'ಬಚ್ಪನ್ ಕಾ ಪ್ಯಾರ್‌' ಖ್ಯಾತಿಯ ಸಹದೇವ್‌ಗೆ ಅಪಘಾತ!

'ಬಚ್ಪನ್‌ ಕಾ ಪ್ಯಾರ್‌' ಅಂತ ಹಾಡಿ ಸಹದೇವ್​ ದಿರ್ಡೋ ದೇಶದಲ್ಲೇ ಮನೆ ಮಾತಾಗಿದ್ದ. ಈತನ ಹಾಡಿಗೆ ದೊಡ್ಡವರು, ಚಿಕ್ಕವರು ಎಲ್ಲರೂ ಫಿದಾ ಆಗಿದ್ದರು. ತನ್ನ ಪ್ರತಿಭೆಯಿಂದ ಈ ಪೋರ ಬಾಲಿವುಡ್‌ ರ್ಯಾಪ್ ಹಾಡಿನಲ್ಲೂ ಮಿಂಚಿದ್ದ. ಈಗ ಸಹದೇವ್‌ ಅಪಘಾತಕ್ಕೀಡಗಿದ್ದಾನೆ.

ಸಹದೇವ್​ ದಿರ್ಡೋಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಛತ್ತೀಸ್​ಘಡದ 10 ವರ್ಷದ ಬಾಲಕ ಸಹದೇವ್​ ತಂದೆಯೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಹದೇವ್​ ಬೈಕ್​ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆಸ್ಪತ್ರೆಯಲ್ಲಿ ಸಹದೇವ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಕುರಿತು ಬಾಲಿವುಡ್​ ರ್ಯಾಪ್​ ಸಿಂಗರ್​ ಬಾದ್​ ಶಾ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಬೈಕ್​ನಿಂದ ಬಿದ್ದ ಸಹದೇವ್​ ತಲೆಗೆ ಬಲವಾಗಿ ಏಟು ಬಿದ್ದಿದೆ ಎನ್ನಲಾಗಿದೆ. ಸಹದೇವ್​ ಅವರನ್ನು ಜಗದಲ್ಪುರ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸಹದೇವ್​ ಅವರ ಮೇಲೆ ವೈದ್ಯರು ನಿಗಾ ವಹಿಸಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಕೂಡ ಆಸ್ಪತ್ರೆಗೆ ತೆರಳಿ ಸಹದೇವ್​ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಸಹದೇವ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದಾಗಿ ಗೊತ್ತಾಗಿದೆ.

ಟ್ವೀಟ್ ಮಾಡಿ ಸಹದೇವ್ ಸ್ಥಿತಿ ಬಗ್ಗೆ ತಿಳಿಸಿದ ಬಾದ್ ಶಾ!

ಟ್ವೀಟ್ ಮಾಡುವ​ ಮೂಲಕ ಅಭಿಮಾನಿಗಳಿಗೆ ಸಹದೇವ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಬಾದ್​ ಶಾ. "ಸಹದೇವ್​ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತೇನೆ. ನಿಮ್ಮೆಲ್ಲರ ಪ್ರಾರ್ಥನೆಯೂ ಬೇಕು" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬಾದ್‌ ಶಾ ಈ ರೀತಿ ಟ್ವೀಟ್‌ ಮಾಡುತ್ತಲೇ ಸಾಕಷ್ಟು ಮಂದಿ ಸಹದೇವ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಕಮೆಂಟ್ ಮಾಡಿದ್ದಾರೆ.

ಛತ್ತೀಸ್‌ಘಡದ ಮುಖ್ಯ ಮಂತ್ರಿಯಿಂದಲೇ ಮುತುವರ್ಜಿ!

ಇನ್ನು ಸಹದೇವ್‌ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು, ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್ ಬಗ್ಹೇಲ್ ಅವರು ಮುತುವರ್ಜಿ ವಹಿಸಿದ್ದಾರೆ. ಸಹದೇವ್‌ಗೆ ಉತ್ತಮ ಚಿಕಿತ್ಸೆ ನೀಡಲು ಆದೇಶ ಹೊರಡಿಸಿದ್ದಾರೆ. ಈ ಹಿಂದೆಯೂ ಈ ಬಾಲಕನ ಪ್ರತಿಭೆ ಮೆಚ್ಚಿ ಆತನಿಗೆ, ಸರ್ಕಾರದ ವತಿಯಿಂದ ಸನ್ಮಾನ ಮಾಡಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಗೂ ಸರ್ಕಾರ ಸ್ಪಂದಿಸುತ್ತಿದೆ.

'ಬಚ್​ಪನ್​ ಕಾ ಪ್ಯಾರ್' ಹಾಡಿನ ಮೂಲಕ ಗಮನ ಸೆಳೆದಿದ್ದ ಸಹದೇವ್!

'ಬಚ್​ಪನ್​ ಕಾ ಪ್ಯಾರ್' ಹಾಡಿನ ಮೂಲಕ ಗಮನ ಸೆಳೆದಿದ್ದ ಸಹದೇವ್!

2021ರ ಆರಂಭದಲ್ಲಿ 'ಬಚ್​ಪನ್​ ಕಾ ಪ್ಯಾರ್' ಎನ್ನುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂತೆಯೇ ಈ ಹಾಡು ಹಾಡಿದ ಸಹದೇವ್‌ ಕೂಡ ವೈರಲ್‌ ಆಗಿದ್ದ, 2019ರಲ್ಲಿ ಈ ಹಾಡನ್ನು ಶಾಲಾ ಕೊಠಡಿಯಲ್ಲಿ ಚಿತ್ರೀಕರಿಸಿರುವುದಾಗಿ ತಿಳಿದು ಬಂದಿದೆ. ಸಹದೇವ್ ಶಾಲಾ ಸಮವಸ್ತ್ರದಲ್ಲಿಯೇ ಈ ಹಾಡನ್ನು ಹಾಡಿದ್ದ. ಸಹದೇವ್‌ ಹಾಡಿದ ಪರಿ ಎಲ್ಲರ ಮನಸ್ಸು ಗೆದ್ದಿತ್ತು. ಹಾಗಾಗಿ ತನ್ನ ಪ್ರತಿಭೆಯಿಂದ ಸಹದೇವ್‌ ಬಾಲಿವುಡ್‌ ಮೆಟ್ಟಿಲು ಹತ್ತಲು ಸಾಧ್ಯವಾಗಿತ್ತು.

ಹೊಸ ಟ್ರೆಂಡ್‌ ಹುಟ್ಟು ಹಾಕಿದ್ದ ಸಹದೇವ್!

ಹೊಸ ಟ್ರೆಂಡ್‌ ಹುಟ್ಟು ಹಾಕಿದ್ದ ಸಹದೇವ್!

'ಬಚ್ಪನ್ ಕ ಪ್ಯಾರ್' ಹಾಡಿನಿಂದ ಸಹದೇವ್ ಇಡೀ ದೇಶದಲ್ಲಿ ಹೊಸ ಟ್ರೆಂಡ್​ ಕ್ರಿಯೇಟ್ ಮಾಡಿದ್ದ. ಛತ್ತೀಸ್​​ಘಡ ಮುಖ್ಯಮಂತ್ರಿಗಳು ಕೂಡ ಸಹದೇವ್​ನನ್ನು ಸನ್ಮಾನಿಸಿದ್ದರು. ಇದನ್ನು ಕಂಡ ಬಾಲಿವುಡ್‌ನ ಹೆಸರಾಂತ ರ್ಯಾಪರ್ ಸಿಂಗರ್​ ಬಾದ್​ ಶಾ ಸಹದೇವ್​ಗೆ ತಮ್ಮ ಹಾಡಿನಲ್ಲಿ ಆತನ 'ಬಚ್ಪನ್' ಹಾಡನ್ನು ಸೇರಿಸಿ, ಅದಕ್ಕೆ ಮತ್ತಷ್ಟು ಖ್ಯಾತಿ ಕೊಟ್ಟಿದ್ದರು. ಆ ಬಳಿಕ ಸಹದೇವ್ ಮತ್ತಷ್ಟು ಹೆಸರವಾಸಿ ಆಗಿದ್ದಾನೆ. ಬಾದ್‌ ಶಾ ಮಾಡಿದ ಹಾಡು ಕೂಡ ವೈರಲ್‌ ಆಗಿತ್ತು. ಸದ್ಯ ಆಸ್ಪತ್ರೆ ಸೇರಿರುವ ಸಹದೇವ್‌ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡ್ತಿದ್ದಾರೆ.

More from Filmibeat

English summary
Bachpan Ka Pyar fame Sahdev Dirdo Is Unconscious, Badshah Shares Health Update, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X