ಸದ್ದಿಲ್ಲದೇ ನಟಿಯ ಜೊತೆ ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ ; ಮೊದಲ ಪತ್ನಿ ಯಾರು ?
ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ.
ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇಂತಹ ಸಮಯದಲ್ಲಿ ಸುರಿಯುತ್ತಿರುವ ಕಣ್ಣೀರಿಗೆ ಹೆಗಲು ನೀಡಿದರೆ ಮನಸು ಸಮಾಧಾನಗೊಳ್ಳುತ್ತೆ. ನಮ್ಮ ಕಷ್ಟ ನಷ್ಟ ಆಲಿಸುವ ಜೀವವೊಂದು ಇನ್ನೂ ಇದೆ ಎಂಬ ಭಾವನೆ ಮೂಡುತ್ತೆ. ಕೆಲ ಒಮ್ಮೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ. ಉದಾಹರಣೆಗೆ ಬಾದ್ ಷಾ.

ಹೌದು, ಬಾದ್‌ಷಾ.. ಬಾಲಿವುಡ್‌ನ ''ಡಿಜೆ ವಾಲೆ ಬಾಬು''. ತಮ್ಮ ಚಿನ್ನದ ಕಂಠದಿಂದ ಹಲವರ ಮನ ಗೆದ್ದ ಬಾದ್‌ಷಾ ಇಲ್ಲಿಯವರೆಗೆ 500ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ''ಪ್ರಾಪರ್ ಪಟೋಲಾ''.. ''ಅಭಿ ತೋ ಪಾರ್ಟಿ ಶುರು ಹುಯಿ ಹೈ''..''ಕಾಲಾ ಚಶ್ಮಾ''..''ಗೆಂದಾ ಫೂಲ್''.. ''ಪಾನಿ ಪಾನಿ''..''ಜುಗ್ನು''.. ''ಗೋನ್ ಗರ್ಲ್''.. ಪ್ರಮುಖವಾದವು.
ಕಳೆದ ಒಂದು ಒಂದೂವರೆ ದಶಕದಲ್ಲಿ ತಮ್ಮ ಹಾಡುಗಳ ಮೂಲಕ ಹಲವರ ಹೃದಯ ಗೆದ್ದ ಬಾದ್‌ಷಾ, ಸದ್ಯ ಪಂಜಾಬಿ ಚೆಲುವೆ ಇಶಾ ರಿಖಿ ಜೊತೆ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಮಾತ್ರವಲ್ಲದೇ ಇಡೀ ಬಾಲಿವುಡ್‌ನ್ನೇ ಅಚ್ಚರಿಗೆ ದೂಡಿದ್ದಾರೆ.
ಇಶಾ ರಿಖಿ ಅವರ ತಾಯಿ ಪೂನಂ ರಿಖಿ ಈ ಗುಪ್ತ್ ಮದುವೆಯ ಫೋಟೊಗಳನ್ನು ಹಂಚಿಕೊಂಡ ಮೇಲಷ್ಟೇ ಬಾದ್‌ಷಾ ಮದುವೆಯ ವಿಚಾರ ಜಗಜ್ಜಾಹೀರಾಗಿದ್ದು, ಸದ್ಯ ಹಲವರು ಬಾದ್‌ಷಾ ಅವರಿಗೆ ಶುಭಾಶಯ ಕೋರುತ್ತಿದ್ಧಾರೆ. ಅಭಿಮಾನಿಗಳು ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅಂದ್ಹಾಗೇ ಬಾದ್‌ಷಾ ಅವರನ್ನು ಮದುವೆಯಾದ ಇಶಾ ರಿಖಿ ಪಂಜಾಬ್‌ನ ಚೆಲುವೆ. ಕಲೆಯನ್ನೇ ನಂಬಿಕೊಂಡ ಇಶಾ 2012ರಲ್ಲಿ ಬಂದ ''ಜಾಟ್ ಆಂಡ್ ಜೂಲಿಯೆಟ್'' ಚಿತ್ರದಲ್ಲಿ ಚಿಕ್ಕದಾದ ಪಾತ್ರವನ್ನು ನಿರ್ವಹಿಸಿದ್ದರು. ''ಜಾಟ್ ಬಾಯ್ಸ್ ಪುತ್ತ ಜಟ್ಟನ್ ದೆ'' ಇವರ ಮೊದಲ ಸಿನಿಮಾ. ''ಹ್ಯಾಪಿ ಗೋ ಲಕ್ಕಿ'' , ''ಅರ್ದಾಸ್'', ''ವಾಟ್ ದ ಜಟ್ಟ್'', ಇವರ ಅಭಿನಯದ ಕೆಲ ಪ್ರಮುಖ ಚಿತ್ರಗಳು.

2018ರಲ್ಲಿ ''ನವಾಬ್ ಜಾದೆ'' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಇಶಾ, ಬಾದ್‌ಷಾ ಕಣ್ಣಿಗೆ ಬಿದ್ದಿದ್ದು ಎಲ್ಲಿ ಎನ್ನುವುದು ಗೊತ್ತಿಲ್ಲವಾದರೂ 2022-23ರಲ್ಲಿ ಸ್ನೇಹಿತರ ಪಾರ್ಟಿಯಲ್ಲಿ ಇಬ್ಬರು ಮೊದಲ ಬಾರಿ ಮುಖಾಮುಖಿಯಾದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನುಳಿದಂತೆ ಬಾದ್‌ಷಾ ಈ ಮೊದಲು ಅಂದರೆ 2012ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿದ್ದರು. ಜಾಸ್ಮಿನ್ ಮೂಲತಃ ಲಂಡನ್ ಮೂಲದವರಾಗಿದ್ದು ಫೇಸ್ ಬುಕ್ ಇವರ ಸ್ನೇಹಕ್ಕೆ ವೇದಿಕೆಯಾಗಿತ್ತು. ಇವರಿಬ್ಬರ ಪ್ರೇಮದ ಸಂಕೇತವಾಗಿ ಇವರಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ.
ಹೆಚ್ಚು ಕಡಿಮೆ 6-8 ವರ್ಷ ಜೊತೆಯಲ್ಲಿದ್ದ ಇಬ್ಬರ ನಡುವೆ ಆ ನಂತರ ಬಿರುಕು ಮೂಡಲು ಶುರುವಾಯ್ತು. 2020ರಲ್ಲಿ ಇಬ್ಬರು ಅಧಿಕೃತವಾಗಿ ಬೇರೆಯಾದರು. ವಿಚ್ಚೇದನ ಪಡೆದರು. ತೀರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದ ದಾಂಪತ್ಯ ಜೀವನ ಮುರಿದು ಬಿತ್ತು ಎಂದು ಬಾದ್‌ಷಾ ಹೇಳಿದ್ದರು.
ಹೀಗೆ ಮೊದಲ ಪತ್ನಿಯಿಂದ ದೂರವಾದ ಬಾದ್‌ಷಾ ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮದೇ ''ಟಟೀರಿ'' ಹಾಡು ವಿವಾದಕ್ಕೀಡಾಗಿ ಸದ್ದು ಮಾಡುತ್ತಿರುವ ಸಮಯದಲ್ಲಿ ಸದ್ದು ಗದ್ದಲ ಮಾಡದೇ ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಮೂಲಕ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಇವರ ಮದುವೆಯ ಫೋಟೊಗಳು ಸದ್ಯ ವೈರಲ್ ಆಗಿವೆ.


Click it and Unblock the Notifications











