ನಿನ್ನೆ ಮೊನ್ನೆ ಬಂದವರ ಮುಂದೆ ಡಮ್ಮಿಯಾದ ಸೂಪರ್ ಸ್ಟಾರ್..!

ಹಣೆಬರಹಕ್ಕೆ ಹೊಣೆ ಯಾರು..? ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ವಿಚಾರದಲ್ಲಿ ಸದ್ಯಕ್ಕೆ ಅನೇಕರನ್ನೂ ಕಾಡುತ್ತಿರುವ ಪ್ರಶ್ನೆ ಇದು. ಯಾಕೆಂದರೆ.. ಅಕ್ಷಯ್ ಕುಮಾರ್ ಸಾಮಾನ್ಯ ನಾಯಕನಲ್ಲ. ಬಾಲಿವುಡ್‌ನ ಸೂಪರ್ ಸ್ಟಾರ್. ವರ್ಷಕ್ಕೆ ನಾಲ್ಕು ಸಿನಿಮಾ ಮಾಡುವ ನಾಯಕ.

ಇನ್ನೂ ಹೆಚ್ಚೇನ್ ಇಲ್ಲ.. ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್... ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ.

bad-newz-has-surpassed-the-collection-of-a-film-featuring-this-superstar

ನಿಮಗೆ ಗೊತ್ತಿರಲಿ.. ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹನ್ನೆರಡು ಸಿನಿಮಾಗಳು ತೆರೆಗೆ ಬಂದಿವೆ. ಈ ಹನ್ನೆರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಪಡೆದಿದ್ದು ಕೇವಲ ಸೂರ್ಯವಂಶಿ ಚಿತ್ರ ಮಾತ್ರ. ಸೂರ್ಯವಂಶಿ ಹೊರತು ಪಡಿಸಿದರೆ ಓ ಮೈ ಗಾಡ್-02 ಮಾತ್ರ ಗೆಲುವನ್ನು ಕಂಡಿದೆ. ಮಿಕ್ಕಂತೆ ಅಕ್ಷಯ್ ಕುಮಾರ್‌ ಗೆ ಸಿಕ್ಕಿದ್ದು ಸೋಲು ಮತ್ತು ಹಿನ್ನೆಡೆ.

ಇವತ್ತು ಅಕ್ಷಯ್ ಕುಮಾರ್ ಅವರ ಸ್ಟಾರ್ ಡಂ ಎಷ್ಟರ ಮಟ್ಟಿಗೆ ಪಾತಾಳಕ್ಕೆ ಕುಸಿದಿದೆ ಅಂದರೆ, ನಿನ್ನೆ..ಮೊನ್ನೆ.. ಸ್ಟಾರ್ ಆದವರೆಲ್ಲ ಅಕ್ಷಯ್ ಕುಮಾರ್‌ ಗೆ ಸೆಡ್ಡು ಹೊಡೆದು ಹೋಗುತ್ತಿದ್ದಾರೆ. ಗಳಿಕೆಯ ವಿಚಾರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕುತ್ತಿದ್ದಾರೆ. ಇದಕ್ಕೆ ವಿಕ್ಕಿ ಕುಶಾಲ್ ಅಭಿನಯದ ಬ್ಯಾಡ್ ನ್ಯೂಜ್ ಸದ್ಯದ ಉದಾಹರಣೆ.

bad-newz-has-surpassed-the-collection-of-a-film-featuring-this-superstar

ಹೌದು, ನಿಮಗೆ ಗೊತ್ತಿರಲಿ.. ವಿಕ್ಕಿ ಕುಶಾಲ್ ಮತ್ತು ತೃಪ್ತಿ ದಿಮ್ರಿ ಅಭಿನಯದ ಬ್ಯಾಡ್ ನ್ಯೂಜ್ ತೆರೆಗೆ ಬರುವ ಒಂದು ವಾರದ ಮುನ್ನ, ಅಕ್ಷಯ್ ಕುಮಾರ್ ಅಭಿನಯದ 'ಸರ್ಫೀರಾ' ತೆರೆಗೆ ಬಂದಿತ್ತು. ತಮಿಳಿನಲ್ಲಿ ಕನ್ನಡಿಗ ಜಿ.ಆರ್. ಗೋಪಿನಾಥ್ ಅವರ ಜೀವನಕಥೆಯನ್ನಾಧರಿಸಿ ಬಂದಿದ್ದ 'ಸೂರರೈ ಪೊಟ್ರು' ಚಿತ್ರದ ಹಿಂದಿ ರಿಮೇಕ್ ಇದು.

