»   » ಭವಿಷ್ಯದ ಸೂಪರ್ ಜೋಡಿಯಂತೆ ಈ ಮುದ್ದು ಕಂದಮ್ಮಗಳು

ಭವಿಷ್ಯದ ಸೂಪರ್ ಜೋಡಿಯಂತೆ ಈ ಮುದ್ದು ಕಂದಮ್ಮಗಳು

Posted By:
Subscribe to Filmibeat Kannada

ಬಚ್ಚನ್ ಫ್ಯಾಮಿಲಿಯ ಮೊಮ್ಮಗಳು ಆರಾಧ್ಯ ಮತ್ತು ನಟ ಶಾರುಖ್ ಖಾನ್ ಅವರ ಮಗ ಅಬ್ರಾಮ್ ಅವರದು ಭವಿಷ್ಯದಲ್ಲಿ ತೆರೆಯ ಮೇಲೆ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕೌಟ್ ಆಗುತ್ತೆ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು 'ದಿಲ್ವಾಲೆ' ನಟ ಶಾರುಖ್ ಖಾನ್ ಅವರು ಹೇಳಿಕೊಂಡಿದ್ದಾರೆ.

ಜೊತೆಗೆ ಈ ಇಬ್ಬರು ಸ್ಟಾರ್ ನಟರು ಈಗಲೇ ಪುಟ್ಟ ಮಕ್ಕಳ ಡ್ಯುಯೆಟ್ ಹಾಡನ್ನು ಊಹಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಮುದ್ದು ಮಕ್ಕಳ ವಯಸ್ಸು ಮಾತ್ರ ಕೂಡಿಸಿ, ಕಳೆದು, ಗುಣಿಸಿ ಭಾಗಿಸಿದ್ರೂ 8 ವರ್ಷ ಆಗಲ್ಲ. ಆಗಲೇ ಈ ಸ್ಟಾರ್ ನಟರು ಭವಿಷ್ಯತ್ ಬಗ್ಗೆ ಚಿಂತಿಸುತ್ತಿದ್ದಾರೆ.[ದಯವಿಟ್ಟು ನನ್ನ ಸಿನಿಮಾ ನೋಡಿ, ನಾನು ತಪ್ಪು ಮಾಡಿಲ್ಲ: ಶಾರುಖ್]

Bachchan hopes Aaradhya and Abram make good onscreen pair

ಹೌದು ಇತ್ತೀಚೆಗಷ್ಟೇ ಭವಿಷ್ಯದಲ್ಲಿ ಬಾಲಿವುಡ್ ನ ಹಿಟ್ ಜೋಡಿ ಯಾರು ಎಂದು ಕೇಳಿದ್ದಕ್ಕೆ ಕಿಂಗ್ ಖಾನ್ ಶಾರುಖ್ ಅವರು ನನ್ನ ಮಗ ಅಬ್ರಾಮ್ ಮತ್ತು ಐಶ್ ಮಗಳು ಆರಾಧ್ಯ ಬಚ್ಚನ್ ಎಂದು ಸ್ವತಃ ತಾವೇ ಹೇಳಿಕೊಂಡಿದ್ದರು.

'ಡಿ.ಡಿ.ಎಲ್.ಜೆ'ಯಲ್ಲಿ ತಮ್ಮದು ಕಾಜೋಲ್ ಅವರದು ಜೋಡಿ ಹಿಟ್ ಆದಂತೆ ಅಬ್ರಾಮ್ ಮತ್ತು ಆರಾಧ್ಯ ಬಚ್ಚನ್ ಭವಿಷ್ಯದಲ್ಲಿ ಮೂಡಿಬರುತ್ತಾರೆ ಎಂದು ಶಾರುಖ್ ಹೇಳಿದ್ದರು.[ಅಪಸ್ವರಗಳಿಲ್ಲದ ಐಶೂ ಅನುರೂಪ ದಾಂಪತ್ಯಕ್ಕೆ 8 ವರ್ಷ]

Bachchan hopes Aaradhya and Abram make good onscreen pair

ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ಬಿಗ್ ಬಿ ಅಮಿತಾಭ್ ಬಚ್ಚನ್. ಶಾರುಖ್ ಖಾನ್ ಅವರು ನಿಜವಾಗಿಯೂ ಸರಿಯಾದುದ್ದನ್ನೇ ಮಾತನಾಡಿದ್ದಾರೆ. ಅವರ ಬಾಯಿಗೆ ಸಿಹಿ ಹಾಕಬೇಕು ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಾವೂ ಮಕ್ಕಳ ಜೋಡಿಯ ಬಗ್ಗೆ 'ವಜೀರ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ನುಡಿದಿದ್ದಾರೆ.

ಅಂತೂ ಇಂತೂ ಈ ಮೂಲಕ 'ಅಬ್ರಾಮ್-ಆರಾಧ್ಯ ಬಚ್ಚನ್' ಕಾಂಬಿನೇಷನ್ ಗೆ ಈಗಲೇ ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ. ಅಂದಹಾಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಗಳ ಮಗಳು ಆರಾಧ್ಯಳಿಗೆ ಈಗ 4 ವರ್ಷವಾದರೆ, ಶಾರುಖ್ ಮಗ ಅಬ್ರಾಮ್ ಗೆ 2 ವರ್ಷ ವಯಸ್ಸು.

English summary
Hindi Actor Big Be Amitabh Bachchan hopes his grand daughter Aaradhya and King Khan Sharukh Khan Son Abram was make a good onscreenn pair in future.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada