For Quick Alerts
  ALLOW NOTIFICATIONS  
  For Daily Alerts

  ಆ ಪಾತ್ರ ಮಾಡಲೇಬೇಂಕೆಂಬುದು ಅಯುಷ್ಮಾನ್ ಖುರಾನಾ ಆಸೆ: ಯಾವುದಾ ಪಾತ್ರ?

  |

  ನಟರಿಗೆ ತಾವು ಇಂಥಹುದ್ದೊಂದು ಪಾತ್ರ ಮಾಡಬೇಕು ಎಂಬ ಆಸೆ ಇರುತ್ತದೆ. ಎಂಥಹಾ ದೊಡ್ಡ ನಟರುಗಳೇ ಆದರೂ ಯಾವುದಾದರೂ ಒಂದು ಉತ್ತಮ ಪಾತ್ರ ನೋಡಿದಾಗ 'ನಾನು ಈ ಪಾತ್ರದಲ್ಲಿ ನಟಿಸಬೇಕಿತ್ತು' ಎಂದುಕೊಳ್ಳುವುದು ಸಹಜ.

  ವೈದ್ಯರಿಗೆ ಕಲ್ಲು ಹೊಡಯುವುದು ನಿಲ್ಲಿಸಿ ಎಂದ ಸಲ್ಮಾನ್ ಖಾನ್

  ಅಂತೆಯೇ ಬಾಲಿವುಡ್‌ನ ಪ್ರತಿಭಾವಂತ ಯುವ ನಟ ಆಯುಷ್ಮಾನ್ ಖುರಾನಾ ಸಹ ಪಾತ್ರವೊಂದರ ಅಮಲಿಗೆ ಬಿದ್ದಿದ್ದಾರೆ. ಆ ಪಾತ್ರ ಅವರನ್ನು ಅದೆಷ್ಟು ಕಾಡಿಸಿದೆಯೆಂದರೆ ''ಆ ಪಾತ್ರವನ್ನು ನಾನು ಮಾಡಲೇಬೇಕು, ನಿರ್ಮಾಪಕರೇ ಸಹಕರಿಸಿ'' ಎಂದು ಅವರು ಮನವಿ ಮಾಡಿದ್ದಾರೆ.

  ಅವರೇನು ಯಾವುದೋ ಹಾಲಿವುಡ್, ಬಾಲಿವುಡ್ ಸಿನಿಮಾದ ಖ್ಯಾತ ಪಾತ್ರವನ್ನು ಮಾಡುವ ಆಸೆ ವ್ಯಕ್ತಪಡಿಸಿಲ್ಲ, ಬದಲಿಗೆ ವೆಬ್‌ ಸೀರೀಸ್‌ನ ಪ್ರಖ್ಯಾತ ಪಾತ್ರವೊಂದನ್ನು ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಯಾವುದು ಆ ಪಾತ್ರ? ಮುಂದೆ ಓದಿ...

  ವೆಬ್ ಸೀರೀಸ್ ಪಾತ್ರವನ್ನು ಮಾಡಬೇಕಂತೆ ಆಯುಷ್ಮಾನ್

  ವೆಬ್ ಸೀರೀಸ್ ಪಾತ್ರವನ್ನು ಮಾಡಬೇಕಂತೆ ಆಯುಷ್ಮಾನ್

  ಜಗದ್ವಿಖ್ಯಾತ ವೆಬ್‌ ಸೀರೀಸ್‌ 'ಮನಿ ಹೈಸ್ಟ್‌' ನ ಪ್ರಮುಖ ಪಾತ್ರ 'ಪ್ರೊಫೆಸರ್' ಪಾತ್ರವನ್ನು ಆಯುಷ್ಮಾನ್ ಖುರಾನಾ ಮಾಡಬೇಕಂತೆ. ಆ ಪಾತ್ರದಲ್ಲೇ ನಟಿಸಲೇ ಬೇಕು ಎಂಬ ಒದ್ದಾಟ ಒಳಗೆ ಶುರುವಾಗಿದೆಯಂತೆ ಆಯುಷ್ಮಾನ್‌ ಗೆ. ಅವರೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ವಿಡಿಯೋ ಪೋಸ್ಟ್ ಮಾಡಿರುವ ಆಯುಷ್ಮಾನ್ ಖುರಾನಾ

