For Quick Alerts
  ALLOW NOTIFICATIONS  
  For Daily Alerts

  ಆಯುಷ್ಮಾನ್ ಖುರಾನಾ 'ಡ್ರೀಮ್ ಗರ್ಲ್' ಚಿತ್ರದ ಸಹನಟಿ ರಿಂಕು ಕೊರೊನಾಗೆ ಬಲಿ

  |

  ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅಭಿನಯದ ಡ್ರೀಮ್ ಗರ್ಲ್ ಚಿತ್ರದಲ್ಲಿ ಅಭಿನಯಿಸಿದ್ದ ಅಸ್ಸಾಂ ಮೂಲದ ನಟಿ ರಿಂಕು ಸಿಂಗ್ ನಿಕುಂಬ್ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೋವಿಡ್ ವಿರುದ್ಧ ಹೋರಾಡುತ್ತಿದ್ದ ರಿಂಕು ಸಿಂಗ್ ಐಸಿಯುಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

  ಕೊರೊನಾ ಪಾಸಿಟಿವ್ ಬಂದ ಬಳಿಕ ರಿಂಕು ಮನೆಯಲ್ಲೇ ಐಸೋಲೇಷನ್ ನಲ್ಲಿದ್ದರು. ಆದರೆ ಆರೋಗ್ಯ ಹದಗೆಟ್ಟಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ನೀಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಜೂನ್ 4) ಕೊನೆಯುಸಿರೆಳೆದಿದ್ದಾರೆ.

  ರಿಂಕು ಸಿಂಗ್ ನಿಧನದ ಸುದ್ದಿಯನ್ನು ಬಾಲ್ಯದ ಗೆಳತಿ ದರ್ಶನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸಾವಿನ ಸುದ್ದಿ ಕೇಳಿ ನನ್ನ ಹೃದಯ ಚುರಾಗಿದೆ. ಸುಮಾರು 30 ವರ್ಷಕ್ಕೂ ಅಧಿಕ ವರ್ಷದ ಸ್ನೇಹ ನಮ್ಮದು. ನಾವು ನನ್ನ ಹೃದಯದಲ್ಲಿ ಶಾಶ್ವತವಾಗಿರುತ್ತೀರಿ' ಎಂದು ಹೇಳಿದ್ದಾರೆ.

  ಅಂದಹಾಗೆ ರಿಂಕು ಸಿಂಗ್ ಮೇ 7ರಂದು ಕೊರೊನಾ ಲಸಿಕೆ ಸಹ ಪಡೆದಿದ್ದರು. ಈ ಬಗ್ಗೆ ರಿಂಕು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇನ್ನು ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ಅಪ್ಪಟ ಅಭಿಮಾನಿಯಾಗಿದ್ದ ರಿಂಕು, ಇತ್ತೀಚಿಗೆ ಮಾಧರಿ ದೀಕ್ಷಿತ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ನಿಮ್ಮ ಕಾರಣದಿಂದ ಮನರಂಜನಾ ಕ್ಷೇತ್ರದಲ್ಲಿ ಇದ್ದೀನಿ ಎಂದು ಹೇಳಿದ್ದರು.

  ಡಾಕ್ಟರ್ ಜೊತೆ ಕಲಾವಿದೆ ಜಯ ಅವರ ತಮ್ಮನ ಮಗಳ ಸಂಭಾಷಣೆ !!| B Jaya Kannada Actress | Audio Leak

  ರಿಂಕು ಹಲೋ ಚಾರ್ಲಿ ಸಿನಿಮಾದಲ್ಲೂ ನಟಿಸಿದ್ದರು. ಅನೇಕ ಸೀರಿಸ್ ನಲ್ಲೂ ಮಿಂಚಿದ್ದರು. ಚಿಡಿಯಾಘರ್, ಮೇರಿ ಹಾನಿಕಾರಕ್ ಬಿವಿ ಸೇರಿದಂತೆ ಅನೇಕ ಸೀರಿಸ್ ನಲ್ಲೂ ನಟಿಸಿದ್ದಾರೆ.

  English summary
  Ayushmann Khurrana's Dream Girl Co-star Rinku Singh died due to Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X