»   » ಬಿ ಟೌನ್ ನ ಬಿಗ್ ಸ್ಟಾರ್ ಗಳನ್ನ ಹಿಂದಿಕ್ಕಿದ ಹುಲಿರಾಯ

ಬಿ ಟೌನ್ ನ ಬಿಗ್ ಸ್ಟಾರ್ ಗಳನ್ನ ಹಿಂದಿಕ್ಕಿದ ಹುಲಿರಾಯ

Posted By:
Subscribe to Filmibeat Kannada

ಈಗಿನ ದಿನಗಳಲ್ಲಿ ಸಿನಿಮಾ ಎಷ್ಟು ದಿನ ಥಿಯೇಟರ್ ನಲ್ಲಿ ಉಳಿದುಕೊಳ್ಳುತ್ತೆ ಎನ್ನುವುದಕ್ಕಿಂತಲೂ. ಚಿತ್ರ ಬಿಡುಗಡೆ ಆದ ದಿನ ಎಷ್ಟು ಗಳಿಕೆ ಮಾಡಿತ್ತು ಅನ್ನುವುದೇ ಲೆಕ್ಕ. ಅದರಲ್ಲೂ ಬಾಲಿವುಡ್ ಅಂಗಳದಲ್ಲಿ ಪ್ರತಿ ಸಿನಿಮಾಗಳ ಕಲೆಕ್ಷನ್ ಲೆಕ್ಕ ಯಾವಾಗಲೂ ಪಕ್ಕ ಇರುತ್ತೆ. ಸದ್ಯ ಬಾಲಿವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡುತ್ತಿರುವ ಸಿನಿಮಾ ಭಾಗಿ 2.

ಸತತವಾಗಿ ಎರಡು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ನಟ ಟೈಗರ್ ಶ್ರಾಫ್ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. ಬಿ ಟೌನ್ ಅಂಗಳದಲ್ಲಿ ಬಿಗ್ ಸ್ಟಾರ್ ಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಭಾಗಿ 2 ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ.

500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!

ಮೊದಲ ದಿನವೇ ಸಿನಿಮಾ ನೋಡಿದ ಪ್ರೇಕ್ಷಕರು ಖುಷಿಯಿಂದ ಹೊರ ಬಂದಿದ್ದರು ಅದರ ಪ್ರತಿಯಾಗಿಯೇ ಭಾಗಿ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಅದ್ದು ಮಾಡುತ್ತಿದೆ. ಈ ವರ್ಷದ ಬಿಡುಗಡೆಯಾದ ಎಲ್ಲಾ ಬಿಗ್ ಸ್ಟಾರ್ ಗಳ ಸಿನಿಮಾಗಿಂತಲೂ ಭಾಗಿ 2 ಚಿತ್ರದ ಕಲೆಕ್ಷನ್ ಹೆಚ್ಚಾಗಿದೆ. ಹಾಗಾದರೆ ಭಾಗಿ 2 ಸಿನಿಮಾದ ಗಳಿಕೆ ಎಷ್ಟು ? ಯಾವ ಸ್ಟಾರ್ ಗಳನ್ನ ಟೈಗರ್ ಹಿಂದಿಕ್ಕಿದ್ದಾರೆ. ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಹೊಸ ಅಧ್ಯಾಯ ಬರೆದ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಅಭಿನಯದ ಭಾಗಿ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಎರಡು ಸಿನಿಮಾಗಳ ಸೋತ ನಂತರ ಮತ್ತೆ ಟೈಗರ್ ಶ್ರಾಫ್ ಬಿಟೌನ್ ನಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಭಾಗಿ 2 ಚಿತ್ರ ಮೊದಲ ದಿನವೇ 25 ಕೋಟಿ ಬಾಚಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಠಿ ಮಾಡಿದೆ .

ಬಾಕ್ಸ್ ಆಫೀಸ್ ನಲ್ಲಿ ಟೈಗರ್ ಮೊದಲ ಸ್ಥಾನ

ಬಿ ಟೌನ್ ನಲ್ಲಿ ಬಾಕ್ಸ್ ಆಫೀಸ್ ರೆಕಾರ್ಡ್ ಗಳು ವಾರ ವಾರ ಬದಲಾಗುತ್ತಲೇ ಇರುತ್ತದೆ. ಬಾಲಿವುಡ್ ಸ್ಟಾರ್ ಗಳು ಪ್ರತಿ ನಿತ್ಯವೂ ಗೆಲುವಿಗಾಗಿ ಹೊಡೆದಾಡುತ್ತಲೇ ಇರುತ್ತಾರೆ. ಬಾರಿ ವಿವಾದ ಸೃಷ್ಠಿ ಮಾಡಿದ ಪದ್ಮಾವತ್ ಸಿನಿಮಾದ ದಾಖಲೆಯನ್ನೂ ಭಾಗಿ 2 ಚಿತ್ರ ಮುರಿದು ಹಾಕಿದೆ. ಪದ್ಮಾವತ್ ಸಿನಿಮಾ ಮೂರು ಭಾಷೆಯಲ್ಲಿ ಬಿಡುಗಡೆ ಆಗಿ ಮೊದಲ ದಿನ 24 ಕೋಟಿ ಹಣವನ್ನ ಗಳಿಸಿತ್ತು.

ಮೂರನೇ ಸ್ಥಾನದಲ್ಲಿ ಪ್ಯಾಡ್ ಮ್ಯಾನ್

ಇತ್ತೀಚಿಗಷ್ಟೆ ಬಿಡುಗಡೆ ಆಗಿ ಉತ್ತಮ ವಿಮರ್ಶೆಯನ್ನು ಪಡೆದುಕೊಂಡ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ಬಿಡುಗಡೆಯ ದಿನ 10 ಕೋಟಿ 26 ಲಕ್ಷ ಗಳಿಕೆ ಮಾಡಿತ್ತು. ಪ್ಯಾಡ್ ಮ್ಯಾನ್ ಬಾಕ್ಸ್ ಆಫೀಸ್ ಸದ್ದು ಮಾಡುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಕಂಡಿತ್ತು.

ಅಜಯ್ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ

ಟ್ರೇಲರ್ ನಿಂದಲೇ ಭಾರಿ ಕುತೂಹಲ ಮೂಡಿಸಿದ್ದ ರೈಡ್ ಸಿನಿಮಾ ಕೂಡ ಓಪನಿಂಗ್ ದಿನವೇ ಬಾರಿ ಮೊತ್ತವನ್ನ ಗಳಿಕೆ ಮಾಡಿತ್ತು. 10 ಕೋಟಿ 4 ಲಕ್ಷ ಗಳಿಕೆ ಮಾಡುವುದರ ಜೊತೆಯಲ್ಲಿ ಉತ್ತಮ ಸಿನಿಮಾ ಎಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

English summary
Baaghi2 is a record smasher ever where the film is having a blockbuster run. Baagi 2 films box office collections in Bollywood than all the films released this year. Baagi Part 2 Tiger Shroff and Disha Patani starrer movie,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X