  ವಿಡಿಯೋ ಪೋಸ್ಟ್ ಮಾಡಿರುವ ಆಯುಷ್ಮಾನ್ ಖುರಾನಾ

  ವಿಡಿಯೋ ಹಾಕಿರುವ ಆಯುಷ್ಮಾನ್, ಪ್ರೊಫೆಸರ್‌ ರೀತಿಯ ಕನ್ನಡಕ ಧರಿಸಿ, 'ಮನಿ ಹೈಸ್ಟ್‌'ನಲ್ಲಿ ಬಳಸಿಕೊಳ್ಳಲಾಗಿರುವ 'ಬೆಲ್ಲಾ ಚಾವ್' ಹಾಡನ್ನು ಪಿಯಾನೊ ದಲ್ಲಿ ನುಡಿಸುತ್ತಿದ್ದಾರೆ. ಪ್ರೊಫೆಸರ್ ಜಗತ್ತಿಗೆ ನಾನು ಹೋಗಬೇಕು, ಆ ಪಾತ್ರದಲ್ಲಿ ನಾನು ನಟಿಸಬೇಕು ನಿರ್ಮಾಪಕರೇ ಈ ಬಗ್ಗೆ ಗಮನವಹಿಸಿ ಎಂದು ಅವರು ಮನವಿ ಮಾಡಿದ್ದಾರೆ.

  ಪ್ರೊಫೆಸರ್' ವಿಶ್ವದಾದ್ಯಂತ ಮೆಚ್ಚುಗೆಗಳಿಸಿರುವ ಪಾತ್ರ

  ಪ್ರೊಫೆಸರ್' ವಿಶ್ವದಾದ್ಯಂತ ಮೆಚ್ಚುಗೆಗಳಿಸಿರುವ ಪಾತ್ರ

  'ಮನಿಹೈಸ್ಟ್' ವೆಬ್ ಸೀರೀಸ್‌ನ ಪ್ರಮುಖ ಪಾತ್ರ 'ಪ್ರೊಫೆಸರ್', ದಪ್ಪ ಕನ್ನಡಕ ಧರಿಸಿ ಇಳಿ ದನಿಯಲ್ಲಿ ಮಾತನಾಡುವ ಆದರೆ ಅಗಾಧ ಬುದ್ಧಿಶಕ್ತಿಯುಳ್ಳ ಜೊತೆಗೆ ದೊಡ್ಡ ಆದರ್ಶಗಳನ್ನು ಹೊಂದಿರುವ ಈತ ದರೋಡೆಕೋರರ ಗುಂಪಿನ ನಾಯಕ.

  ಆಯುಷ್ಮಾನ್ ಖುರಾನಾ ಬಾಲಿವುಡ್ ಪ್ರತಿಭಾವಂತ ನಟ

  ಆಯುಷ್ಮಾನ್ ಖುರಾನಾ ಬಾಲಿವುಡ್ ಪ್ರತಿಭಾವಂತ ನಟ

  ಆಯುಷ್ಮಾನ್ ಖುರಾನಾ ಬಾಲಿವುಡ್ ನ ಪ್ರತಿಭಾವಂತ ನಟರಾಗಿದ್ದು, ಭಿನ್ನ ಹಾದಿಯ ಸಿನಿಮಾಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಂಧಾದುನ್ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ, ಆರ್ಟಿಕಲ್ 15 ಸಿನಿಮಾದ ನಟನೆಗೆ ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್ ದೊರೆತಿದೆ.

  English summary
  Actor Ayushmann khurrana wants to act famous character professor of Money Heist web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X