ಹೊಡಿ ಬಡಿ ಕಡಿ; ಬಹಳ ವೈಲೆಂಟ್ ಆಗಿದೆ ಎ. ಹರ್ಷ 'ಬಾಘಿ- 4' ಟೀಸರ್

ಕನ್ನಡ ಚಿತ್ರ ನಿರ್ದೇಶಕ ಎ. ಹರ್ಷ ಸದ್ಯ ಬಾಲಿವುಡ್ ಪ್ರವೇಶಿಸಿದ್ದಾರೆ. 'ಬಾಘಿ- 4' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮುಂದಿನ ತಿಂಗಳ ಸಿನಿಮಾ ತೆರೆಗೆ ಬರಲಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕೆಲವರು 'ಅನಿಮಲ್' ಸಿನಿಮಾ ಕಾಪಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಾಜಿದ್ ನಾಡಿಯಾಡ್ವಾಲಾ 'ಬಾಘಿ- 4' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದ ಎ. ಹರ್ಷ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. ಟೈಗರ್ ಶ್ರಾಫ್ ಮತ್ತೊಮ್ಮೆ ಅಬ್ಬರಿಸಿದ್ದು ಸಂಜಯ್ ದತ್ ಸಾಥ್ ಸಿಕ್ಕಿದೆ. ಟೀಸರ್ ನೋಡಿದರೆ ಇದೊಂದು ರಕ್ತಸಿಕ್ತ ಅಧ್ಯಾಯದ ಕಥೆ ಎನ್ನುವುದು ಅರ್ಥವಾಗುತ್ತಿದೆ.

Baaghi-4 Teaser Drops A Harsha s Bollywood Debut Sparks Animal amp amp Marco Comparisons

ಟೀಸರ್ ತುಂಬಾ ಬರೀ ಹೊಡಿ ಬಡಿ ಕಡಿ ಬಿಟ್ಟರೆ ಬೇರೇನು ಇಲ್ಲ. ಟೈಗರ್ ಶ್ರಾಫ್ ಜೊತೆಗೆ ಸಂಜಯ್ ದತ್, ಸೋನಂ ಬಾಜ್ವಾ, ಹರ್ನಾಜ್ ಸಂಧು ಹೀಗೆ ಎಲ್ಲರೂ ಪೈಪೋಟಿಗೆ ಬಿದ್ದು ಮಚ್ಚಿನಿಂದ ಕೊಚ್ಚುತ್ತಾ ಹೋಗುತ್ತಾರೆ. ಅನಿಮಲ್ ಮಾತ್ರವಲ್ಲ ಮಲಯಾಳಂನಲ್ಲಿ ಬಂದಿದ್ದ 'ಮಾರ್ಕೊ' ಚಿತ್ರವನ್ನು ಅಲ್ಲಲ್ಲಿ ನೆನಪಿಸುವಂತಿದೆ. ಬಾಘಿ ಸರಣಿಯಲ್ಲಿ ರೋನಿ ಆಗಿ ಟೈಗರ್ ಶ್ರಾಫ್ ನಟಿಸುತ್ತಾ ಬರ್ತಿದ್ದಾರೆ. ಇಲ್ಲೂ ಅದು ಮುಂದುವರೆದಿದೆ. ವಿಲನ್ ಆಗಿ ಸಂಜಯ್ ದತ್ ಅಬ್ಬರಿಸಿದ್ದಾರೆ.

