ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಗೆ ಹೆಣ್ಣು ಮಗು

ಸದ್ಯಕ್ಕೆ ಅಕ್ಷಯ್ ಕುಮಾರ್ ಅವರು ಬಾಲಿವುಡ್ ನ 'ಓ ಮೈ ಗಾಡ್' ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ನಲ್ಲಿದ್ದ ಅವರ ಕಿವಿಗೆ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರೀಕರಣ ನಿಲ್ಲಿಸಿ ಸೋಮವಾರ ಸಂಜೆಯೇ ಜೈಪುರದ ತಮ್ಮ ನಿವಾಸಕ್ಕೆ ಆಗಮಿಸಿದರು.
ಸೋಮವಾರ ಸಂಜೆಯಿಂದಲೇ ಟ್ವಿಂಕಲ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಟ್ವಿಂಕಲ್ ಖನ್ನಾ ಅವರ ತಂದೆ ರಾಜೇಶ್ ಖನ್ನಾ ನಿಧನಾನಂತರ ಅಕ್ಷಯ್ ಕುಟುಂಬಕ್ಕೆ ಹೊಸ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಆಗಮನವಾಗಿದೆ.
ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಟ್ವಿಂಕಲ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಹಸ ಹೆರಿಗೆ ಇದಾಗಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಕ್ಷಯ್ ಮತ್ತು ಟ್ವಿಂಕಲ್ ಮದುವೆ ನವೆಂಬರ್ 2001ರಲ್ಲಿ ನಡೆದಿತ್ತು. ಮದುವೆ ಬಳಿಕ ಟ್ವಿಂಕಲ್ ನಟನೆಗೆ ಗುಡ್‌ಬೈ ಹೇಳಿದ್ದರು. ಇಷ್ಟು ದಿನ ಅವರು ಇಂಟೀರಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











