ದೀಪಿಕಾಗೆ ಹುಟ್ಟೋದು ಗಂಡು ಮಗುನಾ, ಹೆಣ್ಣು ಮಗುನಾ? ಖ್ಯಾತ ಜ್ಯೋತಿಷಿ ಭವಿಷ್ಯ ಏನು?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 'ಕಲ್ಕಿ 2898 AD' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ಪತಿ ಜೊತೆಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ್ದರು. ಚಿತ್ರದಲ್ಲಿ ಸಹ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಗರ್ಭಿಣಿಯಾಗಿರುವ ಡಿಪ್ಪಿ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಫೆಬ್ರವರಿಯಲ್ಲಿ ದೀಪಿಕಾ ತಾವು ಗರ್ಭಿಣಿ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದರು. 7 ತಿಂಗಳ ಗರ್ಭಿಣಿಯಾಗಿರುವ ಡಿಪ್ಪಿ ಸೆಪ್ಟೆಂಬರ್‌ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಸಂಗೀತ್ ಕಾರ್ಯಕ್ರಮಕ್ಕೂ ದೀಪಿಕಾ ಹಾಜರಾಗಿದ್ದರು. ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ದೀಪಿಕಾ ಪಡುಕೋಣೆ ಹೆರಿಗೆ ಸಮಯ ಹತ್ತಿರವಾಗುತ್ತಿದ್ದಂತೆ ಆಕೆಗೆ ಹುಟ್ಟೋದು ಗಂಡು ಮಗುನಾ? ಹೆಣ್ಣು ಮಗುನಾ? ಎಂದು ಬಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಈ ಹಿಂದೆ ರಣ್‌ವೀರ್ ಸಿಂಗ್ ನನಗೆ ಹೆಣ್ಣು ಮಗು ಬೇಕು, ಈಗಾಗಲೇ ಮಗುವಿಗೆ ಹೆಸರನ್ನು ಕೂಡ ಹುಡುಕಿ ಇಟ್ಟಿದ್ದೀನಿ ಅದನ್ನೂ ಈಗಲೇ ಹೇಳಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್ ಆಗುತ್ತಿದೆ.
6 ವರ್ಷಗಳ ಕಾಲ ಪ್ರೀತಿಸಿ ರಣ್‌ವೀರ್ ಹಾಗೂ ದೀಪಿಕಾ ಮದುವೆ ಆಗಿದ್ದರು. 2018ರಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆದಿತ್ತು. ಬೆಂಗಳೂರಿನಲ್ಲಿ ಕೂಡ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಬ್ಬರು ಮದುವೆ ಆಗುವ ಮುನ್ನ ಇಬ್ಬರ ಹೆಸರುಗಳು ಬೇರೆ ಬೇರೆಯವರ ಜೊತೆ ತಳುಕು ಹಾಕಿಕೊಂಡಿದ್ದು ಗುಟ್ಟಾಗಿ ಏನು ಉಳಿದಿರಲಿಲ್ಲ.
ಖ್ಯಾತ ಬಾಲಿವುಡ್ ಸೆಲೆಬ್ರೆಟಿ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಇದೀಗ ದೀಪಿಕಾಗೆ ಹುಟ್ಟುವ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. koimoi. com ವರದಿ ಪ್ರಕಾರ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಪಂಡಿತ್ ಜಗನ್ನಾಥ ಗುರೂಜಿ ಹೇಳಿದ್ದಾರಂತೆ. ಈ ಬಗ್ಗೆ ಹಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

ಪ್ರಭಾವಿ ದಂಪತಿಗಳ ಜ್ಯೋತಿಷ್ಯ ಲೆಕ್ಕಾಚಾರಗಳು ಹಾಗೂ ಮುಖಚರ್ಯೆ ಹೆತ್ತವರು ರಾಜಕುಮಾರನಾಗುವಂತಹ ಗಂಡು ಮಗುವನ್ನು ಹೊಂದುವ ಸಾಧ್ಯತೆಯಿದೆ ಎಂದು ಸೂಚಿಸುತ್ತಿದೆ ಎಂದು ಗುರೂಜಿ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಮತ್ತು ಜನಪ್ರಿಯತೆ ಸೆಲೆಬ್ರಿಟಿಗಳಾಗಿರುವುದರಿಂದ, ಹೊಸ ಕುಟುಂಬದ ಸದಸ್ಯರ ಆಗಮನದ ಬಗ್ಗೆ ಜನರು ಉತ್ಸಾಹದಿಂದಿರುವುದು ಸಹಜ. ಶೀಘ್ರದಲ್ಲೇ ದಂಪತಿ ಮನೆಗೆ ಹೊಸ ಸದಸ್ಯನನ್ನು ಸ್ವಾಗತಿಸಲಿದ್ದಾರೆ.
ಅಂದಹಾಗೆ ಪಂಡಿತ್ ಜಗನ್ನಾಥ ಗುರೂಜಿ ಸೆಲೆಬ್ರೆಟಿಗಳ ಭವಿಷ್ಯ ನುಡಿದು ಜನಪ್ರಿಯತೆ ಗಳಿಸಿದ್ದಾರೆ. ದೀಪಿಕಾ 2024ರಲ್ಲಿ ಸಿಹಿಸುದ್ದಿ ಕೊಡುತ್ತಾರೆ ಎಂದು ಈ ಹಿಂದೆ ಜಗನ್ನಾಥ ಗುರೂಜಿ ಹೇಳಿದ್ದರು. ಕನ್ನಡದ 'ಐಶ್ವರ್ಯ' ಚಿತ್ರದಲ್ಲಿ ಉಪೇಂದ್ರ ಜೋಡಿಯಾಗಿ ನಟಿಸಿದ್ದ ಡಿಪ್ಪಿ ಬಳಿಕ ಬಾಲಿವುಡ್ ಪ್ರವೇಶಿಸಿದ್ದರು. 'ಓಂ ಶಾಂತಿ ಓಂ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸಿದರು.
'ಯೇ ಜವಾನಿ ಹೇ ದಿವಾನಿ', 'ಚೆನ್ನೈ ಎಕ್ಸ್‌ಪ್ರೆಸ್', 'ಕಾಕ್‌ಟೇಲ್', 'ಹ್ಯಾಪಿ ನ್ಯೂ ಇಯರ್', 'ರಾಮ್‌ಲೀಲಾ', 'ಬಾಜಿರಾವ್ ಮಸ್ತಾನಿ' ಹಾಗೂ 'ಪದ್ಮಾವತ್' ರೀತಿಯ ಹಿಟ್ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿ ಗೆದ್ದಿದ್ದಾರೆ. ಬಾಲಿವುಡ್ನ ಬಹುಬೇಡಿಕೆ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಮದುವೆ ಬಳಿಕ ಕೂಡ ಚಿತ್ರರಂಗದಲ್ಲಿ ಡಿಪ್ಪಿ ಸಖತ್ ಬ್ಯುಸಿಯಾಗಿದ್ದಾರೆ.


Click it and Unblock the Notifications











