ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ನಟ ಆಯುಷ್ಮಾನ್ ಖುರಾನ ವಿಶ್ ಮಾಡಿದ್ದು ಹೀಗೆ
ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಇತ್ತೀಚಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 55ನೇ ವಸಂತಕ್ಕೆ ಕಾಲಿಟ್ಟ ನಟ ಶಾರುಖ್ ಖಾನ್ ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ಪ್ರೀತಿಯ ಸಂದೇಶ ಕಳುಹಿಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಅನುಷ್ಕಾ ಶರ್ಮಾ, ಕರೀನಾ ಕಪೂರ್, ಮಾಧುರಿ ದೀಕ್ಷಿತ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕ ಅನೇಕರು ಲೆಜೆಂಡರಿ ನಟನಿಗೆ ಶುಭಹಾರೈಸುತ್ತಿದ್ದಾರೆ.
ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಕಲಾವಿದರು ಸಹ ವಿಶ್ ಮಾಡಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಶಾರುಖ್ ಖಾನ್ ಗೆ ವಿಭಿನ್ನ ರೀತಿಯಲ್ಲಿ ವಿಶ್ ಮಾಡುವ ಮೂಲಕ ಅಭಿಮಾನ, ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಆಯುಷ್ಮಾನ್ ಖುರಾನ ಸಂಗೀತದ ಮೂಲಕ ವಿಶ್ ಮಾಡಿದ್ದಾರೆ.

ಸೊಳ್ಳೆ ಬ್ಯಾಟ್ ಹಿಡಿದು 'ತುಜೆ ದೇಖಾ ತೋ ಯೇ ಜನಾ ಸಂ..' ಹಾಡನ್ನು ಹಾಡಿ, ಆಕ್ಷನ್ ಮಾಡುವ ಮೂಲಕ ಶಾರುಖ್ ಗೆ ಶುಭಕೋರಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ ಶಾರುಖ್ ಖಾನ್ ಗೆ ಅರ್ಪಿಸಿದ್ದಾರೆ. ಆಯುಷ್ಮಾನ್ ವಿಭಿನ್ನ ವಿಶ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ನಟಿ ದೀಪಿಕಾ ಪಡುಕೋಣೆ ಸಹ ಸಂಗೀತ ಗೌರವವನ್ನು ಅರ್ಪಿಸಿದ್ದಾರೆ. ಶಾರುಖ್ ಹುಟ್ಟುಹಬ್ಬದ ದಿನ ಶಾರುಖ್ ಅಭಿನಯದ ಸಿನಿಮಾಗಳ ಹಾಡನ್ನು ಕೇಳುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಿರುವುದಾಗಿ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಂದ್ಹಾಗೆ ಶಾರುಖ್ ಖಾನ್ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಐಪಿಎಲ್ ಪ್ರಯುಕ್ತ ಶಾರುಖ್, ಕುಟುಂಬ ಸಮೇತ ದುಬೈನಲ್ಲಿ ಬೀಡುಬಿಟ್ಟಿದ್ದು, ಅಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.


Click it and Unblock the Notifications











