ಅಮಿತಾಬ್ ಬಚ್ಚನ್ ಆರೋಗ್ಯ ಸ್ಥಿತಿ ಹೇಗಿದೆ? ವೈದ್ಯರು ಹೇಳಿದ್ದೇನು?

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಗೆ ಕೊರೊನಾ ಸೋಂಕಾಗಿದೆ. ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಇರುವುದು ಮೊನ್ನೆ ರಾತ್ರಿ ದೃಢವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Recommended Video

ನಾನು ಶಿವಣ್ಣನ ಫಾರೆವರ್ ಫ್ಯಾನ್ ಎಂದ ಮಾನ್ವಿತಾ | Manvitha Kamath | Shiva Rajkumar | Filmibeat Kannada

ಅಮಿತಾಬ್ ಬಚ್ಚನ್ ಜೊತೆಗೆ ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಮೊಮ್ಮಗಳು ಆರಾಧ್ಯಾಗೂ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಎಲ್ಲರನ್ನೂ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮಿತಾಬ್ ಬಚ್ಚನ್ ಆರೋಗ್ಯದ ಬಗ್ಗೆ ಸಿನಿಮಾ ನಟರು, ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದು, ಲಿವರ್ ಸಮಸ್ಯೆಯಿಂದ ಸಹ ಬಳಲುತ್ತಿರುವ ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ತೀವ್ರ ಆತಂಕವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಕೆಲ ದಿನದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು

ಕೆಲ ದಿನದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು

ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಇಂದು ಹೇಳಿಕೆ ನೀಡಿದ್ದು, ಅಮಿತಾಬ್ ಬಚ್ಚನ್ ಅವರು ಕೆಲ ದಿನದಿಂದ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದರು ಹಾಗಾಗಿ ಅವರ ಪರೀಕ್ಷೆ ನಡೆಸಲಾಗಿ ಕೊರೊನಾ ಸೋಂಕಿರುವುದು ದೃಢವಾಗಿದೆ ಎಂದು ಹೇಳಿದ್ದಾರೆ.

ಅಮಿತಾಬ್ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿಲ್ಲ

ಅಮಿತಾಬ್ ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿಲ್ಲ

ಅಮಿತಾಬ್ ಅವರನ್ನು ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಇಡಲಾಗಿದೆ ಎಂಬ ಸುದ್ದಿಯನ್ನು ಸುಳ್ಳೆಂದಿರುವ ವೈದ್ಯರು, ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಮಿತಾಬ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಇಂಡಿಯಾ ಟುಡೆ ಜೊತೆಗೆ ಮಾತನಾಡಿದ್ದಾರೆ.

ಅಮಿತಾಬ್ ಅವರೇ ಆರೋಗ್ಯದ ಮಾಹಿತಿ ನೀಡುತ್ತಾರೆ

ಅಮಿತಾಬ್ ಅವರೇ ಆರೋಗ್ಯದ ಮಾಹಿತಿ ನೀಡುತ್ತಾರೆ

ಆಸ್ಪತ್ರೆಯು ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿಲ್ಲ ಆದರೆ ಅಮಿತಾಬ್ ಬಚ್ಚನ್ ಅವರೇ ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಕೋಟ್ಯಂತರ ಅಭಿಮಾನಿಗಳಿಂದ ಪ್ರಾರ್ಥನೆ

ಕೋಟ್ಯಂತರ ಅಭಿಮಾನಿಗಳಿಂದ ಪ್ರಾರ್ಥನೆ

ದೇಶದಾದ್ಯಂತ ಅಭಿಮಾನಿಗಳು ಅಮಿತಾಬ್ ಶೀಘ್ರ ಗುಣಮುಖವಾಗಲಿ ಎಂದು ಹಾರೈಸುತ್ತಿದ್ದಾರೆ. ಅಮಿತಾಬ್ ಅವರು ಎಲ್ಲಾ ಸಿನಿಮಾ ಉದ್ಯಮಗಳಲ್ಲೂ ಆಪ್ತ ಗೆಳೆಯರು, ಅಭಿಮಾನಿಗಳನ್ನು ಹೊಂದಿದ್ದು ಎಲ್ಲರೂ ಅಮಿತಾಬ್ ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ.

More from Filmibeat

English summary
Nanavathi hospital doctor said Amitabh Bachchan recovering well. He is not in ventilator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X