ಇರ್ಫಾನ್ ಖಾನ್ ಮಗನ ಕಣ್ಣೀರಿಗೆ ಬೆಚ್ಚಿ ಬಿದ್ದ ಬಾಲಿವುಡ್, ಹತ್ತಾರು ಪ್ರಶ್ನೆ, ದುಗುಡ-ದುಮ್ಮಾನ..!

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ .. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ. ಹೀಗಾಗಿಯೇ ಬಾಲಿವುಡ್‌ನ ಈ ಸ್ವಜನ ಪಕ್ಷಪಾತಕ್ಕೆ ಅನೇಕರು ಆಗಾಗ ಕೆರಳುತ್ತಾರೆ.

ತಮ್ಮ ತಂದೆ ಅಥವಾ ತಾಯಿಯ ನಾಮಬಲದಿಂದ ಇಲ್ಲಿ ಅನೇಕರು ಮೆರೆಯುತ್ತಿದ್ದಾರೆ, ಆದರೆ.. ಅವರಿಗೆ ಕಲೆಯ ಗಂಧ ಗಾಳಿ ಕೂಡ ಗೊತ್ತಿಲ್ಲ ಎಂದು ಸೋಶಿಯಲ್ ಮೀಡಿಯಾ ಮೂಲಕ ಕೆಂಡ ಕಾರುತ್ತಿರುತ್ತಾರೆ. ಹೀಗಿರುವಾಗ ಬಾಲಿವುಡ್ ಕಂಡ ಅತ್ಯಂತ ಪ್ರತಿಭಾವಂತ ಕಲಾವಿದ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್ ಬಾಲಿವುಡ್‌ಗೆ ಹಿಡಿ ಶಾಪ ಹಾಕಿದ್ದಾರೆ. ಅನೇಕರ ಹೆಸರನ್ನೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

babil-khan-breaks-down-over-rude-star-kids-shuts-down-instagram-team-issues-statement

ಹೌದು, ಬಾಬಿಲ್ ಖಾನ್ .. ಇರ್ಫಾನ್ ಖಾನ್ ಅವರ ಮಗ. ತಂದೆಯ ಹೆಜ್ಜೆಯ ಜಾಡನ್ನು ಹಿಡಿದು ಬಾಲಿವುಡ್‌ಗೆ ಬಂದ ಬಾಬಿಲ್ ಖಾನ್ ಇಲ್ಲಿಯವರೆಗೆ ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿರುವ ಸ್ಟಾರ್‌ ಕಿಡ್‌ಗಳಿಗಿಂತ ಅಭಿನಯದ ವಿಚಾರದಲ್ಲಿ ನಾನೆಷ್ಟೋ ವಾಸಿ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ.

ಇಂಥಾ ಬಾಬಿಲ್ ಖಾನ್‌ ಇದ್ದಕ್ಕಿದ್ದಂತೆಯೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಹಾಕಿಕೊಂಡಿದ್ದರು. ಕೆಲ ಸ್ಟಾರ್‌ಗಳ ಹೆಸರನ್ನೇಳಿ ಬಾಲಿವುಡ್‌ ನ ಅನೇಕರದ್ದು ಮುಖವಾಡದ ಬದುಕು ನಕಲಿ ಉದ್ಯಮ ಎಂದು ಹೇಳಿದ್ದರು. ಬಾಲಿವುಡ್‌ ಚೆನ್ನಾಗಿರಬೇಕೆಂದು ಬಯಸುವರು ಬೆರಳಣಿಕೆಯ ಜನ ಮಾತ್ರ ನಾನು ನಿಮಗೆ ತುಂಬಾ ಹೇಳಬೇಕು ತೋರಿಸಬೇಕೆಂದು ಕಣ್ಣೀರು ಹಾಕಿದ್ದರು.

ಮುಂದುವರೆದು ಚಂಕಿ ಪಾಂಡೆಯ ಮಗಳು ಅನನ್ಯಾ ಪಾಂಡೆ, ಸಂಜಯ್ ಕಪೂರ್ ಮಗಳು ಶನಾಯಾ ಕಪೂರ್, ಬೋನಿ ಕಪೂರ್ ಮಗ ಅರ್ಜುನ್ ಕಪೂರ್ ಹೆಸರನ್ನು ತೆಗೆದುಕೊಂಡ ಬಾಬಿಲ್ ಖಾನ್ ಇವರೆಲ್ಲ ತುಂಬಾ ಒರಟು ವ್ಯಕ್ತಿಗಳು ಎಂದು ಹೇಳಿದ್ದರು. ಗಾಯಕ ಅರ್ಜಿತ್ ಸಿಂಗ್, ಈಗಷ್ಟೇ ಬೆಳೆಯುತ್ತಿರುವ ಸಿದ್ದಾಂತ್ ಚತುರ್ವೆದಿ, ಆದರ್ಶ್ ಗೌರವ್ ಮತ್ತು ರಾಘವ್ ಜುಯಲ್ ಹೆಸರನ್ನು ಕೂಡ ತೆಗೆದುಕೊಂಡಿದ್ದರು.

ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ತಮ್ಮ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿದ ಬಾಬಿಲ್ ಖಾನ್ ವಿಡಿಯೋವನ್ನು ಡಿಲೀಟ್ ಮಾಡಿದರು. ಇಷ್ಟೇ ಅಲ್ಲ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ನಿಷ್ಕ್ರಿಯಗೊಳಿಸಿದರು. ಬಾಬಿಲ್ ಖಾನ್ ಅವರ ಈ ನಡೆ ಮತ್ತು ನುಡಿಗಳಿಗೆ ಬಾಲಿವುಡ್‌ ಈಗ ಬೆಚ್ಚಿ ಬಿದ್ದಿದೆ. ಬಾಬಿಲ್ ಖಾನ್ ವಿಡಿಯೋ ಮಾಡಿದ್ದೇಕೆ ? ಅವರು ಹೇಳಲು ಹೊರಟಿದ್ದಾದರೂ ಏನು ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.

ಇನ್ನು ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ ಬಾಬಿಲ್ ಖಾನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರಾ ? ಬಾಲಿವುಡ್‌ನಲ್ಲಿನ ಗ್ರೂಪಿಸಂ ಕಂಡು ಬೇಸರಗೊಂಡಿದ್ದಾರಾ ? ಎನ್ನುವ ಪ್ರಶ್ನೆ ಕೂಡ ಎದ್ದಿದ್ದು ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ ಬಾಬಿಲ್ ಖಾನ್ ತಪ್ಪು ನಿರ್ಧಾರಕ್ಕೆ ಬರಬಹುದು ಎನ್ನುವ ಆತಂಕವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಬಾಬಿಲ್ ಖಾನ್ ಅವರ ಮಾನಸಿಕ ಆರೋಗ್ಯದ ಕುರಿತು ಬಾಲಿವುಡ್‌ ಗಮನ ಕೊಡಬೇಕೆನ್ನುವ ಮಾತುಗಳನ್ನು ಕೂಡ ಹೇಳುತ್ತಿದ್ದಾರೆ.

ಇನ್ನು ವಿಡಿಯೋ ವೈರಲ್ ಆದ ಬೆನ್ನಲ್ಲೇ ಅನನ್ಯಾ ಪಾಂಡೆ ಪ್ರತಿಕ್ರಿಯೆ ನೀಡಿದ್ದು ನಾವು ಸಿಗೋಣ ಶೀಘ್ರದಲ್ಲಿಯೇ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಇನ್ನು. ಬಾಬಿಲ್ ಖಾನ್ ತಂಡ ಕೂಡ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು ಜನರಿಂದ ಬಾಬಿಲ್ ಖಾನ್ ಅವರಿಗೆ ಪ್ರೀತಿ ಸಿಕ್ಕಿದೆ, ಎಲ್ಲರಂತೆ ಅವರಿಗೂ ಕೂಡ ಕಷ್ಟಗಳಿರುತ್ತವೆ, ಅಂತಹ ದಿನಗಳಲ್ಲಿ ಇದು ಕೂಡ ಒಂದು, ಆದಷ್ಟು ಬೇಗ ಅವರು ನಿಮ್ಮೆದುರು ಬರುತ್ತಾರೆ, ಅವರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದೆ. ಅವರ ವಿಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುವ ಸ್ಪಷ್ಟೀಕರಣವನ್ನು ನೀಡುವ ಪ್ರಯತ್ನವನ್ನು ಕೂಡ ಮಾಡಿದೆ.

ಬಾಬಿಲ್ ಖಾನ್ ತಂಡದ ಈ ಹೇಳಿಕೆಯನ್ನು ರಾಘವ್ ಜುಯೆಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಾಬಿಲ್ ಖಾನ್ ಅವರ ಆರೋಗ್ಯದ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದು ಸ್ವಜನಪಕ್ಷಪಾತದ ಚರ್ಚೆ ಈ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

His PR is gonna have a hard time tomorrow
byu/Anxious_Scratch2449 inBollyBlindsNGossip

More from Filmibeat

English summary
Babil Khan, emerging actor and son of cinematic legend Irrfan Khan, has deactivated his Instagram account in the wake of an emotional video that quickly went viral. In the video, since removed, Babil tearfully addressed the hostility and bullying he has experienced within the Bollywood circle. His team has now issued an official statement in response to growing concern.
Read more about: irrfan khan viral video bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X