ವಿಡಿಯೋ : 'ಬದ್ಲಾ' ಗೆಟಪ್ ನಲ್ಲಿ ಬಂದ ಅಮಿತಾಭ್ ಬಚ್ಚನ್
'ಪಿಂಕ್' ಸಿನಿಮಾದ ಜೋಡಿ ಮತ್ತೆ ಒಂದಾಗಿದೆ. 'ಬದ್ಲಾ' ಸಿನಿಮಾದ ಮೂಲಕ ನಟ ಅಮಿತಾಭ್ ಬಚ್ಚನ್ ಹಾಗೂ ತಾಪ್ಸಿ ಪನ್ನು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂಬರ್ 2ನಲ್ಲಿದೆ.
ಶಾರೂಖ್ ಖಾನ್ ಅವರ ಪ್ರೊಡಕ್ಷನ್ಸ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾವಾಗಿದ್ದು, ಸ್ಪ್ಯಾನಿಶ್ ಭಾಷೆಯ 'Contratiempo' ಚಿತ್ರದ ರಿಮೇಕ್ ಆಗಿದೆ. ಸುಜಯ್ ಘೋಷ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಬಾದಲ್ ಗುಪ್ತ ಎಂಬ ಲಾಯರ್ ಪಾತ್ರವನ್ನು ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಿರ್ವಹಿಸಿದ್ದಾರೆ. ನೈನಾ ಎಂಬ ಹುಡುಗಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ. ತೊಂದರೆಯಲ್ಲಿರುವ ತಾಪ್ಸಿಯನ್ನು ರಕ್ಷಣೆ ಮಾಡುವ ಲಾಯರ್ ಆಗಿ ಚಿತ್ರದಲ್ಲಿ ಅಮಿತಾಭ್ ಬರುತ್ತಾರೆ.
ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಎರಡು ದಿನಗಳಲ್ಲಿ ಟ್ರೇಲರ್ 11 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಮೂರು ವರ್ಷದ ನಂತರ ಬಂದ ಬಚ್ಚನ್ ಹಾಗೂ ತಾಪ್ಸಿ ಜೋಡಿಯನ್ನು ಪ್ರೇಕ್ಷಕ ವೆಲ್ ಕಮ್ ಮಾಡಿದ್ದಾರೆ. ಮಾರ್ಚ್ 8ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











