂದ್ ಎಲ್ ರೈ ಸಿನಿಮಾ?

  |

  ಬಾಲಿವುಡ್ ಯಶಸ್ವಿ ನಿರ್ದೇಶಕ ಆನಂದ್ ಎಲ್ ರೈ ಮತ್ತು ಕಾರ್ತಿಕ್ ಆರ್ಯನ್ ಕಳೆದ ಎರಡ್ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕರಣ್ ಜೋಹರ್, ಶಾರೂಖ್ ಖಾನ್ ಸಂಸ್ಥೆ ಬಳಿಕ ಆನಂದ್ ಎಲ್ ರೈ ಜೊತೆ ಮಾಡಬೇಕಿದ್ದ ಚಿತ್ರದಿಂದಲೂ ಕಾರ್ತಿಕ್‌ರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

  ಕಾರ್ತಿಕ್ ಆರ್ಯನ್ ಮಾಡಬೇಕಿದ್ದ ಚಿತ್ರವನ್ನು ಈಗ ಆಯುಷ್ಮಾನ್ ಖುರಾನ್ ಜೊತೆ ಮಾಡಲು ನಿರ್ದೇಶಕ ಆನಂದ್ ಎಲ್ ರೈ ನಿರ್ಧರಿಸಿದ್ದಾರೆ ಎಂಬ ಸುದ್ದಿ ಈಗ ಬಿಗ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.

  ಕರಣ್, ಶಾರುಖ್ ಬಳಿಕ ಮತ್ತೊಂದು ಸಿನಿಮಾದಿಂದ ಕಾರ್ತಿಕ್ ಔಟ್: ನಿರ್ದೇಶಕನ ಪ್ರತಿಕ್ರಿಯೆಕರಣ್, ಶಾರುಖ್ ಬಳಿಕ ಮತ್ತೊಂದು ಸಿನಿಮಾದಿಂದ ಕಾರ್ತಿಕ್ ಔಟ್: ನಿರ್ದೇಶಕನ ಪ್ರತಿಕ್ರಿಯೆ

  ತಮಿಳಿನ ಹಿಟ್ ಚಿತ್ರವೊಂದನ್ನು ಹಿಂದಿಗೆ ರಿಮೇಕ್ ಮಾಡಲು ಯೋಜಿಸಿದ್ದು, ಅದರಲ್ಲಿ ಕಾರ್ತಿಕ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಈ ಬಗ್ಗೆ ನಿರ್ದೇಶಕರ ಆಪ್ತ ವಲಯದಿಂದ ಸ್ಪಷ್ಟನೆ ಸಿಕ್ಕಿದ್ದು, ಇದೆಲ್ಲ ವದಂತಿ ಅಷ್ಟೇ ಎಂದಿದ್ದಾರೆ. ''ಕಾರ್ತಿಕ್ ಜೊತೆ ಆನಂದ್ ಯಾವ ಚಿತ್ರವೂ ಮಾಡುವ ಕುರಿತು ಒಪ್ಪಂದ ಆಗಿಲ್ಲ. ಇದು ಆಧಾರ ರಹಿತ ಸುದ್ದಿ'' ಎಂದು ತಿಳಿಸಿದ್ದಾರೆ.

  ಆನಂದ್ ಎಲ್ ರೈ ಕಚೇರಿಗೆ ಬಹಳಷ್ಟು ಕಲಾವಿದರು ಬರ್ತಾರೆ, ಹೋಗ್ತಾರೆ. ಅಷ್ಟು ಮಾತ್ರಕ್ಕೆ ಅವರೆಲ್ಲರ ಜೊತೆಯಲ್ಲೂ ಸಿನಿಮಾ ಮಾಡ್ತಾರೆ ಎನ್ನುವುದು ನಿಜವಲ್ಲ. ಕಾರ್ತಿಕ್ ಆರ್ಯನ್ ಜೊತೆ ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಆಯುಷ್ಮಾನ್ ಖುರಾನ್ ಜೊತೆಗಿನ ಸಿನಿಮಾ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆನಂದ್ ಎಲ್ ರೈ ಆಪ್ತ ''ಆ ಚಿತ್ರಕ್ಕು ಈ ಸುದ್ದಿಗೂ ಸಂಬಂಧವೇ ಇಲ್ಲ. ಅದು ಬೇರೆ ಪ್ರಾಜೆಕ್ಟ್. ಅದು ಇನ್ನು ಮಾತುಕತೆಯ ಹಂತದಲ್ಲಿದೆ'' ಎಂದು ಹೇಳುವ ಮೂಲಕ ವಂದತಿಗಳಿಗೆ ಬ್ರೇಕ್ ಹಾಕಿದ್ದಾರೆ.

  Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada

  ಸದ್ಯ ಬೆಳವಣಿಗೆ ಗಮನಿಸಿದ ನೆಟ್ಟಿಗರು ನೆಪೋಟಿಸಂ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಗಿದೆ. ಸುಶಾಂತ್ ಸಿಂಗ್‌ಗೆ ಮಾಡಿದ ರೀತಿ ಕಾರ್ತಿಕ್ ಆರ್ಯನ್‌ಗೂ ಮಾಡಲಾಗುತ್ತಿದೆ. ಪ್ರಭಾವಿ ಸಿನಿಮಾ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಈ ಪ್ರತಿಭೆಯನ್ನು ತುಳಿಯುತ್ತಿದ್ದಾರೆ. ಒಬ್ಬೊಬ್ಬರೆ ಸಿನಿಮಾಗಳಿಂದ ಕೈ ಬಿಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

  English summary
  Actor Ayushmann Khurrana Replacing Kartik Aaryan in Aanand L Rai Next. what is the Truth?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X