ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದ್ದ 'ಜೋಡಿಹಕ್ಕಿ'ಗಳು

By Bharath Kumar

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತು ಶಾಹೀದ್ ಕಪೂರ್ ಸಹೋದರ ಇಶಾನ್ ಕತ್ತಾರ್ ಇಬ್ಬರು ಈಗ ಬಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟಿರುವ ನವಜೋಡಿಗಳು. ಜುಲೈ 20 ರಂದು ತೆರೆಕಂಡ 'ದಡಕ್' ಚಿತ್ರದ ಮೂಲಕ ಈ ಜೋಡಿಹಕ್ಕಿ ಬಿಟೌನ್ ನಲ್ಲಿ ತಮ್ಮ ಅಧ್ಯಾಯ ಆರಂಭಿಸಿದೆ.

ಸಿನಿಮಾ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದ್ದ ಈ ಜೋಡಿ ನಿರೀಕ್ಷೆಯಂತೆ ಪ್ರೇಕ್ಷಕರ ಹಾಗೂ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಎಲ್ಲರನ್ನ ಬೋಲ್ಡ್ ಮಾಡಿದ್ದಾರೆ.

ಹೀಗೆ, ಜಾಹ್ನವಿ ಕಪೂರ್ ಮತ್ತು ಇಶಾನ್ ರೀತಿಯಲ್ಲಿ ಗಮನ ಸೆಳೆದಿದ್ದ ಹಾಗೂ ಒಟ್ಟೊಟ್ಟಿಗೆ ಇಂಡಸ್ಟ್ರಿಗೆ ಪ್ರವೇಶ ಮಾಡಿದ ಕೆಲವು ಸೂಪರ್ ಜೋಡಿಗಳು ಬಾಲಿವುಡ್ ನಲ್ಲಿವೆ. ಸಿನಿಮಾ ಫೇಲ್ ಆದ್ರೂ ಜೋಡಿ ಹಿಟ್ ಆಗಿ, ವೃತ್ತಿ ಜೀವನ ಸೂಪರ್ ಹಿಟ್ ಮಾಡಿಕೊಂಡವರು ಬಗ್ಗೆ ನಾವು ಪರಿಚಯ ಮಾಡ್ತೀವಿ. ಅದು ಯಾರು ಎಂದು ಮುಂದೆ ನೋಡಿ....

ಅಭಿಷೇಕ್ ಮತ್ತು ಕರೀನಾ

ಅಭಿಷೇಕ್ ಮತ್ತು ಕರೀನಾ

ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಹಾಗೂ ಕಪೂರ್ ಫ್ಯಾಮಿಲಿಯ ಕರೀನಾ ಕಪೂರ್ ಒಟ್ಟಿಗೆ ಇಂಡಸ್ಟಿಗೆ ಎಂಟ್ರಿ ಕೊಟ್ಟರು. ಒಂದೇ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. 2000 ದಲ್ಲಿ ಬಿಡುಗಡೆಯಾಗಿದ್ದ 'Refugee' ಚಿತ್ರದಿಂದ ಇಬ್ಬರ ಕರಿಯರ್ ಶುರುವಾಗಿದೆ. ಇಬ್ಬರು ಸ್ಟಾರ್ ಕುಟುಂಬದ ಮಕ್ಕಳು ಅಭಿನಯಿಸಿದ್ದ ಈ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿತ್ತು.

ರಣ್ಬೀರ್ ಕಪೂರ್-ಸೋನಮ್ ಕಪೂರ್

ರಣ್ಬೀರ್ ಕಪೂರ್-ಸೋನಮ್ ಕಪೂರ್

ನಟ ರಣ್ಬೀರ್ ಕಪೂರ್ ಮತ್ತು ಸೋನಮ್ ಕಪೂರ್ ಇಬ್ಬರು 2007 ರಲ್ಲಿ ಮೂಡಿ ಬಂದ 'ಸಾವರಿಯಾ' ಚಿತ್ರದ ಮೂಲಕ ಬಿಟೌನ್ ನಲ್ಲಿ ಅದೃಷ್ಟವಂತರಾದರು. ಪೋಸ್ಟರ್ ನಿಂದಲೇ ಹೆಚ್ಚು ಗಮನ ಸೆಳೆದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ಮ್ಯಾಜಿಕ್ ಕೂಡ ಮಾಡಿಲ್ಲ. ಆದ್ರೆ, ಇಬ್ಬರು ಪ್ರತಿಭಾನ್ವಿತ ಕಲಾವಿದರನ್ನ ಇಂಡಸ್ಟ್ರಿಗೆ ಕೊಟ್ಟಿದ್ದೆ ಪುಣ್ಯ.