ಆದರೆ, ಅಕ್ಷಯ್ ಕುಮಾರ್ ದುರಾದೃಷ್ಟ.. ಸೂರ್ಯ ಚಿತ್ರವನ್ನು ಮೆಚ್ಚಿ ಮೆರೆಸಿದ ಪ್ರೇಕ್ಷಕರು, ಈ ಚಿತ್ರವನ್ನು ಕಣ್ಣೆತ್ತಿ ಕೂಡ ನೋಡಲಿಲ್ಲ. ಇದಕ್ಕೆ ಕಾರಣ ಏನೇ ಇರಬಹುದು. ಆದರೆ.. ಅಕ್ಷಯ್ ಕುಮಾರ್ ಹೆಸರಿಗೆ ಇವತ್ತು ಬೆಲೆ ಇಲ್ಲ ಅನ್ನುವುದನ್ನು ಸಾಬೀತು ಮಾಡಿದ ಈ ಚಿತ್ರ ಮೊದಲ ದಿನ 03 ಕೋಟಿಯನ್ನೂ ಕೂಡ ಗಳಿಸಲಿಲ್ಲ ಅನ್ನುವುದು ಕಹಿ ಸತ್ಯ.

bad-newz-has-surpassed-the-collection-of-a-film-featuring-this-superstar

ಸರ್ಫಿರಾ ಚಿತ್ರದ ಈ ಗಳಿಕೆಯ ತದ್ವಿರುದ್ಧವಾದ ಗಳಿಕೆಯನ್ನು ವಿಕ್ಕಿ ಕೌಶಲ್ ಮತ್ತು ತೃಪ್ತಿ ದಿಮ್ರಿ ಅಭಿನಯದ ಬ್ಯಾಡ್ ನ್ಯೂಜ್ ಮಾಡಿದೆ. ಪ್ರೇರೆಪಿಸುವಂತಹ ಸರ್ಫೀರಾ ಚಿತ್ರವನ್ನು ನೋಡದ ಪ್ರೇಕ್ಷಕರ ವರ್ಗ ವಿಕ್ಕಿ ಮತ್ತು ತೃಪ್ತಿಯ ಹಸಿ ಬಿಸಿ ದೃಶ್ಯವನ್ನೂ ನೋಡಿ ಕೇಕೆ ಹೊಡೆದಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬ್ಯಾಡ್ ನ್ಯೂಜ್ ಮೊದಲ ದಿನ 8.5 ಕೋಟಿ ಹಣ ಕೊಳ್ಳೆ ಹೊಡೆದಿದೆ. ಇನ್ನೂ ಕಳೆದ ಮೂರು ದಿನಗಳ ಗಳಿಕೆಯ ಲೆಕ್ಕಾಚಾರ 30 ಕೋಟಿಯ ಗಡಿಯನ್ನೂ ದಾಟಿದೆ. ವಿಪರ್ಯಾಸ ಅಕ್ಷಯ್ ಕುಮಾರ್ ಅಭಿನಯದ ಸರ್ಫೀರಾ ತೆರೆಗೆ ಬಂದು ಎರಡು ವಾರವಾದರೂ ಇನ್ನೂ ಚಿತ್ರ 30 ಕೋಟಿಯ ಗಡಿಯನ್ನು ತಲುಪಲಿಲ್ಲ. ತೆವಳುತ್ತಾ 27 ಕೋಟಿಯನ್ನಷ್ಟೇ ಗಳಿಸಿದೆ.

ಹೀಗಾಗಿಯೇ ಅಕ್ಷಯ್ ಕುಮಾರ್ ಬಗ್ಗೆ ಹತ್ತಾರು ಮಾತು ಬಾಲಿವುಡ್‌ನಲ್ಲಿಗ ಕೇಳಿ ಬರುತ್ತಿದೆ. ನಿನ್ನೆ..ಮೊನ್ನೆ ಬಂದವರ ಮುಂದೆ ಅಕ್ಷಯ್ ಕುಮಾರ್ ಹೀಗೆ ಹೀನಾಯವಾಗಿ ಸೋಲಬಾರದಿತ್ತು ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

bad-newz-has-surpassed-the-collection-of-a-film-featuring-this-superstar

ಅಂದ್ಹಾಗೇ ಸೋಲು ಅಕ್ಷಯ್ ಕುಮಾರ್‌ ಗೆ ಇದು ಮೊದಲೇನಲ್ಲ. ಈ ಹಿಂದೆ ಒಂದಾದ ಮೇಲೊಂದು 16 ಸೋಲು ಕಂಡ ದಾಖಲೆ ಇವರ ಹೆಸರಿನಲ್ಲಿದೆ. ನಿರಂತರವಾಗಿ ಸೋತು ಹೈರಾಣಾಗಿ ಆ ನಂತರ ಮೈ ಕೊಡವಿ ಎದ್ದು ನಿಂತ ಹೆಗ್ಗಳಿಕೆ ಕೂಡ ಇವರದ್ದೇ. ಹೀಗಾಗಿಯೇ .. ಅಕ್ಷಯ್ ಕುಮಾರ್ ಟೈಮ್ ಸರಿ ಇಲ್ಲ. ಎಲ್ಲವೂ ಸರಿ ಹೋಗಲಿದೆ, ಅಕ್ಷಯ್ ಮತ್ತೆ ಫಿನಿಕ್ಸ್ ನಂತೆ ಎದ್ದು ಬರಲಿದ್ದಾರೆ ಎಂಬ ಮಾತನ್ನೂ ಬಾಲಿವುಡ್‌ನ ಹಿರಿಯ ಪತ್ರಕರ್ತರು ಹೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳು ಕೂಡ ಈ ಮಾತನ್ನೇ ಸೋಶಿಯಲ್ ಮೀಡಿಯಾದಲ್ಲಿ ಪುನರುಚ್ಚಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X