ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಮಿಂಚಿದ ಬಿ ಟೌನ್ ಸ್ಟಾರ್ ಕಪಲ್ಸ್
ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಇತ್ತೀಚಿಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಇಡೀ ಭಾರತೀಯ ಚಿತ್ರರಂಗವೇ ಶುಭಾಶಯಗಳನ್ನು ಕೋರಿ ಹಾರೈಸಿದೆ.
ಕರಣ್ ಜೋಹರ್ 'ಕಾಫಿ ವಿತ್ ಕರಣ್' ಶೋ ಮೂಲಕ ಮನೆ ಮನಗಳನ್ನು ತಲುಪುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ.
ನಿನ್ನೆ (ಮೇ 25) ರಂದು ಕರಣ್ ಜೋಹರ್ ತಮ್ಮ ಬರ್ತಡೇಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದಾರೆ. ಮುಂಬೈನ ಯಶ್‌ರಾಜ್ ಸ್ಟುಡಿಯೋದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಭರ್ಜರಿ ಕಾರ್ಯಕ್ರಮವನ್ನೇ ಆಯೋಜನೆ ಮಾಡಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವು ನಟ ನಟಿಯರು ಕೂಡ ಆಗಮಿಸಿ ಕರಣ್ ಜೋಹರ್‌ಗೆ ಶುಭಾಶಯ ತಿಳಿಸಿದ್ದಾರೆ.
Recommended Video


ಕರಣ್‌ಗೆ ಬರ್ತಡೇ ಪಾರ್ಟಿಯಲ್ಲಿ ತಾರೆಗಳ ದಂಡು
ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯನ್ನು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಮುಂಬೈನ ಯಶ್‌ರಾಜ್ ಸ್ಟುಡೀಯೋದಲ್ಲಿ ಅದ್ದೂರಿಯಾಗಿ ಪಾರ್ಟಿ ಅರೆಂಜ್ ಮಾಡಿದ್ದರು. ಈ ಪಾರ್ಟಿಗೆ ಭಾರತೀಯ ಚಿತ್ರರಂಗದ ಘಟಾನುಘಟಿ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ನಿನ್ನೆ (ಮೇ 25) ಸಂಜೆ ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ತಾರೆಗಳ ದಂಡೇ ಹರಿದು ಬಂದಿತ್ತು. ಸೌತ್, ನಾರ್ಥ್ ಎನ್ನದೇ ಎಲ್ಲಾ ಚಿತ್ರರಂಗದ ನಟ ನಟಿಯರು ಕರಣ್ ಪಾರ್ಟಿಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಪೋಟೋಗಳು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗ್ತಿವೆ.

ಕರಣ್ ಪಾರ್ಟಿಯಲ್ಲಿ ಬಿ ಟೌನ್ ಕಪಲ್ಸ್
ಕರಣ್ ಜೋಹರ್ ಬರ್ತಡೇಯನ್ನು ಸೆಲೆಬ್ರೆಟಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮಾಡಲಾಗಿದೆ. ಈ ಪಾರ್ಟಿಯಲ್ಲಿ ಎಲ್ಲರ ಪ್ರಮುಖ ಆಕರ್ಷಣೆ ಎಂದರೆ, ಸ್ಟಾರ್ ಕಪಲ್‌ಗಳ ಎಂಟ್ರಿ. ಬಿಟೌನ್ ಹಲವು ಸ್ಟಾರ್ ಕಪಲ್‌ಗಳು ಕರಣ್ ಜೋಹರ್ ಬರ್ತಡೇ ಆಗಮಿಸಿರುವುದು ವಿಶೇಷವಾಗಿತ್ತು. ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಸೈಫ್ ಅಲಿ ಖಾನ್, ಕರಿನಾ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಪ್ರೀತಿ ಜಿಂಟಾ ಸೇರಿಂದತೆ ಹಲವು ಸ್ಟಾರ್ ಕಪಲ್‌ಗಳು ಕರಣ್ ಬರ್ತಡೇಯಲ್ಲಿ ಭಾಗಿಯಾಗಿದ್ದರು.

ದಕ್ಷಿಣದ ನಟ ನಟಿಯರು ಕೂಡ ಪಾರ್ಟಿಯಲ್ಲಿ ಭಾಗಿ
ಈ ಬಾರಿಯ ಕರಣ್ ಜೋಹರ್ ಬರ್ತಡೇಯಲ್ಲಿ ದಕ್ಷಿಣ ಭಾರತದ ಹಲವು ನಟ ನಟಿಯರು ಭಾಗಿಯಾಗಿದ್ದು, ವಿಶೇಷ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲೂ ಜನಪ್ರಿಯತೆ ಗಳಿಸಿರುವ ನಟ ನಟಿಯರು ಕರಣ್ ಬರ್ತಡೆಯಲ್ಲಿ ಭಾಗಿಯಾಗಿ ಪಾರ್ಟಿಯನ್ನು ಎಂಜಾಯ್ ಮಾಡಿದ್ದಾರೆ. ಪೂಜಾ ಹೆಗಡೆ, ರಶ್ಮಿಕಾ ಮಂದಣ್ಣ, ವಿಜಯ ದೇವರಕೊಂಡ, ತಮನ್ನಾ ಭಾಟಿಯಾ ಆಗಮಿಸಿ ಪಾರ್ಟಿಯನ್ನು ಮತ್ತಷ್ಟು ರಂಗೇರಿಸಿದ್ದಾರೆ.

ಕರಣ್ ಪಾರ್ಟಿಯಲ್ಲಿ ರಶ್ಮಿಕಾ ಬೋಲ್ಡ್ ಅವತಾರ
ನಿನ್ನೆ (ಮೇ 25 )ರಂದು ಕರಣ್ ಜೋಹರ್ ಪಾರ್ಟಿಯಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಬ್ಲಾಕ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದ ಎಲ್ಲರಿಗಂತಲೂ ವಿಭಿನ್ನ ಡ್ರೆಸ್‌ನಲ್ಲಿ ರಶ್ಮಿಕಾ ಮಿಂಚಿದ್ದಾರೆ. ಅಲ್ಲದೆ ಡಿಸೈನರ್ ವೇರ್ ಡ್ರೆಸ್ ಧರಿಸಿ ಕೆಲ ತಾರೆಯರು ಪೇಚಾಡಿದ್ದಾರೆ. ಆದರೂ ಕೂಡ ಬಾಲಿವುಡ್‌ನ ಅನೇಕ ಮಾಧ್ಯಮಗಳು ರಶ್ಮಿಕಾ ಮಂದಣ್ಣ ಪಾರ್ಟಿಯಲ್ಲಿ ಎಲ್ಲರಿಗಿಂತಲೂ ಅದ್ಬುತವಾಗಿ ಕಾಣಸಿಕೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ.


Click it and Unblock the Notifications