ಹೃತಿಕ್-ಅಮೀಶಾ

ಹೃತಿಕ್-ಅಮೀಶಾ

ಬಾಲನಟನಾಗಿ ಅಭಿನಯಿಸಿದ್ದ ಹೃತಿಕ್ 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ನಾಯಕನಾಗಿ ಲಾಂಚ್ ಆದರು. ಈ ಚಿತ್ರದಲ್ಲಿ ಅಮೀಶಾ ಪಟೇಲ್ ನಾಯಕಿಯಾಗಿ ಅಭಿನಯಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆದ ಸಿನಿಮಾ, ಹಿಂದಿ ಚಿತ್ರರಂಗಕ್ಕೆ ಇಬ್ಬರು ಸ್ಟಾರ್ ಗಳನ್ನ ಕೊಟ್ಟ ಹೆಗ್ಗಳಿಕೆ ಪಡೆದುಕೊಂಡಿತ್ತು.

'ಬಾಬಿ' ಚಿತ್ರವನ್ನ ಮರೆಯುವಾಗಿಲ್ಲ

'ಬಾಬಿ' ಚಿತ್ರವನ್ನ ಮರೆಯುವಾಗಿಲ್ಲ

'ಬಾಬಿ' ಚಿತ್ರವನ್ನ ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ರಿಷಿ ಕಪೂರ್ ಹಾಗೂ ಡಿಂಪಲ್ ಕಪಾಡಿಯಾ ಎಂಬ ಎರಡು ನಕ್ಷತ್ರವನ್ನ ಚಿತ್ರರಂಗಕ್ಕೆ ಕೊಟ್ಟಿದ್ದು ಇದೇ ಚಿತ್ರ. 1973ರಲ್ಲಿ ಈ ಸಿನಿಮಾ ಬಹುದೊಡ್ಡ ಹಿಟ್ ಆಗಿದ್ದಲ್ಲದೇ ಆಗಿನ ಕಾಲಕ್ಕೆ 6 ಕೋಟಿ ಗಳಿಸಿತ್ತು.

ಸನ್ನಿ ಡಿಯೋಲ್ ಜೋಡಿ

ಸನ್ನಿ ಡಿಯೋಲ್ ಜೋಡಿ

ಬಾಬಿ ಚಿತ್ರದಂತೆ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಬೆತಾಬ್'. ಈ ಸಿನಿಮಾ ಕೂಡ ಸುಮಾರು 5 ಕೋಟಿ ಗಳಿಸಿತ್ತಂತೆ. ಈ ಚಿತ್ರದ ಮೂಲಕ ಸನ್ನಿ ಡಿಯೋಲ್ ಮತ್ತು ಅಮೃತ ಸಿಂಗ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ವಿಶೇಷ ಅಂದ್ರೆ ಇವರಿಬ್ಬರು ನಿಜ ಜೀವನದಲ್ಲೂ ಡೇಟ್ ಮಾಡಿದ್ದರಂತೆ.

ಧರ್ಮೇಂದ್ರ ಮಗ

ಧರ್ಮೇಂದ್ರ ಮಗ

ಬಾಲಿವುಡ್ ಸೂಪರ್ ಸ್ಟಾರ್ ಧರ್ಮೇಂದ್ರ ಅವರ ಮಗ ಬಾಬಿ ಡಿಯೋಲ್ ಹಾಗೂ ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್ ಖನ್ನಾ ಇಬ್ಬರು 'ಬರ್ಸಾತ್' ಚಿತ್ರದ ಮೂಲಕ 1995 ರಲ್ಲಿ ಮೋಡಿ ಮಾಡಿದರು. ಬಿಡುಗಡೆಗೂ ಮುಂಚೆ ಈ ಸಿನಿಮಾನೂ ದೊಡ್ಡ ಮಟ್ಟದ ಹೈಪ್ ಕ್ರಿಯೆಟ್ ಮಾಡಿತ್ತು. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಫೇಲ್ ಆಯಿತು.

ಟೈಗರ್ ಶ್ರಾಫ್ ಮತ್ತು ಕೃತಿ

ಟೈಗರ್ ಶ್ರಾಫ್ ಮತ್ತು ಕೃತಿ

ಬಾಲಿವುಡ್ ನ ಸ್ಟಾರ್ ನಟ ಜಾಕಿ ಶ್ರಾಫ್ ಅವರ ಮಗ ಟೈಗರ್ ಶ್ರಾಫ್ ಮತ್ತು ಕೃತಿ ಸನನ್ ಇಬ್ಬರು 'ಹೀರೋಪಂತಿ' ಚಿತ್ರದಲ್ಲಿ ಕಮಾಲ್ ಮಾಡಿದರು. ಈ ಸಿನಿಮಾ ಇವರಿಬ್ಬರಿಗೆ ಚೊಚ್ಚಲ ಚಿತ್ರವಾಗಿತ್ತು.

More from Filmibeat

English summary
Like Janhvi Kapoor & Ishaan Khatter, 7 Other B-town Debut Jodis Who Created Huge Hype Before Release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X