"ಪ್ರತಿಯೊಬ್ಬ ಪ್ರೇಮಿ ಕೂಡ ಒಬ್ಬ ವಿಲನ್" ಎನ್ನುವ ಡೈಲಾಗ್ ಜೊತೆಗೆ ಟೀಸರ್ ಮುಕ್ತಾಯವಾಗುತ್ತದೆ. ರೋನಿ ಈ ಬಾರಿ ತಾನೇ ಹೀರೊ, ತಾನೇ ವಿಲನ್ ಆಗುವ ಕಥೆ ಇಲ್ಲಿದೆ. ಸಂಜಯ್ ದತ್ ಉದ್ದ ಕೂದಲು ಬಿಟ್ಟು ಅಟ್ಟಹಾಸ ಮೆರೆದಿದ್ದಾರೆ. ಈ ಹಿಂದೆ ಶಿವಣ್ಣ ನಟಿಸಿದ 'ವೇದ' ಚಿತ್ರದಲ್ಲಿ ಕೂಡ ನಟಿಯರ ಕೈಗೆ ಹರಿತವಾದ ಆಯುಧಗಳನ್ನು ಕೊಟ್ಟು ಹರ್ಷ ರಕ್ತಚರಿತ್ರೆ ಬರೆದಿದ್ದರು. ಇಲ್ಲಿ ಕೂಡ ಅದೇ ಪ್ರಯತ್ನ ಮಾಡಿದ್ದಾರೆ. 'ವೇದ' ಸಿನಿಮಾ ಬಳಿಕ ತೆಲುಗಿನ 'ಭೀಮ' ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕರು ಸಕ್ಸಸ್ ಕಂಡಿದ್ದರು. ಆ ಸಿನಿಮಾ ನೋಡಿ ಸಾಜಿದ್ 'ಬಾಘಿ- 4' ಚಿತ್ರದ ನಿರ್ದೇಶನದ ಅವಕಾಶ ಕೊಟ್ಟಿದ್ದರು.

Baaghi-4 Teaser Drops A Harsha s Bollywood Debut Sparks Animal amp amp Marco Comparisons

ಕಳೆದ ಒಂದೂವರೆ ವರ್ಷದಿಂದ ನಿರ್ದೇಶಕ ಎ. ಹರ್ಷ ಮುಂಬೈನಲ್ಲೇ ಬೀಡು ಬಿಟ್ಟಿದ್ದಾರೆ. 'ಬಾಘೀ- 4' ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಟೈಗರ್ ಶ್ರಾಫ್ ಮತ್ತೊಂದು ತಮ್ಮ ಕಟ್ಟುಮಸ್ತಾದ ಬಾಡಿ ಪ್ರದರ್ಶಿಸುತ್ತಾ ಆಕ್ಷನ್ ಸನ್ನಿವೇಶಗಳಲ್ಲಿ ಹುಬ್ಬೇರಿಸಿದ್ದಾರೆ.

ಸಂಜಯ್ ದತ್ ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣದಲ್ಲಿ 'ರಾಜಾ ಸಾಬ್', 'ಕೆಡಿ' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ 'ಬಾಘೀ-4' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸೆಪ್ಟೆಂಬರ್ 5ರಂದು ಈ ಸಿನಿಮಾ ತೆರೆಗೆ ಬರಲಿದೆ. 'ಅನಿಮಲ್' ಹಾಗೂ 'ಮಾರ್ಕೊ' ಕಾಪಿ ಎನ್ನುವವರ ಲೆಕ್ಕಾಚಾರ ತಲೆ ಕೆಳಗಾಗಿಸಿ ಸಿನಿಮಾ ಗೆಲ್ಲುತ್ತಾ ಕಾದು ನೋಡಬೇಕಿದೆ.

ಟೀಸರ್‌ನಲ್ಲಿರುವ ಕ್ರೌರ್ಯ ನೋಡುತ್ತಿದ್ದರೆ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಗುವುದು ಖಾಯಂ ಎನ್ನುವಂತಾಗಿದೆ. ಆದರೂ ಕೆಲ ಸನ್ನಿವೇಶಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕುವ ಸುಳಿವು ಸಿಗುತ್ತಿದೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ರಕ್ತಸಿಕ್ತ ಸನ್ನಿವೇಶಗಳು ಕಣ್ಣಿಗೆ ರಾಚುತ್ತಿವೆ.

More from Filmibeat

English summary
The teaser of A. Harsha’s Bollywood debut ‘Baaghi-4’ starring Tiger Shroff and Sanjay Dutt is out, igniting buzz, brutal action hype, and debates over similarities with ‘Animal’ and ‘Marco’.
Read more about: a harsha tiger shroff
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X